Thursday, March 31, 2016

ನೀನು ನೀನೇ ಇಲ್ಲಿ ನಾನು ನಾನೇ ... ನೀನು ನೀನೇ ಇಲ್ಲಿ ನಾನು ನಾನೇ ...ಚಿತ್ರ : ಗಡಿಬಿಡಿಗಂಡ (1993)

ಚಿತ್ರ : ಗಡಿಬಿಡಿಗಂಡ (1993)
ಸಾಹಿತ್ಯ : ನಾದಬ್ರಹ್ಮ ಹಂಸಲೇಖ...
ಗಾಯಕರು : ಡಾ" ಎಸ್.ಪಿ.ಬಿ....
-------------------------------------------------

ಹ್ಮ್...... ಹಯ್ಯೋ....!
ನೀನು ನೀನೇ ಇಲ್ಲಿ ನಾನು ನಾನೇ ...
ನೀನು ನೀನೇ ಇಲ್ಲಿ ನಾನು ನಾನೇ...
ನೀನು ಎಂಬುವನಿಲ್ಲಿ ನಾದವಾಗಿರುವಾಗ 
ನಾನೇನು ಹಾಡಲಯ್ಯ ದಾಸಾನುದಾಸ...

ನೀನು ನೀನೇ ಇಲ್ಲಿ ನಾನು ನಾನೇ 
ನೀನು ನೀನೇ ಇಲ್ಲಿ ನಾನು ನಾನೇ
ನೀನು ಎಂಬುವನಿಲ್ಲಿ ನಾದವಾಗಿರುವಾಗ 
ನಾನೇನು ಹಾಡಲಯ್ಯ ದಾಸಾನುದಾಸ....

ನೀನು ನೀನೇ ಇಲ್ಲಿ ನಾನು ನಾನೇ 
ನೀನು ನೀನೇ ಇಲ್ಲಿ ನಾನು ನಾನೇ

ನಾರದ ಶ್ರುತಿ ನೀಡಿ ತುಂಬುರ ಸ್ಮೃತಿ ಹಾಡಿ,
ಕೈಲಾಸವೆಲ್ಲ ನಾದೋಪಾಸನೆಯಾಗಿ....
ನಾರದ ಶ್ರುತಿ ನೀಡಿ ತುಂಬುರ ಸ್ಮೃತಿ ಹಾಡಿ,
ಕೈಲಾಸವೆಲ್ಲ ನಾದೋಪಾಸನೆಯಾಗಿ....
ಷಣ್ಮುಖಪ್ರಿಯ ರಾಗ..... ಷಣ್ಮುಖಪ್ರಿಯ ರಾಗ 
ಮಾರ್ಗ ಹಿಂದೋಳವಾಗಿ, ನಡೆಸಿದೆ ದರ್‌ಬಾರು ರಾಗ..
ಹಾಡುವೆಯಾ ಪಲ್ಲವಿಯಾ..
ಕೇಳುವೆಯಾ, ಮೇಲೆ ಏಳುವೆಯಾ...

ನೀನು ಎಂಬುವನಿಲ್ಲಿ ನಾದವಾಗಿರುವಾಗ
ನಾನೇನು ಹಾಡಲಯ್ಯ ದಾಸಾನುದಾಸ....
ನೀನು ನೀನೇ ಇಲ್ಲಿ ನಾನು ನಾನೇ 
ನೀನು ನೀನೇ ಇಲ್ಲಿ ನಾನು ನಾನೇ....

ಈ ಸ್ವರವೆ ವಾದ , ಈಶ್ವರ ನಿನಾದ....
ಜತಿಗತಿಜ ಕಾಗುಣಿತ ವೇದ....
ಶಿವಸ್ಮರಣೆ ಸಂಗೀತ ಸ್ವಾದ ...
ಗಮಕಗಳ ಪಾಂಡಿತ್ಯ ಶೋಧ....
ಸುಮತಿಗಳ ಸುಜ್ಞಾನ ಬೋಧ ....
ಪಲುಕುಗಳ ವಿಚಾರಣೆ ,ಕ್ಷಮಾಪಣೆ ,ವಿಮೋಚನೆ....

ಗೆಲುವುಗಳ ಆಲೋಚನೆ ,ಸರಸ್ವತಿ, ಸಮರ್ಪಣೆ....
ನವರಸ ಅರಗಿಸಿ ಪರವಶ ಪಳಗಿಸಿ ಅಪಜಯ ಅಡಗಿಸಿ 
ಜಯಿಸಲು ಇದು ಶಕುತಿಯ ಯುಕುತಿಯ ಪರಮಾರ್ಥ....

ಗಣಗಣ ಶಿವಗಣ ನಿಜಗುಣ ಶಿವಮನ ನಲಿದರೆ ಒಲಿದರೆ 
ಕುಣಿದರೆ ಅದೆ ಭಕುತಿಯ ಮುಕುತಿಯ ಪರಮಾರ್ಥ....
ನೀನು ನೀನೇ ಇಲ್ಲಿ ನಾನು ನಾನೇ
ಸಾ ಸಮಗಸರೀ ನಿಸಸನಿದ ದದನಿದಮ ಮಗಮದಾದಾದ್ದ ದಮದ 
ನೀನಿ ದದಾನಿ ಸಮಾಗ ನಿದದನಿ ದಮಪಸ 
ನೀನು ನೀನೇ ಇಲ್ಲಿ ನಾನು ನಾನೇ...

ದನಿಸಗ ನಿಸ್ಸ ದನಿಸಗ ನಿಸಗಮ ಗಮ
ನಿಸಗಮ ಗಾಗಾ ಮಾಮಾ
ಗಸಗಸಗಸಗಸ ಮಗಮಗಮಗಮಗ
ಸಸಾ ಮಗ ಮಗ ಮಗ ಸನಿದಮಗಸ
ನೀನು ನೀನೇ ಇಲ್ಲಿ ನಾನು ನಾನೇ...

ಮಗಮಗಮಗ ಗಮಗಮಗಮಗ
ದಮದಮದಮ ಮನಿಸನಿಸನಿಸ
ಸಸಸ ಸಾಸ ಸಸ ಸಗಸನಿ ನಿಸನಿದ
ಸಸಾಸ ನಿದನಿ ಸಾನಿದಮದಮಗಸ
ಸಗಮಗ ಗಮದನಿ ಮದನಿಸ ಗಸಸನಿಸ ದನಿ 
ಮದ ಮದನಿಸದ
ನೀನು ನೀನೇ ಇಲ್ಲಿ ನೀನು ನೀನೇ...

ಸಾ ಪಾ ಸಾ
ಸನಿಪಮಗಸನಿಪ ಸಾ
ಸಗಮಪಗ ಸಗಮಪಮಗ ಸಗಮಪ ಮಪಮಪ ನಿನಿಪಮಪಾ
ಸರಿಗಪದಪಗಪ ದಾ ಸದದಾ
ದಪಗಪಗರಿ ಸಸರಿಗರಿ
ಸಾರಿಮಪನಿಸ ಸರಿಮಪನಿಸ
ನಿಸರಿಪಮ ರಿಪಮ ರಿಸರಿ
ಸಾ ಮಸ ಮಸ ಮಪದಸರಿ ರೀ ಸಾ ದಪಮ
ಮಪದದ್ದಾಪ ಮಪದದ್ದಾಪ ಮಪದದ್ದಾಪಮ ಪಸದಾ
ಪಮಪದಸಾ ಪಮಪದರೀ
ಸರಿರಿ ಸರಿರಿ ಸರಿರಿ ಸರಿರಿ ಸರಿಸ ದಸರಿ ದಸರಿ ಪದಸರಿ ರಿಮಪದಸರಿ 
ರಿಮಪದಸರಿ ಸರಿಮಪದಸರಿ ಪನಿಸ ಗಪದ ರಿಮಪ ಸಗಮಗ ಸಮಗ ಸನಿದಮಗ
ನೀನು ನೀನೇ ಇಲ್ಲಿ ನಾನು ನಾನೇ
ನೀನು ನೀನೇ ಇಲ್ಲಿ ನಾನು ನಾನೇ.....

Tuesday, March 29, 2016

ಒಂದು ದಳದ ಕಮಲದಲ್ಲಿ ಹೊಮ್ಮಿಬಂದ ಲಿಂಗವೇ, ಮಧ್ಯಪ್ರಾಣ ಲಿಂಗವೇ, ಸತ್ಯಶಾಂತಿ ಲಿಂಗವೇ... (ಶಿವ ಸ್ತುತಿ...)

( ಶಿವ ಸ್ತುತಿ...)

ಒಂದು ದಳದ ಕಮಲದಲ್ಲಿ ಹೊಮ್ಮಿಬಂದ ಲಿಂಗವೇ,
ಮಧ್ಯಪ್ರಾಣ ಲಿಂಗವೇ, ಸತ್ಯಶಾಂತಿ ಲಿಂಗವೇ...
ಓಂ ನಮಃ ಶಿವಾಯ | ಓಂ ನಮಃ ಶಿವಾಯ
ಓಂ ನಮಃ ಶಿವಾಯ | ಓಂ ನಮಃ ಶಿವಾಯ

ಎರಡು ದಳದ ಕಮಲದಲ್ಲಿ ಎದ್ದುಬಂದ ಲಿಂಗವೇ,
ಆತ್ಮಜ್ಯೋತಿ ಲಿಂಗವೇ, ಶಿವನರೂಪಿ ಲಿಂಗವೇ...
ಓಂ ನಮಃ ಶಿವಾಯ | ಓಂ ನಮಃ ಶಿವಾಯ
ಓಂ ನಮಃ ಶಿವಾಯ | ಓಂ ನಮಃ ಶಿವಾಯ

ಮೂರು ದಳದ ಕಮಲದಲ್ಲಿ ಮೂಡಿಬಂದ ಲಿಂಗವೇ,
ಮೂರು ಕಣ್ಣ ಲಿಂಗವೇ, ಮುಕ್ಕೋಟಿ ಲಿಂಗವೇ...
ಓಂ ನಮಃ ಶಿವಾಯ | ಓಂ ನಮಃ ಶಿವಾಯ
ಓಂ ನಮಃ ಶಿವಾಯ | ಓಂ ನಮಃ ಶಿವಾಯ

ನಾಲ್ಕು ದಳದ ಕಮಲದಲ್ಲಿ ನಾಗಜ್ಯೋತಿ ಲಿಂಗವೇ,
ನಾದಪ್ರಿಯ ಲಿಂಗವೇ, ಭಕ್ತಪ್ರಿಯ ಲಿಂಗವೇ...
ಓಂ ನಮಃ ಶಿವಾಯ | ಓಂ ನಮಃ ಶಿವಾಯ
ಓಂ ನಮಃ ಶಿವಾಯ | ಓಂ ನಮಃ ಶಿವಾಯ

ಐದು ದಳದ ಕಮಲದಲ್ಲಿ ಐಕ್ಯವಾದ ಲಿಂಗವೇ,
ಪಂಚಮುಖದ ಲಿಂಗವೇ, ಪಂಚಪ್ರಾಣ ಲಿಂಗವೇ...
ಓಂ ನಮಃ ಶಿವಾಯ | ಓಂ ನಮಃ ಶಿವಾಯ
ಓಂ ನಮಃ ಶಿವಾಯ | ಓಂ ನಮಃ ಶಿವಾಯ

ಆರು ದಳದ ಕಮಲದಲ್ಲಿ ಹಾರಿಬಂದ ಲಿಂಗವೇ,
ಹರನ ಆತ್ಮ ಲಿಂಗವೇ, ಅಡವಿಸ್ವಾಮಿ ಲಿಂಗವೇ...
ಓಂ ನಮಃ ಶಿವಾಯ | ಓಂ ನಮಃ ಶಿವಾಯ
ಓಂ ನಮಃ ಶಿವಾಯ | ಓಂ ನಮಃ ಶಿವಾಯ

ಏಳು ದಳದ ಕಮಲದಲ್ಲಿ ಎದ್ದುಬಂದ ಲಿಂಗವೇ,
ಏಳುಲೋಕ ಲಿಂಗವೇ, ಏಳು ತತ್ತ್ವ ಲಿಂಗವೇ...
ಓಂ ನಮಃ ಶಿವಾಯ | ಓಂ ನಮಃ ಶಿವಾಯ
ಓಂ ನಮಃ ಶಿವಾಯ | ಓಂ ನಮಃ ಶಿವಾಯ

ಎಂಟು ದಳದ ಕಮಲದಲ್ಲಿ ಘಂಟನಾದ ಲಿಂಗವೇ,
ಅಷ್ಟದಿಕ್ಕು ಲಿಂಗವೇ, ನಿನ್ನ ವಶವು ಲಿಂಗವೇ...
ಓಂ ನಮಃ ಶಿವಾಯ | ಓಂ ನಮಃ ಶಿವಾಯ
ಓಂ ನಮಃ ಶಿವಾಯ | ಓಂ ನಮಃ ಶಿವಾಯ

ಒಂಭತ್ತು ದಳದ ಕಮಲದಲ್ಲಿ ತುಂಬಿ ಬಂದ ಲಿಂಗವೇ,
ಒಂಭತ್ತು ಗ್ರಹವು ಕಾಡದಂತೆ, ಕಾಯೋ ನಮ್ಮ್ ಲಿಂಗವೇ...
ಓಂ ನಮಃ ಶಿವಾಯ | ಓಂ ನಮಃ ಶಿವಾಯ
ಓಂ ನಮಃ ಶಿವಾಯ | ಓಂ ನಮಃ ಶಿವಾಯ

ಹತ್ತು ದಳದ ಕಮಲದಲ್ಲಿ ಹತ್ತಿಬಂದ ಲಿಂಗವೇ,
ಹತ್ತು ತಲೆಯ ರಾವಣಗೊಲಿದ, ಕರುಣಾಳು ಲಿಂಗವೇ...
ಓಂ ನಮಃ ಶಿವಾಯ | ಓಂ ನಮಃ ಶಿವಾಯ
ಓಂ ನಮಃ ಶಿವಾಯ | ಓಂ ನಮಃ ಶಿವಾಯ

Friday, March 25, 2016

ಕರುಣೆಯಿಲ್ಲದ ಧರಣಿಯ ಕಂಡೆ, ಕೆಂಡವ ಕಾರುವ ಗಗನವ ಕಂಡೆ ಚಿತ್ರ : ಅಸುರ (೨೦೦೧)

ಚಿತ್ರ : ಅಸುರ (೨೦೦೧)
ಸಾಹಿತ್ಯ : ಕೆ.ಕಲ್ಯಾಣ್...
ಗಾಯಕರು : ರಾಜೇಶ್ ಕೃಷ್ಣನ್ ಮತ್ತು ನಂದಿತಾ....
--------------------------------------------
ಕಾರುಣ್ಯ ತುಂಬಿದ ಧಾರುಣಿ ಕಂಡೇ....ಏ....
ಶಾಂತಿಯ ಸಾರುವ ಬಾನನು ಕಂಡೆ....
ಉಸಿರನು ಕಾಯುವ ಗಾಳಿಯ ಕಂಡೆ....ಏ...
ಬಾಳನು ಬೆಳಗುವ ಜ್ಯೋತಿಯ ಕಂಡೆ...

ಕಾರುಣ್ಯ ತುಂಬಿದ ಧಾರುಣಿ ಕಂಡೇ | 
ಶಾಂತಿಯ ಸಾರುವ ಬಾನನು ಕಂಡೆ |
ಉಸಿರನು ಕಾಯುವ ಗಾಳಿಯ ಕಂಡೆ |
ಪಾಪವ ತೊಳೆಯುವ ಗಂಗೆಯ ಕಂಡೇ....ಹೇ.....
-------------------------------------------
ಕರುಣೆಯಿಲ್ಲದ ಧರಣಿಯ ಕಂಡೆ, ಕೆಂಡವ ಕಾರುವ ಗಗನವ ಕಂಡೆ...
ವಿಷವನು ತೂರುವ ಗಾಳಿಯ ಕಂಡೆ, ಎದೆಯನು ಉರಿಸೋ ಬೆಂಕಿಯ ಕಂಡೆ...
ಸುಳಿಯಲಿ ಮುಳುಗಿಸೊ ನೀರನು ಕಂಡೆ, ಬೊಗಸೆಯ ನೀರಲೂ ಸುಳಿಯನು ಕಂಡೆ...
ಹೂವಿನ ಎದೆಯಲಿ ಮುಳ್ಳನು ಕಂಡೆ, ಹಿಮದಲಿ ಜ್ವಾಲಾ ಮುಖಿಯನು ಕಂಡೆ....
ರೆಕ್ಕೆಯ ಬಿಚ್ಚದ ಹಕ್ಕಿಯ ಕಂಡೆ, ಹಾಡಲು ಬಾರದ ಕೋಗಿಲೆ ಕಂಡೆ...
ಮುತ್ತೇ ಇಲ್ಲದ ಕಡಲನು ಕಂಡೆ, ಗಂಧವ ಚೆಲ್ಲದ ಹೂಗಳ ಕಂಡೆ....
ಜೇನನು ಹೀರದ ದುಂಬಿಯ ಕಂಡೆ, ದಿನಗಳ ನುಂಗುವ ಕ್ಷಣಗಳ ಕಂಡೆ....
ಧಿಕ್ಕುಗಳಿಲ್ಲದ ದಾರಿಯ ಕಂಡೆ, ದಾರಿಗಳಿಲ್ಲದ ಧಿಕ್ಕನು ಕಂಡೆ....
ಮೋಡದ ಹನಿಯಲು ಬೇವರನು ಕಂಡೆ, ಗಾಳಿಯ ಎದೆಯಲೂ ನಡುಕವ ಕಂಡೆ...
ಮಳೆಯ ಬಿಲ್ಲಲೂ ಕೊಳೆಯನು ಕಂಡೆ, ಇಬ್ಬನಿ ಕಣ್ಣಲೂ ಕಂಬನಿ ಕಂಡೆ....
ಗರ್ಭದ ಒಳಗೂ ಅಳುವನು ಕಂಡೆ, ಕೆಚ್ಚಲ ಹಾಲಲೂ ವಿಷವನು ಕಂಡೆ...
ಕಬ್ಬಿನ ಎದೆಯಲಿ ಬೇವನು ಕಂಡೆ, ನಗುವಿನ ಹೆಸರಲಿ ನೋವನು ಕಂಡೆ...
ಸಂಭಂದಗಳಲಿ ಬಂಧನ ಕಂಡೆ, ಬಂಧನ ಬಿಡಿಸುವ ಕಂಪನ ಕಂಡೆ....
ಜೀವನಕ್ಕೊಂದು ಯೌವನ ಕಂಡೆ, ಯೌವನಕ್ಕೊಂದು ಜೀವನ ಕಂಡೆ....
ಚಪ್ಪಾಳೆಗಳಲೂ ಸಿಡಿಲನು ಕಂಡೆ, ಬೇವರಿಳಿಸುವ ಬೆಳದಿಂಗಳ ಕಂಡೆ....
ಅಬುಡುಗಚ್ಚುವ ನಿದ್ದೆಯ ಕಂಡೆ, ಪಲ್ಲವಿ ಇರದ ಚರಣವ ಕಂಡೆ....
ಗಂಡೆದೆಯಲ್ಲೂ ಗ್ರಹಣವ ಕಂಡೆ, ಸ್ವತಂತ್ರವಿಲ್ಲದ ಗಾಳಿಯ ಕಂಡೆ.....
ಬಾನೇ ಇಲ್ಲದ ಬಾನಾಡಿ ಕಂಡೆ, ಜಾತಕವಿಲ್ಲದ ಕನಸನು ಕಂಡೆ....
ಜ್ಞ್ಯಾಪಕವಿಲ್ಲದ ನೆನಪನು ಕಂಡೆ, ತೂಕವೆ ಇಲ್ಲದ ಮಾತನು ಕಂಡೆ....
ಸಿಡಿಲೆರೆಯುವ ಬಿರು ಮೌನವ ಕಂಡೆ.... 
ಚೆಲುವಿನ ಮುಖದಲಿ ಕುರೂಪ ಕಂಡೆ, ಒಲವಿನ ವ್ಯಾಘ್ರ ಸ್ವರೂಪ ಕಂಡೆ...
ರುಚಿಗಳೇ ಇಲ್ಲದ ಊಟವ ಕಂಡೆ, ಅಭಿರುಚಿ ಕಾಣದ ಪಾಟವ ಕಂಡೆ...
ಅಳುವ ವಯಸಲಿ ಆಸೆಯ ಕಂಡೆ... ಆಡೋ ವಯಸಲಿ ಅವನತಿ ಕಂಡೆ....
ಕಲಿಯೋ ವಯಸಲಿ ಬಲಿಯನು ಕಂಡೆ...
ಒಂಟಿ ತನದಲಿ ಗಾಯವ ಕಂಡೆ... ಜಂಟಿ ತನದಲಿ ಮಾಯವ ಕಂಡೆ...
ನವಿಲು ಕಾಣದ ಗರಿಯನು ಕಂಡೆ, ಗುರುವೆ ಇಲ್ಲದ ಗುರಿಯನು ಕಂಡೆ...
ಸೂರ್ಯನ ಕಣ್ಣಲಿ ದೇವವ ಕಂಡೆ, ಇರುಳಲಿ ಬೆಳಗಿನ ಜಾವವ ಕಂಡೆ....
ರಾಜರು ಕಟ್ಟಿದ ಕೋಶವ ಕಂಡೆ, ಕೋಶವ ಮುರಿಯೋ ಶಾಸನ ಕಂಡೆ...
ದಾಸರು ಕಾಣದ ಪದವನು ಕಂಡೆ, ಬಡತನಕ್ಕಿಂತಲೂ ಬಡತನ ಕಂಡೆ...
ಧರ್ಮರಾಯನಲೂ ಸುಳ್ಳನು ಕಂಡೆ, ಆಂಜನೇಯಲೂ ಅಹಃ ಕಂಡೆ....
ತಾಯಿ ಮಾತಲೂ ತಪ್ಪನು ಕಂಡೆ, ಭುವನೇಶ್ವರಿಯಲೂ ಬೇಧವ ಕಂಡೆ....
ನೆತ್ತರು ತುಂಬಿದ ಅನ್ನವ ಕಂಡೆ, ಹುಟ್ಟು-ಸಾವಿನ ನಂಟನು ಕಂಡೆ...
ಧಗೆಯಲಿ ಚಿಗುರಿನ ಸ್ಪರ್ಶ ಕಂಡೆ, ಹಗೆಯಲಿ ಸಲ್ಲದ ಹರ್ಷ ಕಂಡೆ....
ಸಹಿಸುವ ಆಸರೆಯೊಂದು ಕಂಡೆ, ಧಹಿಸುವ ಧಮನಿಗಳನ್ನು ಕಂಡೆ...
ಸ್ನೇಹದ ಕೋಟಿ ಪವಾಡ ಕಂಡೆ, ದ್ರೋಹದ ಹೊಸ ಮುಖವಾಡ ಕಂಡೆ....
ಇಳಿಸಲು ಆಗದ ಹೊರೆಯನು ಕಂಡೆ, ಹಣೆಯ ಬರಹಕೆ ಪ್ರತಿ ಹೊಣೆಯನು ಕಂಡೆ...
ಛಲದಾ ಮನಸಿಗೆ ಛಾವಡಿ ಕಂಡೆ, ಮನಸಾ ಕುಧಿಸೋ ಲೇವಡಿ ಕಂಡೆ....
ಸೋಲುಗಳಲ್ಲೆ ಗೆಲುವನು ಕಂಡೆ, ಗೆಲುವಲೇ ಸೋಲಿನ ರುಚಿಯನು ಕಂಡೆ....
ಕಂಗಳ ತಿವಿಯುವ ಕನ್ನಡಿ ಕಂಡೆ, ಬದುಕನೆ ಕಲಕುವ ಮುನ್ನುಡಿ ಕಂಡೆ.....
ಇಳಿಜಾರಿನಲಿ ದಿನ್ನೇಯ ಕಂಡೆ, ದಿನ್ನೇಯಲಿ ಇಳಿಜಾರನು ಕಂಡೆ....
ಹೆಳವನ ದಾರಿಯ ಬೇಧವ ಕಂಡೆ, ಮೂಗನ ಎದೆಯಲಿ ರಾಗವ ಕಂಡೆ....
ಮೂರ್ಖನ ಕೈಯಲಿ ಮಾರ್ಗವ ಕಂಡೆ, ಕಾಲದ ಕೈಯಲಿ ಖಢ್ಗವ ಕಂಡೆ....
ಜೊತೆಯಲಿ ಬಾಳುವ ಕಥೆಗಳ ಕಂಡೆ, ಕಥೆಯಾಗಿರುವಾ ಜೊತೆಯಾ ಕಂಡೆ....
ಜೀವನದೂದ್ದಕೂ ನೋವನು ಕಂಡೆ,
ಆದರೂ ಪ್ರೀತಿಯೂ ಕಾಣಲಿಲ್ಲಾ, ಬಯಸಿದೊಂದು ಸಿಗಲಿಲ್ಲಾ....
ಸತ್ತೂ ಬದುಕೋ ಬದುಕೇಕಿನ್ನೂ,
ಪ್ರೀತಿಸೋ ಮರಣ ಮರಣಾ ಕಂಡೆ...ಏ....ಹೇ...ಏ.....

Thursday, March 24, 2016

ಹೂವ ಕನಸಾ ಜೋಕಾಲಿ, ಜೀಕುವೆನು ಜೊತೆಯಲ್ಲಿ.... (ಇಂತಿ ನಿನ್ನ ಪ್ರೀತಿಯ)


ಹೋಳಿ ಹೋಳಿ ಹೋಳಿ ಹೋಳಿ...ಏಳೇಳು ಬಣ್ಣದ ಬೆಳ್ಳಿ ಹೋಳಿ...( ಚಿತ್ರ : ಪ್ರೀತ್ಸೆ )

ಚಿತ್ರ : ಪ್ರೀತ್ಸೆ (೨೦೦೦)
ಸಾಹಿತ್ಯ : ನಾದಬ್ರಹ್ಮ ಹಂಸಲೇಖ...
ಗಾಯಕರು : ಎಸ್.ಪಿ.ಬಿ, ರಾಜೇಶ ಕೃಷ್ಣನ್, ಅನುರಾಧಾ ಮತ್ತು ಚಿತ್ರಾ...


ಹೋಳಿ ಹೋಳಿ ಹೋಳಿ ಹೋಳಿ...
ಏಳೇಳು ಬಣ್ಣದ ಬೆಳ್ಳಿ ಹೋಳಿ...
ಹೋಳಿ ಹೋಳಿ ಹೋಳಿ ಹೋಳಿ....
ರಾಗ ರಂಗಿನ ರಂಗು ರಂಗೋಲಿ....
ಕಾಮನ ಬಿಲ್ಲಿಂದ, ಬಣ್ಣಗಳ ಕದಿಯೋಣ...
ಮೋಡದ ಕಡಲಿಂದ, ಪನ್ನೀರ ಕಡೆಯೋಣ...
ಬಿಳಿ ಹೆತ್ತ ಬಣ್ಣಗಳ, ಬಿಳಿ ಬಿಳಿ ಬಟ್ಟೆಗೆ ಚೆಲ್ಲೋಣ....
ಓಹೋ ಓಕುಳಿ ಆಡೋಣ....


ಹೋಳಿ ಹೋಳಿ ಹೋಳಿ ಹೋಳಿ....
ಏಳೇಳು ಬಣ್ಣದ ಬೆಳ್ಳಿ ಹೋಳಿ....
ಓ...ಹೋಳಿ ಹೋಳಿ ಹೋಳಿ ಹೋಳಿ...
ರಾಗ ರಂಗಿನ ರಂಗು ರಂಗೋಲಿ....
ಅರಿಷಿಣ ಕುಂಕುಮವ, ಒಂದು ಕ್ಷಣ ಬೆರೆಸೋಣ...
ಹಸಿರಿನ ಜೊತೆಯಲ್ಲಿ, ಒಂದು ಕ್ಷಣ ಇರಿಸೋಣ...
ರವಿವರ್ಮ ನಕ್ಕರೆ ಕ್ಷಮಿಸು, ಬಣ್ಣದ ಹಬ್ಬ ಅನ್ನೋಣ...
ಓಹೋ ಓಕುಳಿ ಆಡೋಣ....



ಹೋಳಿ ಹೋಳಿ ಹೋಳಿ ಹೋಳಿ....
ಏಳೇಳು ಬಣ್ಣದ ಬೆಳ್ಳಿ ಹೋಳಿ....
ಓ...ಹೋಳಿ ಹೋಳಿ ಹೋಳಿ ಹೋಳಿ...



ಬಣ್ಣ ಕಂಡ್ರೆ, ಕುಣಿಯೋಣ, ಕುಣಿಯೋಣ... 
ಬಳಿಯಲು ಬಂದ್ರೆ, ಓಡೋಣ, ಓಡೋಣ...
ಬೇಡ ಅನ್ನೋ, ಈ ಭಯವೇ, ಈ ಭಯವೇ....
ಬೇಕು ಅನ್ನೋ, ಬಿನ್ನಾಣ, ಓಹೋ ಬಿನ್ನಾಣ...
ತನುವೆಲ್ಲ ನವರಂಗು, ಮನಸೆಲ್ಲ ಬೆಳದಿಂಗಳು...
ಈ ಹಬ್ಬ ಧರೆಗಿತ್ತ, ಕೃಷ್ಣನಿಗೆ ನಮನಗಳು....
ಮನೆ ಮನೆಗೊಬ್ಬ.....
ರಂಗಿನ ರಂಗ ರಂಗಿನ ರಂಗ....
ಹುಟ್ಟುವನೆಂದು, ಗೋಕುಲ ರಂಗ...
ಹಿಡಿಯೋ, ಹಚ್ಚೋ...
ಹಿಡಿಯೋ ಹಚ್ಚೋ... ಹಿಡಿಯೋ ಹಚ್ಚೋ...



ಹೋಳಿ ಹೋಳಿ ಹೋಳಿ ಹೋಳಿ....
ಏಳೇಳು ಬಣ್ಣದ ಬೆಳ್ಳಿ ಹೋಳಿ....
ಹೋಳಿ ಹೋಳಿ ಹೋಳಿ ಹೋಳಿ...

ಕಣ್ಣಲ್ಲೆ ಬೌಲಿಂಗ್ ಮಾಡೋ, ಕಣ್ಣಲ್ಲೆ ಬ್ಯಾಟಿಂಗ್ ಮಾಡೋ...
ಗೋಪಿಕಾ ಸ್ತ್ರೀ ನೋಡು, ಸೆಂಚುರೀ ಶ್ರೀಕೃಷ್ಣನ ನೋಡು...
ಒಂದೇ ದಿನ,ಒಂದೇ ಬಾಲ್,ಒಂದೇ ರನ್,ಒಂದೇ ವಿಕೇಟ್,
ಹೊಡ್ದ್ರೇ ವಿನ್ನು, ಬಿಟ್ರೇ ಡ್ರಾ,ಮತ್ತೇ ಬಾಲ್ ಫೇಸ್ ಮಾಡು,
ಬೋಲ್ಡ್, ಕ್ಲೀನ್ ಬೋಲ್ಡ್.....



ಒಲವು ಚೆಲುವು ಒಂದಾಗಿ, ಆ....ಆ...ಆ...
ನಲಿದಿದೆ ಇಲ್ಲಿ ಹೆಣ್ಣಾಗಿ, ಆ...ಆ...ಆ....
ಹೆಣ್ಣ ಕಂಡ ಬಣ್ಣಗಳೇಲ್ಲಾ... ಆ....ಆ...ಆ...
ಶರಣು ಅಂದವೋ ಮಂಕಾಗಿ... ಓಓಓಓ...
ಕೃಷ್ಣಯ್ಯ ಬಾರಯ್ಯ ಒಲವಿನ ಹಬ್ಬಕ್ಕೆ....
ಮುತ್ತಿನ, ಜೇನಿನ ಚೆಲುವಿನ್ ಊಟಕ್ಕೆ....
ಹಬ್ಬದ ಹಬ್ಬ.... ಒಲವಿನ ಹಬ್ಬ... ಒಲವಿನ ಹಬ್ಬ....
ತುಂಬಿದೆ ಬಾಳಿನ, ಹಬ್ಬ ದಿಬ್ಬ....
ಚೆಲ್ಲೋ, ಚೆಲ್ಲೋ... ಬಣ್ಣ ಚೆಲ್ಲೋ... ಬಣ್ಣ ಚೆಲ್ಲೋ...



ಹೋಳಿ ಹೋಳಿ ಹೋಳಿ ಹೋಳಿ....
ಏಳೇಳು ಬಣ್ಣದ ಬೆಳ್ಳಿ ಹೋಳಿ....
ಓ...ಹೋಳಿ ಹೋಳಿ ಹೋಳಿ ಹೋಳಿ...
ರಾಗ ರಂಗಿನ ರಂಗು ರಂಗೋಲಿ....
ಕೋಗಿಲೆ ಕೊಳಳಲ್ಲಿ, ಪಂಚಮವ ಹಿಡಿಸೋಣ...
ಮಯೂರದ ಮೈಯಿಂದ, ಲಾಸಿಮೆಯ ಬೆರಸೋಣ....
ಹದ ಮೀರದಂತ ಹೂಗಳ, ಬಣ್ಣದ ಅಡಿಗೆಯ ಕಲಿಯೋಣ...
ಕಾಮದ ಹೋಳಿಗೆ ಮಾಡೋಣ.....



ಹೋಳಿ ಹೋಳಿ ಹೋಳಿ ಹೋಳಿ....
ಏಳೇಳು ಬಣ್ಣದ ಬೆಳ್ಳಿ ಹೋಳಿ....
ಓ...ಹೋಳಿ ಹೋಳಿ ಹೋಳಿ ಹೋಳಿ...

ಗುಣವಂತ, ಓ ಗುಣವಂತ, ನಿನ್ನಾ ಗುಣಗಾನ ಮಾಡಲು ಪದಗಳೇ ಸಿಗುತಿಲ್ಲ....(ಮಸಣದ ಹೂವು)


ನೀ ಮುದ್ದದ ಮಯಾವಿ, ನೀ ಪ್ರೀತೀಲಿ ಮೇಧಾವಿ .... (ರಥಾವರ)


Thursday, March 10, 2016

ಕೂರಕ್ ಕುಕ್ಕ್ರಳ್ಳಿ ಕೆರೆ..... ವ್ಹಾ... ವ್ಹಾ... ತೇಲ ಕಾರಂಜಿ ಕೆರೆ .....ವ್ಹಾ... ವ್ಹಾ... (ನೆನಪಿರಲಿ)

ಚಿತ್ರ: ನೆನಪಿರಲಿ (೨೦೦೫)
ಸಾಹಿತ್ಯ : ನಾದಬ್ರಹ್ಮ ಹಂಸಲೇಖ...
ಗಾಯಕರು : ಡಾ || ಎಸ್. ಪಿ. ಬಾಲಸುಬ್ರಮಣ್ಯಂ...

ಅರೆ ಯಾರ್ರಿ ಹೆದರ್ಕೊಳ್ಳೋರು,ಬೆದರ್ಕೊಳ್ಳೋರು,
ಪೇಚಾಡೋರು, ಪರದಾಡೋರು ,
ಮರಗಳ್ ಮರೆನಲ್ ಮಾತಾಡೋರು,
ಮಾರ್ನಿಂಗ್ ಷೋನಲ್ ಪಿಸುಗುಟ್ಟೋರು,
ಮೈಸೂರಂತ ಜಿಲ್ಲೇಲಿದ್ದು, ಕಣ್ಣಿಗ್ ಬೇಕಾದ್ ನೋಟ ಇದ್ದು,
ಹಳೆ ರಾಜರು ಅಪ್ಪಣೆ ಇದ್ದು, ಪ್ರೀತಿ ಮಾಡೋಕ್ ಜಾಗ್ಗಳಿದ್ದು
ಕದ್ದು ಮುಚ್ಚಿ ಓಡಾಡ್ತಿರಲ್ರಿ, ಬನ್ರಿ ನೋಡ್ರಿ,
ನಾನ್ ಲವ್ ಮಾಡೋ ಸ್ಟೈಲ್ ಸ್ವಲ್ಪ ಕಲೀರಿ......

ಕೂರಕ್ ಕುಕ್ಕ್ರಳ್ಳಿ ಕೆರೆ..... ವ್ಹಾ... ವ್ಹಾ...
ತೇಲ  ಕಾರಂಜಿ ಕೆರೆ .....ವ್ಹಾ... ವ್ಹಾ...

ಕೂರಕ್ ಕುಕ್ಕ್ರಳ್ಳಿ ಕೆರೆ, ತೇಲಕ್ ಕಾರಂಜಿ ಕೆರೆ,
ಲವ್ವಿಗೆ ಈ ಲವ್ವಿಗೆ...
ಚಾಮುಂಡಿ ಬೆಟ್ಟ ಇದೆ, ಕನ್ನಂಬಾಡಿ ಕಟ್ಟೆ ಇದೆ,
ಲವ್ವಿಗೆ ನಮ್ ಲವ್ವಿಗೆ...
ಈ ಭಯ ಬಿಸಾಕಿ......
ಲವ್ ಮಾಡಿ ಲವ್ ಮಾಡಿ ಲವ್ ಮಾಡಿ..
ಈ ದಿಗಿಲ್ ದಬಾಕಿ.....
ಲವ್ ಮಾಡಿ ಲವ್ ಮಾಡಿ ಲವ್ ಮಾಡಿ..

ಬಲ್ಮುರಿಲಿ ಪೂಜೆ ನೆಪ....ವ್ಹಾ... ವ್ಹಾ...
ಎಡ್ಮುರಿಲಿ ಜಪ ತಪ.....ವ್ಹಾ... ವ್ಹಾ...

ಬಲ್ಮುರಿಲಿ ಪೂಜೆ ನೆಪ, ಎಡ್ಮುರಿಲಿ ಜಪ ತಪ,
ಲವ್ವಿಗೆ ನಿರ್ವಿಘ್ನ ಲವ್ವಿಗೆ...
ನಾರ್ತಿನಲ್ಲಿ ಶ್ರೀರಂಗ್ ಪಟ್ನ, ಸೌತಿನಲ್ಲಿ ನಂಜನ್ಗೂಡು, ಪೂಜೆಗೆ ಲವ್ ಪೂಜೆಗೆ...
ಈ ಭಯ ಬಿಸಾಕಿ......
ಲವ್ ಮಾಡಿ ಲವ್ ಮಾಡಿ ಲವ್ ಮಾಡಿ ..
ಈ ದಿಗಿಲ್ ದಬಾಕಿ.....
ಲವ್ ಮಾಡಿ ಲವ್ ಮಾಡಿ ಲವ್ ಮಾಡಿ ..

ಗಲಾಟೆನೇ ಇಲ್ಲ ಬನ್ರಿ ಗಂಗೋತ್ರಿಯಲ್ಲಿ...
ಮನಸು ಬಿಚ್ಕೊಳ್ರಿ, ಮರ ಮರ ಮರದ ಮರೇಲಿ..
ಅರಮನೇಲಿ ಅಡ್ಡಾಡುತ ಮೂಡು ತೊಗೊಳ್ರಿ ...
ರಾಜನ್ ಥರಾನೆ ಲವ್ವಲ್ ದರ್ಬಾರ್ ಮಾಡ್ಬಿಡ್ರಿ...

ಎ... ರಂಗನತಿಟ್ಟು ನೋಡಿಬಿಟ್ಟು ಹಾಡ್ರಿ ಮುತ್ತಿಟ್ಟು...
ಮುಡುಕು ತೊರೇಲ್ ಮನಸು ಕೊಡ್ರಿ ಕಣ್ಣಲ್ ಕಣ್ಣಿಟ್ಟು...
ಕಾಳಿದಾಸನೆ ಇಲ್ ರಸ್ತೆ ಆಗವ್ನೆ...
ಪ್ರೀತಿ ಮಾಡೋರ್ಗೆ ಸರಿ ದಾರಿ ತೋರ್ ತಾನೇ...

ಕೆ ಆರ್ ಎಸ್ ಲಿ ಕೆಫೆ ಮಾಡಿ, ಬ್ಲಫ್ಫಿನಲ್ಲಿ ಬಫೆ ಮಾಡಿ,
ಲವ್ವಿಗೆ ರಿಚ್ ಲವ್ವಿಗೆ...
ದುಡ್ಡಿದ್ರೆ ಲಲಿತ ಮಹಲ್, ಇಲ್ದಿದ್ರೆ ಒಂಟಿ ಕೊಪ್ಪಲ್,
ಲವ್ವಿಗೆ ಈ ಲವ್ವಿಗೆ...
ಈ ಭಯ ಬಿಸಾಕಿ......
ಲವ್ ಮಾಡಿ ಲವ್ ಮಾಡಿ ಲವ್ ಮಾಡಿ ..
ಈ ದಿಗಿಲ್ ದಬಾಕಿ.....
ಲವ್ ಮಾಡಿ ಲವ್ ಮಾಡಿ ಲವ್ ಮಾಡಿ ..

ಜಾತಿ ಕೆಟ್ರು ಸುಖ ಪಡ್ಬೇಕ್ ಪ್ರೀತಿ ಮಾಡಮ್ಮ...
ನಾಳೆ ಆಗೋದು ಇಂದೇ ಆಗೇ ಹೋಗ್ಲಮ್ಮ ....
ಕದ್ದು ಮುಚ್ಚಿ ಪ್ರೀತಿ ಮಾಡೋ ಕಳ್ಳ ಲವ್ವಮ್ಮ ...
ಸತ್ಯ ಹೇಳಮ್ಮ, ನಿಜವಾದ್ ಪ್ರೀತಿ ಮಾಡಮ್ಮ...

ಜಾತಿ ಸುಡೋ ಮಂತ್ರ ಕಿಡಿ ಪ್ರೀತಿ ಕಣಮ್ಮ....
ಮನುಜ ಮತ ವಿಶ್ವ ಪಥ ಅಂತ ಹೇಳಮ್ಮ....
ತೀರ್ಥ ಹಳ್ಳಿಲಿ ಕುವೆಂಪು ಹುಟ್ಟಿದ್ರು ....
ವಿಶ್ವ ಪ್ರೇಮನ ಮೈಸೂರ್ಗೆ ತಂದ್ಕೊಟ್ರು....

ಮೈಸೂರು ಕೂಲಾಗಿದೆ, ಬೃಂದಾವನ ಗ್ರೀನಾಗಿದೆ,
ಲವ್ವಿಗೆ ಸ್ವೀಟ್ ಲವ್ವಿಗೆ......
ನರಸಿಂಹಸ್ವಾಮಿ ಪದ್ಯ ಇದೆ, ಅನಂತ್ ಸ್ವಾಮಿ ವಾದ್ಯ ಇದೆ,
ಸಾಂಗಿಗೆ ಲವ್ ಸಾಂಗಿಗೆ.....
ಈ ಭಯ ಬಿಸಾಕಿ......
ಲವ್ ಮಾಡಿ ಲವ್ ಮಾಡಿ ಲವ್ ಮಾಡಿ ..
ಈ ದಿಗಿಲ್ ದಬಾಕಿ.....
ಲವ್ ಮಾಡಿ ಲವ್ ಮಾಡಿ ಲವ್ ಮಾಡಿ ..

ಅನುರಾಗ ಚೆಲ್ಲಿದಳು, ಹೃದಯಾನ ಗಿಲ್ಲಿದಳು...(ಪೂಜಾ)

Tuesday, March 8, 2016

ಎಲ್ಲಿದ್ದೆ ಇಲ್ಲಿತನಕ.. ಎಲ್ಲಿಂದ ಬಂದ್ಯವ್ವಾ.. ನಿನ್ನ ಕಂಡು ನಾನ್ಯಾಕೆ ಕರಗಿದೆನೋ..

ಓಂ ಶಿವೋಹಂ... ಓಂ ಶೀವೋಹಂ... ರುದ್ರನಾಮಂ ಭಜೇಹಂ... (ಭಕ್ತಿ ಗೀತೆ)

ಓಂ ಮಹಾಪ್ರಾಣ ದೀಪಂ...ಶಿವಂ ಶಿವಂ... (ಶ್ರೀ ಮಂಜುನಾಥ)

ಶಿವ ಶಿವ ಎಂದರೆ ಭಯವಿಲ್ಲಾ... ಶಿವ ನಾಮಕೆ ಸಾಟಿ ಬೇರಿಲ್ಲಾ...(ಭಕ್ತ ಶಿರಿಯಾಳ)

ಓಡಿ ಬಾ! ಓಡೋಡಿ ಬಾ... ಚಿನ್ನ ನನ್ನ ಬೆನ್ನ ಹಿಂದೆ ಓಡಿ ಬಾ... (ಚಕ್ರತೀರ್ಥ)

ನೀ ಸನಿಹಕೆ ಬಂದರೆ ಹೃದಯದ ಗತಿಯೇನು...? (ಮಳೆಯಲಿ ಜೊತೆಯಲಿ)