Friday, April 22, 2016

ರಾಮಭಂಟ ಹನುಮನು ಲಂಕೇ ಹಾರಿ ಬಂದನು, ಸೀತೆ ಹುಡುಕಿ ಬಿಟ್ಟನು... ಜೈ ಮಾರುತಿ....! ( ಜೈ ಮಾರುತಿ-800 )

ಚಿತ್ರ : ಜೈ ಮಾರುತಿ-800 (2016)
ಸಾಹಿತ್ಯ : ಚೇತನ...
ಗಾಯಕರು : ಪುನೀತ್ ರಾಜಕುಮಾರ್ ಮತ್ತು ಇಂಧೂ ನಾಗರಾಜ್...
------------------------------------------------------------------------
ಎಲ್ಲಿರುವೆ ತಂದೆ ಬಾರೋ | ಹೇ ಮಾರುತಿ....
ಎಲ್ಲಿರುವೆ ತಂದೆ ಬಾರೋ....
ಎಲ್ಲೆಲ್ಲಿ ನೋಡಿದರೂ, ಅಲ್ಲಿ ನಿನ್ನ ಕೀರೂಥಿ,
ಎಲ್ಲಿ ನೋಡಲು ನಿನ್ನ, ಮೂಡಿರುವ ಶ್ರೀ ಪಥಿ....
ಎಲ್ಲಿರುವೆ ತಂದೆ ಬಾರೋ | ಹೇ ಮಾರುತಿ....!

ರಾಮಭಂಟ ಹನುಮನು ಲಂಕೇ ಹಾರಿ ಬಂದನು,
ಸೀತೆ ಹುಡುಕಿ ಬಿಟ್ಟನು... ಜೈ ಮಾರುತಿ....!
ರಾವಣನ್ನ ಎದುರಿಸಿ ರಾಜ್ಯವನ್ನೇ ಸುಟ್ಟನು,
ವೈರಿಗಳ ಕೊಂದನು.... ಜೈ ಮಾರುತಿ....!
ಗೆದ್ದ ಗೆದ್ದ ಇವ, ಶ್ರೀರಾಮ ಮನಸ ಗೆದ್ದನು.....
ಬಂದ ಬಂದ ಇವ, ಪುಟ್ಟ ಬೆಟ್ಟ ಹಿಡಿದು ಬಂದನು...
ಬಂದ ಬಂದ ನೋಡು, ಭಂಟ ಬಂದ ನೋಡು,
ಭೋಲೋ ಜೈಜೈಜೈ ಜೈ ಹನುಮ.....
ಎದೆಯ ಸೀಳಿ ನಿಂತನೋಡು, ರಾಮ ಭಂಟ ಮಾರುತಿ....
ಎತ್ತಿರಪ್ಪ ಎತ್ತಿರಪ್ಪ, ಎದೆಯ ತುಂಬಿ ಆರತಿ....

ರಾಮಭಂಟ ಹನುಮನು ಲಂಕೇ ಹಾರಿ ಬಂದನು,
ಸೀತೆ ಹುಡುಕಿ ಬಿಟ್ಟನು... ಜೈ ಮಾರುತಿ....!
ಎಲ್ಲಿರುವೆ ತಂದೆ ಬಾರೋ.... ಎಲ್ಲಿರುವೆ ತಂದೆ ಬಾರೋ....
ಅಲ್ಲಿ ರಘುನಂದನಗೆ ಬಂಧಿಸುತ ನಿನ್ನೇದೆಯ,
ಕಂಡು ಕೊಂಡಾಡಿ, ಗೆಲ್ಲೋ ನೀ ಮಾರುತಿ...! 
ಎಲ್ಲಿರುವೆ ತಂದೆ ಬಾರೋ....

ರಾಮ ನಾಮವನು ತನ್ನ ಶಕ್ತಿ ಎಂದನೋ....
ಈ ಹನುಮನ, ಎದೆಯಲ್ಲಿಯೇ, ಶ್ರೀರಾಮನ ದಿಗ್ದರ್ಶನ.....
ಪರಮ ಭಕ್ತನೆಂದು ವಾಲ್ಮೀಕಿ ಬರೆದನೋ....
ಹನುಮ ಹನುಮ ವೀರ ಹನುಮನೇ....!
ಶ್ರೀ ರಾಮ ಇರುವಲ್ಲೇ ಇರುತಾನೆ ಹನುಮ.....
ಶ್ರೀ ಹನುಮ ಇರುವಲ್ಲೇ ಇರುತಾನೆ ರಾಮ.....
ಹೇ ಕಷ್ಟ ಕಷ್ಟ, ಕಷ್ಟ ನಷ್ಟ ಎಲ್ಲ ಕಳೆಯುವ !
ಹೇ ದುಷ್ಟ ದುಷ್ಟ, ಕೂಡ ದುಷ್ಟ ಶಕ್ತಿ ಕಳೆಯುವ....!
ಬಂದ ಬಂದ ನೋಡು, ಭಂಟ ಬಂದ ನೋಡು,
ಭೋಲೋ ಜೈಜೈಜೈ ಜೈ ಹನುಮ.....
ಗದೆಯ ಹಿಡಿದು ಬಂದ ನೋಡು, ರಾಮಧೂತ ಮಾರುತಿ....
ಎತ್ತಿರಪ್ಪ ಎತ್ತಿರಪ್ಪ, ಎದೆಯ ತುಂಬಿ ಆರತಿ....

ಎಲ್ಲಿರುವೆ ತಂದೆ ಬಾರೋ.... ಎಲ್ಲಿರುವೆ ತಂದೆ ಬಾರೋ....

ವಾಯುಪುತ್ರನಿನವನು ವಜ್ರಕಾಯವಂತನು.....
ಆ ರಾವಣ, ಕುಂಭಕರ್ಣನ, ಕಡು ದರ್ಪವ ಕಳೆದೊನಿವ....
ಭೀಮನಿಗೆ ತನ್ನ ಶಕ್ತಿ ತಿಳಿಸಿಕೊಟ್ಟನೋ.....
ಹನುಮ ಹನುಮ ವೀರ ಹನುಮನೇ....!
ಧರ್ಮನ ಉಳಿಸೋಕೆ ಬಂದಾ ಆ ರಾಮ.....
ರಾಮಾನಾ ಕಾಯೋಕೆ ಬಂದ ಈ ಹನುಮ....
ಹೇ ಬಾರೋ ಬಾರೋ, ಎಲ್ಲ ಭಯವ ದೂರ ಮಾಡಲು....
ಹೇ ಸೇರೋ ಸೇರೋ, ನಮ್ಮ ಮನೆಗೆ ರಕ್ಷೇ ನೀಡಲು....
ಬಂದ ಬಂದ ನೋಡು, ಭಂಟ ಬಂದ ನೋಡು,
ಭೋಲೋ ಜೈಜೈಜೈ ಜೈ ಹನುಮ.....
ಭೂಮಿಗೆಂದು ಒಬ್ಬ ರಾಮ ಒಬ್ಬ ಧೂತ ಮಾರುತಿ.....
ಸೂರ್ಯ ಚಂದ್ರ ದಿನವು ಬೆಳಗಿ ಹಾಡುತಾರೆ ಕೀರೂಥಿ....

ರಾಮಭಂಟ ಹನುಮನು ಲಂಕೇ ಹಾರಿ ಬಂದನು,
ಸೀತೆ ಹುಡುಕಿ ಬಿಟ್ಟನು... ಜೈ ಮಾರುತಿ....!
ಎಲ್ಲಿರುವೆ ತಂದೆ ಬಾರೋ | ಹೇ ಮಾರುತಿ....
ಎಲ್ಲಿರುವೆ ತಂದೆ ಬಾರೋ....
ಅಲ್ಲಿ ರಘುನಂದನಗೆ ಬಂಧಿಸುತ ನಿನ್ನೇದೆಯ,
ಕಂಡು ಕೊಂಡಾಡಿ, ಗೆಲ್ಲೋ ನೀ ಮಾರುತಿ...! 
ಎಲ್ಲಿರುವೆ ತಂದೆ ಬಾರೋ....

ಜೈ ಮಾರುತಿ.......   ಜೈ ಮಾರುತಿ.......

No comments: