Friday, March 25, 2016

ಕರುಣೆಯಿಲ್ಲದ ಧರಣಿಯ ಕಂಡೆ, ಕೆಂಡವ ಕಾರುವ ಗಗನವ ಕಂಡೆ ಚಿತ್ರ : ಅಸುರ (೨೦೦೧)

ಚಿತ್ರ : ಅಸುರ (೨೦೦೧)
ಸಾಹಿತ್ಯ : ಕೆ.ಕಲ್ಯಾಣ್...
ಗಾಯಕರು : ರಾಜೇಶ್ ಕೃಷ್ಣನ್ ಮತ್ತು ನಂದಿತಾ....
--------------------------------------------
ಕಾರುಣ್ಯ ತುಂಬಿದ ಧಾರುಣಿ ಕಂಡೇ....ಏ....
ಶಾಂತಿಯ ಸಾರುವ ಬಾನನು ಕಂಡೆ....
ಉಸಿರನು ಕಾಯುವ ಗಾಳಿಯ ಕಂಡೆ....ಏ...
ಬಾಳನು ಬೆಳಗುವ ಜ್ಯೋತಿಯ ಕಂಡೆ...

ಕಾರುಣ್ಯ ತುಂಬಿದ ಧಾರುಣಿ ಕಂಡೇ | 
ಶಾಂತಿಯ ಸಾರುವ ಬಾನನು ಕಂಡೆ |
ಉಸಿರನು ಕಾಯುವ ಗಾಳಿಯ ಕಂಡೆ |
ಪಾಪವ ತೊಳೆಯುವ ಗಂಗೆಯ ಕಂಡೇ....ಹೇ.....
-------------------------------------------
ಕರುಣೆಯಿಲ್ಲದ ಧರಣಿಯ ಕಂಡೆ, ಕೆಂಡವ ಕಾರುವ ಗಗನವ ಕಂಡೆ...
ವಿಷವನು ತೂರುವ ಗಾಳಿಯ ಕಂಡೆ, ಎದೆಯನು ಉರಿಸೋ ಬೆಂಕಿಯ ಕಂಡೆ...
ಸುಳಿಯಲಿ ಮುಳುಗಿಸೊ ನೀರನು ಕಂಡೆ, ಬೊಗಸೆಯ ನೀರಲೂ ಸುಳಿಯನು ಕಂಡೆ...
ಹೂವಿನ ಎದೆಯಲಿ ಮುಳ್ಳನು ಕಂಡೆ, ಹಿಮದಲಿ ಜ್ವಾಲಾ ಮುಖಿಯನು ಕಂಡೆ....
ರೆಕ್ಕೆಯ ಬಿಚ್ಚದ ಹಕ್ಕಿಯ ಕಂಡೆ, ಹಾಡಲು ಬಾರದ ಕೋಗಿಲೆ ಕಂಡೆ...
ಮುತ್ತೇ ಇಲ್ಲದ ಕಡಲನು ಕಂಡೆ, ಗಂಧವ ಚೆಲ್ಲದ ಹೂಗಳ ಕಂಡೆ....
ಜೇನನು ಹೀರದ ದುಂಬಿಯ ಕಂಡೆ, ದಿನಗಳ ನುಂಗುವ ಕ್ಷಣಗಳ ಕಂಡೆ....
ಧಿಕ್ಕುಗಳಿಲ್ಲದ ದಾರಿಯ ಕಂಡೆ, ದಾರಿಗಳಿಲ್ಲದ ಧಿಕ್ಕನು ಕಂಡೆ....
ಮೋಡದ ಹನಿಯಲು ಬೇವರನು ಕಂಡೆ, ಗಾಳಿಯ ಎದೆಯಲೂ ನಡುಕವ ಕಂಡೆ...
ಮಳೆಯ ಬಿಲ್ಲಲೂ ಕೊಳೆಯನು ಕಂಡೆ, ಇಬ್ಬನಿ ಕಣ್ಣಲೂ ಕಂಬನಿ ಕಂಡೆ....
ಗರ್ಭದ ಒಳಗೂ ಅಳುವನು ಕಂಡೆ, ಕೆಚ್ಚಲ ಹಾಲಲೂ ವಿಷವನು ಕಂಡೆ...
ಕಬ್ಬಿನ ಎದೆಯಲಿ ಬೇವನು ಕಂಡೆ, ನಗುವಿನ ಹೆಸರಲಿ ನೋವನು ಕಂಡೆ...
ಸಂಭಂದಗಳಲಿ ಬಂಧನ ಕಂಡೆ, ಬಂಧನ ಬಿಡಿಸುವ ಕಂಪನ ಕಂಡೆ....
ಜೀವನಕ್ಕೊಂದು ಯೌವನ ಕಂಡೆ, ಯೌವನಕ್ಕೊಂದು ಜೀವನ ಕಂಡೆ....
ಚಪ್ಪಾಳೆಗಳಲೂ ಸಿಡಿಲನು ಕಂಡೆ, ಬೇವರಿಳಿಸುವ ಬೆಳದಿಂಗಳ ಕಂಡೆ....
ಅಬುಡುಗಚ್ಚುವ ನಿದ್ದೆಯ ಕಂಡೆ, ಪಲ್ಲವಿ ಇರದ ಚರಣವ ಕಂಡೆ....
ಗಂಡೆದೆಯಲ್ಲೂ ಗ್ರಹಣವ ಕಂಡೆ, ಸ್ವತಂತ್ರವಿಲ್ಲದ ಗಾಳಿಯ ಕಂಡೆ.....
ಬಾನೇ ಇಲ್ಲದ ಬಾನಾಡಿ ಕಂಡೆ, ಜಾತಕವಿಲ್ಲದ ಕನಸನು ಕಂಡೆ....
ಜ್ಞ್ಯಾಪಕವಿಲ್ಲದ ನೆನಪನು ಕಂಡೆ, ತೂಕವೆ ಇಲ್ಲದ ಮಾತನು ಕಂಡೆ....
ಸಿಡಿಲೆರೆಯುವ ಬಿರು ಮೌನವ ಕಂಡೆ.... 
ಚೆಲುವಿನ ಮುಖದಲಿ ಕುರೂಪ ಕಂಡೆ, ಒಲವಿನ ವ್ಯಾಘ್ರ ಸ್ವರೂಪ ಕಂಡೆ...
ರುಚಿಗಳೇ ಇಲ್ಲದ ಊಟವ ಕಂಡೆ, ಅಭಿರುಚಿ ಕಾಣದ ಪಾಟವ ಕಂಡೆ...
ಅಳುವ ವಯಸಲಿ ಆಸೆಯ ಕಂಡೆ... ಆಡೋ ವಯಸಲಿ ಅವನತಿ ಕಂಡೆ....
ಕಲಿಯೋ ವಯಸಲಿ ಬಲಿಯನು ಕಂಡೆ...
ಒಂಟಿ ತನದಲಿ ಗಾಯವ ಕಂಡೆ... ಜಂಟಿ ತನದಲಿ ಮಾಯವ ಕಂಡೆ...
ನವಿಲು ಕಾಣದ ಗರಿಯನು ಕಂಡೆ, ಗುರುವೆ ಇಲ್ಲದ ಗುರಿಯನು ಕಂಡೆ...
ಸೂರ್ಯನ ಕಣ್ಣಲಿ ದೇವವ ಕಂಡೆ, ಇರುಳಲಿ ಬೆಳಗಿನ ಜಾವವ ಕಂಡೆ....
ರಾಜರು ಕಟ್ಟಿದ ಕೋಶವ ಕಂಡೆ, ಕೋಶವ ಮುರಿಯೋ ಶಾಸನ ಕಂಡೆ...
ದಾಸರು ಕಾಣದ ಪದವನು ಕಂಡೆ, ಬಡತನಕ್ಕಿಂತಲೂ ಬಡತನ ಕಂಡೆ...
ಧರ್ಮರಾಯನಲೂ ಸುಳ್ಳನು ಕಂಡೆ, ಆಂಜನೇಯಲೂ ಅಹಃ ಕಂಡೆ....
ತಾಯಿ ಮಾತಲೂ ತಪ್ಪನು ಕಂಡೆ, ಭುವನೇಶ್ವರಿಯಲೂ ಬೇಧವ ಕಂಡೆ....
ನೆತ್ತರು ತುಂಬಿದ ಅನ್ನವ ಕಂಡೆ, ಹುಟ್ಟು-ಸಾವಿನ ನಂಟನು ಕಂಡೆ...
ಧಗೆಯಲಿ ಚಿಗುರಿನ ಸ್ಪರ್ಶ ಕಂಡೆ, ಹಗೆಯಲಿ ಸಲ್ಲದ ಹರ್ಷ ಕಂಡೆ....
ಸಹಿಸುವ ಆಸರೆಯೊಂದು ಕಂಡೆ, ಧಹಿಸುವ ಧಮನಿಗಳನ್ನು ಕಂಡೆ...
ಸ್ನೇಹದ ಕೋಟಿ ಪವಾಡ ಕಂಡೆ, ದ್ರೋಹದ ಹೊಸ ಮುಖವಾಡ ಕಂಡೆ....
ಇಳಿಸಲು ಆಗದ ಹೊರೆಯನು ಕಂಡೆ, ಹಣೆಯ ಬರಹಕೆ ಪ್ರತಿ ಹೊಣೆಯನು ಕಂಡೆ...
ಛಲದಾ ಮನಸಿಗೆ ಛಾವಡಿ ಕಂಡೆ, ಮನಸಾ ಕುಧಿಸೋ ಲೇವಡಿ ಕಂಡೆ....
ಸೋಲುಗಳಲ್ಲೆ ಗೆಲುವನು ಕಂಡೆ, ಗೆಲುವಲೇ ಸೋಲಿನ ರುಚಿಯನು ಕಂಡೆ....
ಕಂಗಳ ತಿವಿಯುವ ಕನ್ನಡಿ ಕಂಡೆ, ಬದುಕನೆ ಕಲಕುವ ಮುನ್ನುಡಿ ಕಂಡೆ.....
ಇಳಿಜಾರಿನಲಿ ದಿನ್ನೇಯ ಕಂಡೆ, ದಿನ್ನೇಯಲಿ ಇಳಿಜಾರನು ಕಂಡೆ....
ಹೆಳವನ ದಾರಿಯ ಬೇಧವ ಕಂಡೆ, ಮೂಗನ ಎದೆಯಲಿ ರಾಗವ ಕಂಡೆ....
ಮೂರ್ಖನ ಕೈಯಲಿ ಮಾರ್ಗವ ಕಂಡೆ, ಕಾಲದ ಕೈಯಲಿ ಖಢ್ಗವ ಕಂಡೆ....
ಜೊತೆಯಲಿ ಬಾಳುವ ಕಥೆಗಳ ಕಂಡೆ, ಕಥೆಯಾಗಿರುವಾ ಜೊತೆಯಾ ಕಂಡೆ....
ಜೀವನದೂದ್ದಕೂ ನೋವನು ಕಂಡೆ,
ಆದರೂ ಪ್ರೀತಿಯೂ ಕಾಣಲಿಲ್ಲಾ, ಬಯಸಿದೊಂದು ಸಿಗಲಿಲ್ಲಾ....
ಸತ್ತೂ ಬದುಕೋ ಬದುಕೇಕಿನ್ನೂ,
ಪ್ರೀತಿಸೋ ಮರಣ ಮರಣಾ ಕಂಡೆ...ಏ....ಹೇ...ಏ.....

No comments: