Thursday, February 22, 2018

ಈ ಸಂಭಾಷಣೆ, ನಮ್ಮ ಈ ಪ್ರೇಮ ಸಂಭಾಷಣೆ... ಚಿತ್ರ : ಧರ್ಮಸೆರೆ (1979)

ಚಿತ್ರ : ಧರ್ಮಸೆರೆ (1979)
ಸಾಹಿತ್ಯ : ವಿಜಯ ನಾರಸಿಂಹ...
ಗಾಯಕರು : ಎಸ್.ಪಿ.ಬಾಲಸುಬ್ರಮಣ್ಯಂ ಮತ್ತು ಎಸ್.ಜಾನಕಿ... 
--------------------------------------------------------------
ಈ ಸಂಭಾಷಣೆ, ನಮ್ಮ ಈ ಪ್ರೇಮ ಸಂಭಾಷಣೆ...
ಅತಿ ನವ್ಯ, ರಸ ಕಾವ್ಯ, ಮಧುರ ಮಧುರ ಮಧುರ...

ಈ ಸಂಭಾಷಣೆ, ನಮ್ಮ ಈ ಪ್ರೇಮ ಸಂಭಾಷಣೆ...
ಅತಿ ನವ್ಯ, ರಸ ಕಾವ್ಯ, ಮಧುರ ಮಧುರ ಮಧುರ...
ಈ ಸಂಭಾಷಣೆ...........

ಪ್ರೇಮ ಗಾನ ತದ ಲಾಸ್ಯ, ಮೃದು ಹಾಸ್ಯ....
ಶೃಂಗಾರ ಭಾವ ಗಂಗಾ....
ಸುಂದರ.......ಆ
ಸುಲಲಿತ......ಆ
ಸುಂದರ, ಸುಲಲಿತ, ಮಧುರ ಮಧುರ ಮಧುರ...
ಈ ಸಂಭಾಷಣೆ...........

ಧೀರ ಶರದಿ ಮೆರೆವಂತೆ, ಮೊರೆವಂತೆ....
ಹೊಸ ರಾಗ ಧಾರೆಯಂತೆ....
ಮಂಜುಳಾ......ಆ
ಮಧುಮಯ......ಆ
ಮಂಜುಳಾ, ಮಧುಮಯ, ಮಧುರ ಮಧುರ ಮಧುರ...
ಈ ಸಂಭಾಷಣೆ...........

ಚಿತ್ರ ತಂದ ಚಿಗುರಂತೆ, ಚೆಲುವಂತೆ....
ಸೌಂದರ್ಯ ಲಹರಿಯಂತೆ...
ನಿರ್ಮಲ......ಆ
ಕೋಮಲ......ಆ
ನಿರ್ಮಲ, ಕೋಮಲ, ಮಧುರ ಮಧುರ ಮಧುರ...

ಈ ಸಂಭಾಷಣೆ, ನಮ್ಮ ಈ ಪ್ರೇಮ ಸಂಭಾಷಣೆ...
ಅತಿ ನವ್ಯ, ರಸ ಕಾವ್ಯ, ಮಧುರ ಮಧುರ ಮಧುರ...
ಮಧುರ ಮಧುರ ಮಧುರ...

Monday, February 19, 2018

ಶಿವ ಮುನಿದರೆ ಬದುಕಿಲ್ಲಾ...ಆ... ಶಿವನಲ್ಲದೆ, ಹರನಲ್ಲದೇ, ಗತಿ ಯಾರೂ, ನಮಗಿಲ್ಲಾ....ಚಿತ್ರ : ಚೆಲ್ಲಿದ ರಕ್ತ (1982)

ಚಿತ್ರ : ಚೆಲ್ಲಿದ ರಕ್ತ (1982)
ಸಾಹಿತ್ಯ : "ಸಾಹಿತ್ಯ ರತ್ನ" ಚಿ||ಉದಯಶಂಕರ್...
ಗಾಯಕರು : ಡಾ|| ಎಸ್.ಪಿ.ಬಾಲಸುಬ್ರಹ್ಮಣ್ಯಂ...

ಶಿವನೊಲಿದರೆ ಭಯವಿಲ್ಲಾ....ಆ...
ಶಿವ ಮುನಿದರೆ ಬದುಕಿಲ್ಲಾ...ಆ...
ಶಿವನಲ್ಲದೆ, ಹರನಲ್ಲದೇ, ಗತಿ ಯಾರೂ, ನಮಗಿಲ್ಲಾ....

ಜಡೆಯಲ್ಲೆ ಕಟ್ಟಿದ ನದಿಯಾ | ತಲೆಯಲ್ಲೆ ಮುಡಿದಾ ಶಶಿಯಾ,
ಕಣ್ಣೊಳಗೆ ಉರಿವಾ ಬೆಂಕಿಯಾ | ಮುಚ್ಚಿಟ್ಟುಕೊಂಡು,
ನಗುವಾ ನಮ್ಮ ಶಿವನಾ ಕಂಡೆಯಾ | ಅಮ್ಮಮ್ಮಾ ಅವನ,
ಮಹಿಮೆಯನು ನೀನು ಬಲ್ಲೇಯಾ.... (ಪ)

ಪಟ್ಟೆ ಪಿತಾಂಬರವಿಲ್ಲ, ಬಂಗಾರದ ಒಡವೆಗಳಿಲ್ಲ..ಆ...ಆ...
ಪಟ್ಟೆ ಪಿತಾಂಬರವಿಲ್ಲ, ಬಂಗಾರದ ಒಡವೆಗಳಿಲ್ಲ....
ಬೂಧಿಯನು ಬಡಿದು ಮೈಗೆಲ್ಲ, 
ವಿಷ ಶರ್ಪಹಿಡಿದು, ಕೊರಳಲ್ಲಿ ಸುತ್ತಿ ಕೊಂಡನು...
ಹಿಮಗಿರಿ ಏರಿ ಹಾಯಾಗಿ ಅಲ್ಲಿ ಕುಳಿತನು....

ಜಡೆಯಲ್ಲೆ ಕಟ್ಟಿದ ನದಿಯಾ | ತಲೆಯಲ್ಲೆ ಮುಡಿದಾ ಶಶಿಯಾ...(ಪ)

ಶಂಭೋ ಶಂಕರ ಮಹಾದೇವ, ಶಿವ ಶಂಭೋ ಶಂಕರ ಮಹಾದೇವ...

ವಿಷವನ್ನು ಕುಡಿದಾ ಒಮ್ಮೆ, ಯಮನನ್ನು ತಡೆದಾ ಒಮ್ಮೆ...ಏ..ಏ...
ವಿಷವನ್ನು ಕುಡಿದಾ ಒಮ್ಮೆ, ಯಮನನ್ನು ತಡೆದಾ ಒಮ್ಮೆ...
ಭಕ್ತಿಗೆ ಮೆಚ್ಚಿ ಮತ್ತೊಮ್ಮೆ | ಆತ್ಮಲಿಂಗವ, ಭಕ್ತನಿಗೆ ಕೊಟ್ಟ ದೇವನು..
ಬೇಕು ಎನ್ನೂ, ಕೈಲಾಸವನ್ನೇ ಕೊಡುವನು...
ಶಂಭೋ ಶಂಕರ ಮಹಾದೇವ, ಶಿವ ಶಂಭೋ ಶಂಕರ ಮಹಾದೇವ...

ಹೂವನ್ನು ಬೇಡೊದಿಲ್ಲಾ | ಹಣ್ಣನ್ನು ಕೇಳೊದಿಲ್ಲಾ...ಆ..ಓ...
ಹೂವನ್ನು ಬೇಡೊದಿಲ್ಲಾ | ಹಣ್ಣನ್ನು ಕೇಳೊದಿಲ್ಲಾ,
ಹೊಗಳಿಕೆಯನು ಎಂದೂ ಬಯಸಲ್ಲಾ, ನೀಲಕಂಠ....
ಹೂವಂತ ಹೃದಯ ಹುಡುಕುವ,
ಕಲ್ಲಾದ ಮನವ ಕಂಡಾಗ ಅಲ್ಲಿ ನಿಲ್ಲುವ...
ಶ್ರೀಕಂಠ, ಆನಂದವನ್ನು ನೀಡೂವ....

ಜಡೆಯಲ್ಲೆ ಕಟ್ಟಿದ ನದಿಯಾ | ತಲೆಯಲ್ಲೆ ಮುಡಿದಾ ಶಶಿಯಾ...(ಪ)

ಶಂಭೋ ಶಂಕರ ಮಹಾದೇವ, ಶಿವ ಶಂಭೋ ಶಂಕರ ಮಹಾದೇವ...