Monday, July 30, 2018

ದುಡ್ಡು ಕೊಟ್ಟರ ಬೇಕಾದ್ದ ಸಿಗತೈತಿ ಈ ಜಗದಲಿ ಕಾಣೋ.... (ಜಾನಪದ ಗೀತೆ)

ದುಡ್ಡು ಕೊಟ್ಟರ ಬೇಕಾದ್ದ ಸಿಗತೈತಿ ಈ ಜಗದಲಿ ಕಾಣೋ.... 
(ಜಾನಪದ ಗೀತೆ)
ಗಾಯಕರು : ಗುರುರಾಜ್ ಹೊಸಕೋಟೆ...
----------------------------------
ದುಡ್ಡು ಕೊಟ್ಟರ ಬೇಕಾದ್ದ ಸಿಗತೈತಿ ಈ ಜಗದಲಿ ಕಾಣೋ....
ಹಡೆದ ತಾಯಿಯನ್ನು ಕಳಕೊಂಡ ಮ್ಯಾಲ ಮತ್ತೆ ಸಿಗುವಳೇನೋ,
ತಮ್ಮಾ ಮರಳಿ ಬರುವಳೇನೋ, ತಮ್ಮಾ ಮರಳಿ ಬರುವಳೇನೋ..... (2)

ಒಂಬ್ಬತ್ತು ತಿಂಗಳ ಸಂಕಟ ನೀಡಿ ಹೊಟ್ಯಾಗ ಬೆಳದೆಲ್ಲೋ.....
ಹುಟ್ಟಿ ಬರುವ ಮುನ್ನ ಜೀವಕ್ಕ ಎಷ್ಟೋ ಕಷ್ಟ ಕೊಟ್ಟಿಯಲ್ಲೋ... (2)
ಬರುವ ಕಷ್ಟಗಳ ಸಹಿಸಿದ ತಾಯಿ, ನಿನ್ನ ನಂಬಿತಲ್ಲೋ...
ಬರುವ ಕಷ್ಟಗಳ ಸಹಿಸಿದ ತಾಯಿ, ನಿನ್ನ ನಂಬಿತಲ್ಲೋ...
ತಾನು ಕರಗಿ ನಿನ್ನ ಕೋಣ ಬೆಳಸಿದಂಗ ಬೆಳಸಿ ಬಿಟ್ಟಳಲ್ಲೋ...
ಒಬ್ಬ ಮಗಾ ನೀ ಆಸರಾದಿಯಂತ, ತಾಯಿ ತಿಳಿದಿತ್ತಲ್ಲೋ,
ಜೀವ ಇಟ್ಟಿತ್ತ ನಿನ್ನ ಮ್ಯಾಲೋ...

ದುಡ್ಡು ಕೊಟ್ಟರ ಬೇಕಾದ್ದ ಸಿಗತೈತಿ ಈ ಜಗದಲಿ ಕಾಣೋ....
ಹಡೆದ ತಾಯಿಯನ್ನು ಕಳಕೊಂಡ ಮ್ಯಾಲ ಮತ್ತೆ ಸಿಗುವಳೇನೋ,
ತಮ್ಮಾ ಮರಳಿ ಬರುವಳೇನೋ, ತಮ್ಮಾ ಮರಳಿ ಬರುವಳೇನೋ..... 

ಕೂಲಿ ನಾಲಿ ಮಾಡಿ ಶಾಲೆ ಕಲಿಸಿದಳು, ಜಾಣ ನಾಗಲೆಂತ....
ಚಿನ್ನದಂತ ಒಂದು ಹೆಣ್ಣ ನೋಡ್ಯಾಳು, ನಿನ್ನ ಮದುವಿಗಂತ.... (2)
ಸಾಲ ಶೂಲ ಮಾಡಿ ಮದುವೆ ಮಾಡಿದಳು, ಬಳ್ಳಿ ಹಬ್ಬಲೆಂತ....
ಸಾಲ ಶೂಲ ಮಾಡಿ ಮದುವೆ ಮಾಡಿದಳು, ಬಳ್ಳಿ ಹಬ್ಬಲೆಂತ....
ಮೊಮ್ಮಕ್ಕಳನು ಎತ್ತಿ ಆಡಿಸುವ ಚಿಂತಿ ಒಳಗ ಇತ್ತ...
ಮುಪ್ಪಿನ ತಾಯಿ ಏನೇನೋ ಕನಸ ಕಟಗೊಂಡ ಕುಂತಿತ್ತ...
ಕನಸು ಕನಸಾಗೇ ಉಳಿತ.......

ದುಡ್ಡು ಕೊಟ್ಟರ ಬೇಕಾದ್ದ ಸಿಗತೈತಿ ಈ ಜಗದಲಿ ಕಾಣೋ....
ಹಡೆದ ತಾಯಿಯನ್ನು ಕಳಕೊಂಡ ಮ್ಯಾಲ ಮತ್ತೆ ಸಿಗುವಳೇನೋ,
ತಮ್ಮಾ ಮರಳಿ ಬರುವಳೇನೋ, ತಮ್ಮಾ ಮರಳಿ ಬರುವಳೇನೋ..... 

ಮಗಳಿಗಿಂತ ಹೆಚ್ಚಿನ ಪ್ರೀತಿಲಿ ಸೊಸಿನ ಕಂಡಳ್ಳಲ್ಲ...
ಸೊಕ್ಕಿನ ಸೊಸೆಯು ತಾಯಿಯ ಹಂಗ ನೋಡಿಕೊಳ್ಳಲಿಲ್ಲಾ... (2)
ಸೋತ ಶರೀರಕ ಸುಖ ಎಂಬುವುದು ಈ ಸೊಸಿಯು ನೀಡಲಿಲ್ಲಾ...
ಸೋತ ಶರೀರಕ ಸುಖ ಎಂಬುವುದು ಈ ಸೊಸಿಯು ನೀಡಲಿಲ್ಲಾ...
ಉಂಡು ಬಿಟ್ಟಿರಿವು ಎಂಜಲ ಕೂಳ ತಾಯಿಗ್ಯಾಕಳಲ್ಲಾ....
ಮಗನ ಮೋಹಕ ಹಳಸಿದ ಕೂಳ ತಾಯಿ ತಿಂತಾಳಲ್ಲಾ...
ಅದನು ಯಾರಿಗೂ ಹೇಳಲಿಲ್ಲ......

ದುಡ್ಡು ಕೊಟ್ಟರ ಬೇಕಾದ್ದ ಸಿಗತೈತಿ ಈ ಜಗದಲಿ ಕಾಣೋ....
ಹಡೆದ ತಾಯಿಯನ್ನು ಕಳಕೊಂಡ ಮ್ಯಾಲ ಮತ್ತೆ ಸಿಗುವಳೇನೋ,
ತಮ್ಮಾ ಮರಳಿ ಬರುವಳೇನೋ, ತಮ್ಮಾ ಮರಳಿ ಬರುವಳೇನೋ..... 

ಉಪವಾಸ, ವನವಾಸ ಹಣ್ಣಾದ ಮುದುಕಿ ಎಷ್ಟಂತ ಇರುತಾಳು....
ಹಸಿವು ತಾಳದೆ ಮತ್ತೊಬ್ಬರಲ್ಲಿ ಬೇಡಿ ತಿಂತಾಳು.... (2)
ಇಷ್ಟೇ ಇದ್ದದ್ದು ಸೊಕ್ಕಿನ ಸೊಸೆಯು ದೊಡ್ಡದು ಮಾಡ್ಯಾಳು....
ಇಷ್ಟೇ ಇದ್ದದ್ದು ಸೊಕ್ಕಿನ ಸೊಸೆಯು ದೊಡ್ಡದು ಮಾಡ್ಯಾಳು....
ಅವಮಾನ ನಮಗಂತ ತನ್ನ ಮನೆಯಿಂದ ಹೊರಗ ಹಾಕ್ಯಾಳು...
ಮಗನಿಗ ಹೇಳಿದರ ನೋವು ಆ ಜೀವಕ, ಎಂದು ತಿಳಿದಾಳು...
ತಾಯಿ ನಿನ್ನಿಂದ ದೂರಾದ್ಳು....

ದುಡ್ಡು ಕೊಟ್ಟರ ಬೇಕಾದ್ದ ಸಿಗತೈತಿ ಈ ಜಗದಲಿ ಕಾಣೋ....
ಹಡೆದ ತಾಯಿಯನ್ನು ಕಳಕೊಂಡ ಮ್ಯಾಲ ಮತ್ತೆ ಸಿಗುವಳೇನೋ,
ತಮ್ಮಾ ಮರಳಿ ಬರುವಳೇನೋ, ತಮ್ಮಾ ಮರಳಿ ಬರುವಳೇನೋ..... 

ಮಗ ಇದ್ದರೂ ಹಡೆದ ತಾಯಿ, ಪರದೇಶಿ ಆಗಿಹಳು....
ಅಲ್ಲಿ ಇಲ್ಲಿ ತಾ ಭಿಕ್ಷೇಯ ಬೇಡಿ, ದಿನಗಳ ಕಳೆದಾಳು... (2)
ಬಂದ ನೋವುಗಳ ಸಹಿಸುತ ಮಗನ ಚಿಂತೆ ಮಾಡುತಾಳು...
ಕಣ್ಣು ಕಾಣಲಿಲ್ಲ, ಕಿವಿಯು ಕೇಳಲಿಲ್ಲ ಎಷ್ಟುದಿನ ಇರುತಾಳು...?
ನನ್ನ ಮಗನಿಗೆ ಚೆನ್ನಾಗಿ ಇಡು ಅಂತ ಮಾತನು ಬೇಡ್ಯಾಳು...
ತಾಯಿ ಬೀದ್ಯಾಗ ಸತ್ತಾಳು....

ದುಡ್ಡು ಕೊಟ್ಟರ ಬೇಕಾದ್ದ ಸಿಗತೈತಿ ಈ ಜಗದಲಿ ಕಾಣೋ....
ಹಡೆದ ತಾಯಿಯನ್ನು ಕಳಕೊಂಡ ಮ್ಯಾಲ ಮತ್ತೆ ಸಿಗುವಳೇನೋ,
ತಮ್ಮಾ ಮರಳಿ ಬರುವಳೇನೋ, ತಮ್ಮಾ ಮರಳಿ ಬರುವಳೇನೋ..... 
ತಮ್ಮಾ ಮರಳಿ ಬರುವಳೇನೋ, ತಮ್ಮಾ ಮರಳಿ ಬರುವಳೇನೋ.....

Saturday, July 28, 2018

ಹುಟ್ಟೋದ್ಯಾಕೆ? ಸಾಯೋದ್ಯಾಕೆ? ಏನಾದರು ಸಾಧಿಸಿ ಹೋಗೊಕೆ... ಚಿತ್ರ : ಶಾಂತಿ ಕ್ರಾಂತಿ (1991)

ಚಿತ್ರ : ಶಾಂತಿ ಕ್ರಾಂತಿ (1991)
ಸಾಹಿತ್ಯ : ನಾದಬ್ರಹ್ಮ "ಹಂಸಲೇಖ"...
ಗಾಯಕರು : ಎಸ್.ಜಾನಕಿ...
------------------------------------------
ಆ....ಆ....ಆ...

ಹುಟ್ಟೋದ್ಯಾಕೆ? ಸಾಯೋದ್ಯಾಕೆ? 
ಏನಾದರು ಸಾಧಿಸಿ ಹೋಗೊಕೆ...
ಹೋ ಓ ಹೋ ಓ ಹೋ ಓ...
ಅಳ್ಯೋದ್ಯಾಕೆ? ನಗೋದ್ಯಾಕೆ? 
ಹೇಗಾದರು ನೋವನು ಮರೆಯೋಕೆ...
ಹೋ ಓ ಹೋ ಓ ಹೋ ಓ...
ಒಳ್ಳೆ ಜನರು ಭೂಮಿ ಮೇಲೆ ಪ್ರತಿ ದಿನವೂ ಹುಟ್ಟೋದಿಲ್ಲ...
ಹೋರಾಡೋರು ಸದಾ ಕಾಲ ಸತ್ತವರಂತೆ ಬಾಳೋದಿಲ್ಲ...
ಒಳ್ಳೆಯ ತನಕೆ ಹೋರಾಡೋಣ, ವೀರರ ಹೆಸರಿನಂತೆ ಬಾಳೋಣ...
ಕ್ರಾಂತಿಯ ಬೇಲಿಯನು ಹಾಕೋಣ, ಶಾಂತಿಯ ಹೂಗಳನು ಬೇಳಸೋಣ...

ಹುಟ್ಟೋದ್ಯಾಕೆ? ಸಾಯೋದ್ಯಾಕೆ? 
ಏನಾದರು ಸಾಧಿಸಿ ಹೋಗೊಕೆ...
ಹೋ ಓ ಹೋ ಓ ಹೋ ಓ...

ಲಾಲಲಾ...ಆಆಆ...ಓಓಓ...ಓಓಓ...ಲಲಲಲಾ...ಲಲಲಾಲಲಲ

ಬರೀ ಬೆತ್ತಲೆ ಜನರ ನಡುವೆ, ಬಟ್ಟೆ ತೊಟ್ಟರೆ ಮನ್ನಣೆ ಇಲ್ಲ...
ಮಾನವರೆಲ್ಲ ದಾನವರಾಗಿ, ಪ್ರೇಮವ ಕೊಂದರೆ ಶಿಕ್ಷೆಯೇ ಇಲ್ಲ...
ಧರ್ಮವು ಸಣ್ಣಗೆ ಆಕಳಿಸಿದರೆ, ಕಾವಲುಗಾರನೇ ಸೆರೆಮನೆಗೆ...
ಒಳ್ಳೆಯ ತನವು ತೂಕಡಿಸಿದರೆ, ದೋಚುವ ಚೋರನು ಅರಮನೆಗೆ...

ಹುಟ್ಟೋದ್ಯಾಕೆ? ಸಾಯೋದ್ಯಾಕೆ? 
ಏನಾದರು ಸಾಧಿಸಿ ಹೋಗೊಕೆ...
ಅಳ್ಯೋದ್ಯಾಕೆ? ನಗೋದ್ಯಾಕೆ? 
ಹೇಗಾದರು ನೋವನು ಮರೆಯೋಕೆ...

Monday, July 23, 2018

ಇವಳು ಹೆತ್ತವಳು..ಅವಳು ಕನಸುಗಳ ಹೊತ್ತವಳು...ಚಿತ್ರ : ಮೇಘಮಾಲೆ.....(1994)

ಚಿತ್ರ : ಮೇಘಮಾಲೆ.....(1994)
ಸಾಹಿತ್ಯ:ನಾದಬ್ರಹ್ಮ ಹಂಸಲೇಖ....
ಗಾಯಕರು : ಡಾ|| ಎಸ್.ಪಿ.ಬಿ...

----------------------------------------------------
ಓಂ ಪ್ರಥಮೋಂ ಪ್ರಥಮೋಂ ಪ್ರಥಮೋಂ  
ಪ್ರೇಮ್ ಪ್ರಥಮೋಂ ಪ್ರಥಮೋಂ  ಆ ಆ  ಆ...

ಇವಳು ಹೆತ್ತವಳು..ಅವಳು ಕನಸುಗಳ ಹೊತ್ತವಳು
ಇವಳು ತುತ್ತವಳು...ಅವಳು ಮುತ್ತುಗಳ ಇತ್ತವಳು
ತಾಯಿ ಬಳ್ಳಿ..ಹೂವಾದೆ
ಪ್ರೇಮಿ ಹಾಡೊ..ಹಾಡಾದೆ
ಹೆತ್ತವಳೋ..ಹೊತ್ತವಳೋ..ತುತ್ತವಳೋ..ಇಲ್ಲ ಮುತ್ತವಳೊ
ಇವಳು ಹೆತ್ತವಳು..ಅವಳು ಕನಸುಗಳ ಹೊತ್ತವಳು
ಇವಳು ತುತ್ತವಳು...ಅವಳು ಮುತ್ತುಗಳ ಇತ್ತವಳು

ತಾಯಿ ಆಣೆ ಹೇಳಿ..ಪ್ರೀತಿ ಮಾಡಿದೆ
ಆಣೆ ಈಗ ದಾರಿ..ಕಾಣದಾಗಿದೆ
ತಾಯಿ ಮಾತೆ ಇಲ್ಲಿ..ವೇದವಾಗಿದೆ
ವೇದಘೋಷವೆಲ್ಲ..ಪ್ರೇಮವಾಗಿದೆ
ದೈವ ಒಂದೆಡೇ..ಜೀವ ಒಂದೆಡೇ
ಧರ್ಮ ಸಂಕಟ...ಎತ್ತಿದೆ ಹೆಡೇ
ಇವಳು ಹೆತ್ತವಳು..ಅವಳು ಕನಸುಗಳ ಹೊತ್ತವಳು
ಇವಳು ತುತ್ತವಳೂ...ಅವಳು ಮುತ್ತುಗಳ ಇತ್ತವಳು

ಇವಳು ಅಮೃತ..ಅವಳು ಸುಕೃತ
ಇವಳು ಚೇತನ..ಅವಳು ಬಂಧನ
ತಾಯಿ ನುಡಿದರೆ..ಲೋಕ ಸಮ್ಮತ
ಪ್ರೇಮಿ ನುಡಿದರೆ..ನ್ಯಾಯ ಸಮ್ಮತ
ಲೋಕ ನಿಂದನೆ...ತಾಯ ತೊರೆದರೆ
ಆತ್ಮ ವಂಚನೆ..ಪ್ರೇಮ ತೊರೆದರೆ
ಇವಳು ಹೆತ್ತವಳು..ನೂರು ನೋವುಗಳ ಹೊತ್ತವಳು
ಅವಳು ಮುತ್ತವಳು..ಕೋಟಿ ಕನಸುಗಳ ಹೊತ್ತವಳು
ತಾಯಿ ಬಳ್ಳಿ..ಹೂವಾದೆ
ಪ್ರೇಮಿ ಹಾಡೊ..ಹಾಡಾದೆ
ಕಂಪಿರದ ಇಂಪಿರದ..ಹೂವಾದೆ...ಅಳುವ ಹಾಡಾದೆ
ಇವಳು ಹೆತ್ತವಳು..ನೂರು ನೋವುಗಳ ಹೊತ್ತವಳು
ಅವಳು ಮುತ್ತವಳು..ಕೋಟಿ ಕನಸುಗಳ ಹೊತ್ತವಳು