Thursday, March 24, 2016

ಹೋಳಿ ಹೋಳಿ ಹೋಳಿ ಹೋಳಿ...ಏಳೇಳು ಬಣ್ಣದ ಬೆಳ್ಳಿ ಹೋಳಿ...( ಚಿತ್ರ : ಪ್ರೀತ್ಸೆ )

ಚಿತ್ರ : ಪ್ರೀತ್ಸೆ (೨೦೦೦)
ಸಾಹಿತ್ಯ : ನಾದಬ್ರಹ್ಮ ಹಂಸಲೇಖ...
ಗಾಯಕರು : ಎಸ್.ಪಿ.ಬಿ, ರಾಜೇಶ ಕೃಷ್ಣನ್, ಅನುರಾಧಾ ಮತ್ತು ಚಿತ್ರಾ...


ಹೋಳಿ ಹೋಳಿ ಹೋಳಿ ಹೋಳಿ...
ಏಳೇಳು ಬಣ್ಣದ ಬೆಳ್ಳಿ ಹೋಳಿ...
ಹೋಳಿ ಹೋಳಿ ಹೋಳಿ ಹೋಳಿ....
ರಾಗ ರಂಗಿನ ರಂಗು ರಂಗೋಲಿ....
ಕಾಮನ ಬಿಲ್ಲಿಂದ, ಬಣ್ಣಗಳ ಕದಿಯೋಣ...
ಮೋಡದ ಕಡಲಿಂದ, ಪನ್ನೀರ ಕಡೆಯೋಣ...
ಬಿಳಿ ಹೆತ್ತ ಬಣ್ಣಗಳ, ಬಿಳಿ ಬಿಳಿ ಬಟ್ಟೆಗೆ ಚೆಲ್ಲೋಣ....
ಓಹೋ ಓಕುಳಿ ಆಡೋಣ....


ಹೋಳಿ ಹೋಳಿ ಹೋಳಿ ಹೋಳಿ....
ಏಳೇಳು ಬಣ್ಣದ ಬೆಳ್ಳಿ ಹೋಳಿ....
ಓ...ಹೋಳಿ ಹೋಳಿ ಹೋಳಿ ಹೋಳಿ...
ರಾಗ ರಂಗಿನ ರಂಗು ರಂಗೋಲಿ....
ಅರಿಷಿಣ ಕುಂಕುಮವ, ಒಂದು ಕ್ಷಣ ಬೆರೆಸೋಣ...
ಹಸಿರಿನ ಜೊತೆಯಲ್ಲಿ, ಒಂದು ಕ್ಷಣ ಇರಿಸೋಣ...
ರವಿವರ್ಮ ನಕ್ಕರೆ ಕ್ಷಮಿಸು, ಬಣ್ಣದ ಹಬ್ಬ ಅನ್ನೋಣ...
ಓಹೋ ಓಕುಳಿ ಆಡೋಣ....



ಹೋಳಿ ಹೋಳಿ ಹೋಳಿ ಹೋಳಿ....
ಏಳೇಳು ಬಣ್ಣದ ಬೆಳ್ಳಿ ಹೋಳಿ....
ಓ...ಹೋಳಿ ಹೋಳಿ ಹೋಳಿ ಹೋಳಿ...



ಬಣ್ಣ ಕಂಡ್ರೆ, ಕುಣಿಯೋಣ, ಕುಣಿಯೋಣ... 
ಬಳಿಯಲು ಬಂದ್ರೆ, ಓಡೋಣ, ಓಡೋಣ...
ಬೇಡ ಅನ್ನೋ, ಈ ಭಯವೇ, ಈ ಭಯವೇ....
ಬೇಕು ಅನ್ನೋ, ಬಿನ್ನಾಣ, ಓಹೋ ಬಿನ್ನಾಣ...
ತನುವೆಲ್ಲ ನವರಂಗು, ಮನಸೆಲ್ಲ ಬೆಳದಿಂಗಳು...
ಈ ಹಬ್ಬ ಧರೆಗಿತ್ತ, ಕೃಷ್ಣನಿಗೆ ನಮನಗಳು....
ಮನೆ ಮನೆಗೊಬ್ಬ.....
ರಂಗಿನ ರಂಗ ರಂಗಿನ ರಂಗ....
ಹುಟ್ಟುವನೆಂದು, ಗೋಕುಲ ರಂಗ...
ಹಿಡಿಯೋ, ಹಚ್ಚೋ...
ಹಿಡಿಯೋ ಹಚ್ಚೋ... ಹಿಡಿಯೋ ಹಚ್ಚೋ...



ಹೋಳಿ ಹೋಳಿ ಹೋಳಿ ಹೋಳಿ....
ಏಳೇಳು ಬಣ್ಣದ ಬೆಳ್ಳಿ ಹೋಳಿ....
ಹೋಳಿ ಹೋಳಿ ಹೋಳಿ ಹೋಳಿ...

ಕಣ್ಣಲ್ಲೆ ಬೌಲಿಂಗ್ ಮಾಡೋ, ಕಣ್ಣಲ್ಲೆ ಬ್ಯಾಟಿಂಗ್ ಮಾಡೋ...
ಗೋಪಿಕಾ ಸ್ತ್ರೀ ನೋಡು, ಸೆಂಚುರೀ ಶ್ರೀಕೃಷ್ಣನ ನೋಡು...
ಒಂದೇ ದಿನ,ಒಂದೇ ಬಾಲ್,ಒಂದೇ ರನ್,ಒಂದೇ ವಿಕೇಟ್,
ಹೊಡ್ದ್ರೇ ವಿನ್ನು, ಬಿಟ್ರೇ ಡ್ರಾ,ಮತ್ತೇ ಬಾಲ್ ಫೇಸ್ ಮಾಡು,
ಬೋಲ್ಡ್, ಕ್ಲೀನ್ ಬೋಲ್ಡ್.....



ಒಲವು ಚೆಲುವು ಒಂದಾಗಿ, ಆ....ಆ...ಆ...
ನಲಿದಿದೆ ಇಲ್ಲಿ ಹೆಣ್ಣಾಗಿ, ಆ...ಆ...ಆ....
ಹೆಣ್ಣ ಕಂಡ ಬಣ್ಣಗಳೇಲ್ಲಾ... ಆ....ಆ...ಆ...
ಶರಣು ಅಂದವೋ ಮಂಕಾಗಿ... ಓಓಓಓ...
ಕೃಷ್ಣಯ್ಯ ಬಾರಯ್ಯ ಒಲವಿನ ಹಬ್ಬಕ್ಕೆ....
ಮುತ್ತಿನ, ಜೇನಿನ ಚೆಲುವಿನ್ ಊಟಕ್ಕೆ....
ಹಬ್ಬದ ಹಬ್ಬ.... ಒಲವಿನ ಹಬ್ಬ... ಒಲವಿನ ಹಬ್ಬ....
ತುಂಬಿದೆ ಬಾಳಿನ, ಹಬ್ಬ ದಿಬ್ಬ....
ಚೆಲ್ಲೋ, ಚೆಲ್ಲೋ... ಬಣ್ಣ ಚೆಲ್ಲೋ... ಬಣ್ಣ ಚೆಲ್ಲೋ...



ಹೋಳಿ ಹೋಳಿ ಹೋಳಿ ಹೋಳಿ....
ಏಳೇಳು ಬಣ್ಣದ ಬೆಳ್ಳಿ ಹೋಳಿ....
ಓ...ಹೋಳಿ ಹೋಳಿ ಹೋಳಿ ಹೋಳಿ...
ರಾಗ ರಂಗಿನ ರಂಗು ರಂಗೋಲಿ....
ಕೋಗಿಲೆ ಕೊಳಳಲ್ಲಿ, ಪಂಚಮವ ಹಿಡಿಸೋಣ...
ಮಯೂರದ ಮೈಯಿಂದ, ಲಾಸಿಮೆಯ ಬೆರಸೋಣ....
ಹದ ಮೀರದಂತ ಹೂಗಳ, ಬಣ್ಣದ ಅಡಿಗೆಯ ಕಲಿಯೋಣ...
ಕಾಮದ ಹೋಳಿಗೆ ಮಾಡೋಣ.....



ಹೋಳಿ ಹೋಳಿ ಹೋಳಿ ಹೋಳಿ....
ಏಳೇಳು ಬಣ್ಣದ ಬೆಳ್ಳಿ ಹೋಳಿ....
ಓ...ಹೋಳಿ ಹೋಳಿ ಹೋಳಿ ಹೋಳಿ...

No comments: