Friday, January 19, 2018

ಕುರುಬರೋ ನಾವು ಕುರುಬರು...( ಭಾವಗೀತೆ)

ಕುರುಬರೋ ನಾವು ಕುರುಬರು...( ಭಾವಗೀತೆ)

ಸಾಹಿತ್ಯ : ಸಂತ ಶಿಶುನಾಳ ಶರೀಫ...
ಗಾಯಕರು : ಗಾನ ಗಾರುಡಿಗ " ಸಿ. ಅಶ್ವಥ್ "...
*****************************************
ಕುರುಬರೋ ನಾವು ಕುರುಬರು
ಏನು ಬಲ್ಲೇವರಿ ಒಳ ಕಾರುಬಾರು...
ಕುರುಬರೋ ನಾವು ಕುರುಬರು
ಏನು ಬಲ್ಲೇವರಿ ಒಳ ಕಾರುಬಾರು...

ನೂರಾರು ಸೊಕ್ಕಿದ ಕುರಿ ಮೇಯಿಸಿಕೊಂಡು..
ಸೆಳೆದಂತೆ ಬಂದೇವು ನಮ್ಮ ಕುರಿ ಹಿಂಡು ||
ನೂರಾರು ಸೊಕ್ಕಿದ ಕುರಿ ಮೇಯಿಸಿಕೊಂಡು...
ಸೆಳೆದಂತೆ ಬಂದೇವು ನಮ್ಮ ಕುರಿ ಹಿಂಡು ||

ಕುರುಬರೋ ನಾವು ಕುರುಬರು
ಏನು ಬಲ್ಲೇವರಿ ಒಳ ಕಾರುಬಾರು...

ಏಳುಸುತ್ತಿನ ಬೇಲಿ ಗುಟ್ಟಾಗಿ ಹಚ್ಚಿ...
ಇಟ್ಟವ್ರೆ ಕುರಿಗಳ ಚೆನ್ನಾಗಿ ಬಚ್ಚಿ...
ಏಳುಸುತ್ತಿನ ಬೇಲಿ ಗುಟ್ಟಾಗಿ ಹಚ್ಚಿ...
ಇಟ್ಟವ್ರೆ ಕುರಿಗಳ ಚೆನ್ನಾಗಿ ಬಚ್ಚಿ...
ಹೊಟ್ಟೆಂಬ ಬಾಗಿಲ ಬಲವಾಗಿ ಮುಚ್ಚಿ...
ಸಿಟ್ಟೆಂಬ ನಾಯಿಯ ಬಿಟ್ಟೇವ್ರಿ ಬಿಚ್ಚಿ ||

ಕುರುಬರೋ ನಾವು ಕುರುಬರು
ಏನು ಬಲ್ಲೇವರಿ ಒಳ ಕಾರುಬಾರು...

ತನುಯೆಂಬುವ ದಡ್ಡಿಯ ಹಸನಾಗಿ ಉಡುಗಿ...
ತುಂಬಿ ಚಲ್ಲೇವರಿ ಹಿಕ್ಕಿಯ ಹೆಡಗಿ...
ತನುಯೆಂಬುವ ದಡ್ಡಿಯ ಹಸನಾಗಿ ಉಡುಗಿ...
ತುಂಬಿ ಚಲ್ಲೇವರಿ ಹಿಕ್ಕಿಯ ಹೆಡಗಿ...
ಗುರು ಹೇಳಿದ ಬಾಳು ಹಾಲಿನ ಗಡಗಿ...
ನಮ್ಮ ಕೈಲೇ ಇದ್ಯೋ ಅರಿವಿನ ಬಡಗಿ ||

ಕುರುಬರೋ ನಾವು ಕುರುಬರು
ಏನು ಬಲ್ಲೇವರಿ ಒಳ ಕಾರುಬಾರು...

ಮೇವು ಹುಲ್ಸಾದಂತ ಮಸಣಿದು ಖರೆಯೇ...
ಕುರಿ ಇಲ್ಲಿ ಮೆಯ್ಸಾಕ ಬಂದದ್ದು ಸರಿಯೆ...
ಮೇವು ಹುಲ್ಸಾದಂತ ಮಸಣಿದು ಖರೆಯೇ...
ಕುರಿ ಇಲ್ಲಿ ಮೆಯ್ಸಾಕ ಬಂದದ್ದು ಸರಿಯೆ...
ತೊಳ ಹಾರಿ ಕುರಿಗಳ ಗೋಣು ಮುರಿಯೆ...
ನಾಗಲಿಂಗ ಅಜ್ಜ ಹೇಳಿದ ಪರಿಯೇ ||

ಕುರುಬರೋ ನಾವು ಕುರುಬರು
ಏನು ಬಲ್ಲೇವರಿ ಒಳ ಕಾರುಬಾರು...

No comments: