Tuesday, March 29, 2016

ಒಂದು ದಳದ ಕಮಲದಲ್ಲಿ ಹೊಮ್ಮಿಬಂದ ಲಿಂಗವೇ, ಮಧ್ಯಪ್ರಾಣ ಲಿಂಗವೇ, ಸತ್ಯಶಾಂತಿ ಲಿಂಗವೇ... (ಶಿವ ಸ್ತುತಿ...)

( ಶಿವ ಸ್ತುತಿ...)

ಒಂದು ದಳದ ಕಮಲದಲ್ಲಿ ಹೊಮ್ಮಿಬಂದ ಲಿಂಗವೇ,
ಮಧ್ಯಪ್ರಾಣ ಲಿಂಗವೇ, ಸತ್ಯಶಾಂತಿ ಲಿಂಗವೇ...
ಓಂ ನಮಃ ಶಿವಾಯ | ಓಂ ನಮಃ ಶಿವಾಯ
ಓಂ ನಮಃ ಶಿವಾಯ | ಓಂ ನಮಃ ಶಿವಾಯ

ಎರಡು ದಳದ ಕಮಲದಲ್ಲಿ ಎದ್ದುಬಂದ ಲಿಂಗವೇ,
ಆತ್ಮಜ್ಯೋತಿ ಲಿಂಗವೇ, ಶಿವನರೂಪಿ ಲಿಂಗವೇ...
ಓಂ ನಮಃ ಶಿವಾಯ | ಓಂ ನಮಃ ಶಿವಾಯ
ಓಂ ನಮಃ ಶಿವಾಯ | ಓಂ ನಮಃ ಶಿವಾಯ

ಮೂರು ದಳದ ಕಮಲದಲ್ಲಿ ಮೂಡಿಬಂದ ಲಿಂಗವೇ,
ಮೂರು ಕಣ್ಣ ಲಿಂಗವೇ, ಮುಕ್ಕೋಟಿ ಲಿಂಗವೇ...
ಓಂ ನಮಃ ಶಿವಾಯ | ಓಂ ನಮಃ ಶಿವಾಯ
ಓಂ ನಮಃ ಶಿವಾಯ | ಓಂ ನಮಃ ಶಿವಾಯ

ನಾಲ್ಕು ದಳದ ಕಮಲದಲ್ಲಿ ನಾಗಜ್ಯೋತಿ ಲಿಂಗವೇ,
ನಾದಪ್ರಿಯ ಲಿಂಗವೇ, ಭಕ್ತಪ್ರಿಯ ಲಿಂಗವೇ...
ಓಂ ನಮಃ ಶಿವಾಯ | ಓಂ ನಮಃ ಶಿವಾಯ
ಓಂ ನಮಃ ಶಿವಾಯ | ಓಂ ನಮಃ ಶಿವಾಯ

ಐದು ದಳದ ಕಮಲದಲ್ಲಿ ಐಕ್ಯವಾದ ಲಿಂಗವೇ,
ಪಂಚಮುಖದ ಲಿಂಗವೇ, ಪಂಚಪ್ರಾಣ ಲಿಂಗವೇ...
ಓಂ ನಮಃ ಶಿವಾಯ | ಓಂ ನಮಃ ಶಿವಾಯ
ಓಂ ನಮಃ ಶಿವಾಯ | ಓಂ ನಮಃ ಶಿವಾಯ

ಆರು ದಳದ ಕಮಲದಲ್ಲಿ ಹಾರಿಬಂದ ಲಿಂಗವೇ,
ಹರನ ಆತ್ಮ ಲಿಂಗವೇ, ಅಡವಿಸ್ವಾಮಿ ಲಿಂಗವೇ...
ಓಂ ನಮಃ ಶಿವಾಯ | ಓಂ ನಮಃ ಶಿವಾಯ
ಓಂ ನಮಃ ಶಿವಾಯ | ಓಂ ನಮಃ ಶಿವಾಯ

ಏಳು ದಳದ ಕಮಲದಲ್ಲಿ ಎದ್ದುಬಂದ ಲಿಂಗವೇ,
ಏಳುಲೋಕ ಲಿಂಗವೇ, ಏಳು ತತ್ತ್ವ ಲಿಂಗವೇ...
ಓಂ ನಮಃ ಶಿವಾಯ | ಓಂ ನಮಃ ಶಿವಾಯ
ಓಂ ನಮಃ ಶಿವಾಯ | ಓಂ ನಮಃ ಶಿವಾಯ

ಎಂಟು ದಳದ ಕಮಲದಲ್ಲಿ ಘಂಟನಾದ ಲಿಂಗವೇ,
ಅಷ್ಟದಿಕ್ಕು ಲಿಂಗವೇ, ನಿನ್ನ ವಶವು ಲಿಂಗವೇ...
ಓಂ ನಮಃ ಶಿವಾಯ | ಓಂ ನಮಃ ಶಿವಾಯ
ಓಂ ನಮಃ ಶಿವಾಯ | ಓಂ ನಮಃ ಶಿವಾಯ

ಒಂಭತ್ತು ದಳದ ಕಮಲದಲ್ಲಿ ತುಂಬಿ ಬಂದ ಲಿಂಗವೇ,
ಒಂಭತ್ತು ಗ್ರಹವು ಕಾಡದಂತೆ, ಕಾಯೋ ನಮ್ಮ್ ಲಿಂಗವೇ...
ಓಂ ನಮಃ ಶಿವಾಯ | ಓಂ ನಮಃ ಶಿವಾಯ
ಓಂ ನಮಃ ಶಿವಾಯ | ಓಂ ನಮಃ ಶಿವಾಯ

ಹತ್ತು ದಳದ ಕಮಲದಲ್ಲಿ ಹತ್ತಿಬಂದ ಲಿಂಗವೇ,
ಹತ್ತು ತಲೆಯ ರಾವಣಗೊಲಿದ, ಕರುಣಾಳು ಲಿಂಗವೇ...
ಓಂ ನಮಃ ಶಿವಾಯ | ಓಂ ನಮಃ ಶಿವಾಯ
ಓಂ ನಮಃ ಶಿವಾಯ | ಓಂ ನಮಃ ಶಿವಾಯ

No comments: