Saturday, January 13, 2018

ಸಂಕ್ರಾಂತಿ ಬಂತು... ರತ್ತೋ ರತ್ತೋ....ಚಿತ್ರ : ಹಳ್ಳಿಮೇಷ್ಟ್ರು (1992)

ಚಿತ್ರ : ಹಳ್ಳಿಮೇಷ್ಟ್ರು (1992)
ಸಾಹಿತ್ಯ : "ನಾದಬ್ರಹ್ಮ" ಹಂಸಲೇಖ...
ಗಾಯಕರು : ಡಾ!! ಎಸ್.ಪಿ.ಬಿ... ಮತ್ತು ಎಸ್.ಜಾನಕಿ....
*********************************************
ಸಂಕ್ರಾಂತಿ ಬಂತು... ರತ್ತೋ ರತ್ತೋ....
ಮನಸಲ್ಲೀ ಮನಸು... ಬಿತ್ತೋ ಬಿತ್ತೋ...
ಸಂಕ್ರಾಂತಿ ಬಂತು... ರತ್ತೋ ರತ್ತೋ....
ಮನಸಲ್ಲೀ ಮನಸು... ಬಿತ್ತೋ ಬಿತ್ತೋ....
ಎಳ್ಳು ಬೆಲ್ಲ, ತೀರಾಯಿತು... ಕೊಟ್ಟು ತೊಗೋ, ಮಾತಾಯಿತು...
ಮುತ್ತಾಯಿತು, ಮತ್ತಾಯಿತು, ಮೈಯಲ್ಲಿ ಏರುತಿದೆ ಮನ್ಮಥನ ರಂಗುಗಳು...
ಸಂಕ್ರಾಂತಿ ಬಂತು... ರತ್ತೋ ರತ್ತೋ....
ಮನಸಲ್ಲೀ ಮನಸು... ಬಿತ್ತೋ ಬಿತ್ತೋ....
ಎಳ್ಳು ಬೆಲ್ಲ, ನೀಡಾಯಿತು... ಕೊಟ್ಟು ತೊಗೋ, ಮಾತಾಯಿತು...
ಮುತ್ತಾಯಿತು ಮತ್ತಾಯಿತು, ಮೈಯಲ್ಲಿ ಏರುತಿದೆ ಮನ್ಮಥನ ರಂಗುಗಳು....

ಹದಿನಾರು ದಾಟಿದ ಎಳೆಮೈಯಿ ಕೇಳಿದ, ಚೆಲುವ ಚೆಲುವ ನೀನೇನಾ...
ದಿನರಾತ್ರಿ ಕಾಡಿದ ಕುಡಿಮೀಸೆ ಕೂಡಿದ, ಚೆಲುವೆ ಚೆಲುವೆ ನೀನೇನಾ...
ಕಣ್ಣಿಗಿಟ್ಟ ಕಪ್ಪು ಕಾಡಿಗೆ, ಮೂಗಿಗಿಟ್ಟ ಕೆಂಪು ಮೂಗುತಿ,
ನಡೆಸಿದೆ ಹುಡುಕಾಟ ನಿನಗೇ....
ಅತ್ತ-ಇತ್ತ ಆಡೋ ಮನಸು, ಚಿತ್ತ ಭಂಗ ಮಾಡೋ ಕನಸು,
ನಡೆಸಿದ ಪರದಾಟ ನಿನಗೇ...
ಮಹಾರಾಜಾ ನನ್ನ ಜೊತೆಗಾರ..... ಮಹಾರಾಣಿ ನನ್ನ ಜೊತೆಗಾತಿ....
ಸುಗ್ಗೀ ಕಾಲದಂತೆ.... ಸುಗ್ಗೀ ಹಾಡಿನಂತೆ....
ನೀ ಬಂದೇ... ನೀ ಬಂದೇ... ನನ್ನ ಬಾಳಿಗೆ.....
ಸಂಕ್ರಾಂತಿ ಬಂತು... ರತ್ತೋ ರತ್ತೋ....
ಮನಸಲ್ಲೀ ಮನಸು... ಬಿತ್ತೋ ಬಿತ್ತೋ....
ಎಳ್ಳು ಬೆಲ್ಲ, ತೀರಾಯಿತು... ಕೊಟ್ಟು ತೊಗೋ, ಮಾತಾಯಿತು...
ಮುತ್ತಾಯಿತು, ಮತ್ತಾಯಿತು, ಮೈಯಲ್ಲಿ ಏರುತಿದೆ ಮನ್ಮಥನ ರಂಗುಗಳು...

ಚಿತ್ತಾರ ಹಾಕುತ, ರಂಗೋಲಿ ಹಾಕಿದೆ, ಪ್ರೀತಿಯ ಸುಗ್ಗೀಯ ಕಡಲಲ್ಲಿ...
ಸುವ್ವಾಲಿ ಹಾಡುತ, ಕೋಲಾಟ ಸಾಗಿದೆ, ಪ್ರೀತಿಯ ರಾಶಿಯ ಎದುರಲ್ಲಿ....
ಓ... ಪುಟ್ಟ ಬಾಯಿ ಕೆಂಪು ಕುಂಚದ, ತಿದ್ದಿ ತಿಡೋ ಮುದ್ದು ಚಿತ್ರದ,
ಸೊಗಸಿಗೆ ಮನಸೋತೆ ಮರುಳೇ....
ಓ... ಗಾಳಿಗಿಷ್ಟು ಜಾಗವಿಲ್ಲದೆ, ಅಪ್ಪಿಕೊಳ್ಳೊ ಹಳ್ಳಿ ಗಂಡಿದೆ,
ಗಡುಸಿಗೆ ಬೆರಗಾದೆ ಮರುಳ.....
ಮಹಾರಾಣಿ ನನ್ನ ಜೊತೆಗಾತಿ.... ಮಹಾರಾಜಾ ನನ್ನ ಜೊತೆಗಾರ.....
ಸುಗ್ಗೀ ಕಾಲದಂತೆ.... ಸುಗ್ಗೀ ಹಾಡಿನಂತೆ....
ನೀ ಬಂದೇ... ನೀ ಬಂದೇ... ನನ್ನ ಬಾಳಿಗೆ.....
ಸಂಕ್ರಾಂತಿ ಬಂತು... ರತ್ತೋ ರತ್ತೋ....
ಮನಸಲ್ಲೀ ಮನಸು... ಬಿತ್ತೋ ಬಿತ್ತೋ....
ಎಳ್ಳು ಬೆಲ್ಲ, ತೀರಾಯಿತು... ಕೊಟ್ಟು ತೊಗೋ, ಮಾತಾಯಿತು...
ಮುತ್ತಾಯಿತು, ಮತ್ತಾಯಿತು, ಮೈಯಲ್ಲಿ ಏರುತಿದೆ ಮನ್ಮಥನ ರಂಗುಗಳು...

No comments: