Friday, December 1, 2017

ಸ್ನೇಹಕ್ಕೆ ಕೈಯ ಚಾಚು ಗೆಳೆಯ ಆಗ್ತಾನೇ... (ಅಂಜನಿ ಪುತ್ರ )

ಚಿತ್ರ : ಅಂಜನಿಪುತ್ರ...(2017)
ಸಾಹಿತ್ಯ : ಸುದೇಶ ಮಂಗಳೂರು...
ಗಾಯಕರು : ರಾಹುಲ್ ರೈ...
----------------------------------------------------------------
ಮಾರೂತ ರೂಪ ಓಂಕಾರ ತೇಜ, 
ವಿಜೇತೇಂದ್ರೀಯ ಶರಣಂ... ಶರಣಂ...
ಸುಗ್ರೀವ ಸಚಿವ ವೇದಾಂತ ವೇದಿ,
ಪ್ರಸನ್ನಾತ್ಮನೆ ಶರಣಂ... ಶರಣಂ...

ಸರ್ವತಂತ್ರಾಯ ವಾಗ ದೀಕ್ಷಾಯ,
ಲೋಕ ಪೂಜ್ಯಾಯ ಶರಣಂ... ಶರಣಂ‌‌...
ನಮೋ ನಮೋ ಮನೋಜವಂ,
ಅಂಜನಿ ಸುತನೆ ಶರಣಂ... ಶರಣಂ...

ಸ್ನೇಹಕ್ಕೆ ಕೈಯ ಚಾಚು, ಗೆಳೆಯ ಆಗ್ತಾನೆ...
ಪ್ರೀತಿಸೊ ಅಭಿಮಾನಿಗಳ, ಹಾರ್ಟಲ್ ಇಡ್ತಾನೆ...
ಧೈರ್ಯಕ್ಕೆ ಕೇಳ್ಳೆ ಬೇಡ, ರಾಮ ಧೂತನಿವನೆ...
ಊರೊಳಗಡೆ ಅಣಿಯ ಮಾಡ್ಕೊ,
ಅಪ್ಪು ಬರ್ತಾವ್ನೆ....

ಇವನೆ...ಇವನೆ...ರಾಜರತ್ನನಿವನೆ...
ಇವನೆ...ಇವನೆ...
ಕುಲ ಕೋಟಿ ಕನ್ನಡಿಗರೊಡೆಯನೆ... 
ಇವನೆ...ಇವನೆ...ಕಾಲನಾಥನಿವನೆ...
ಇವನೆ...ಇವನೆ...ಅಂಜನಿ ಪುತ್ರಾನೆ....

ಇವ ಅಂಜನಿ ಪುತ್ರ...ಇವ ಅಂಜನಿ ಪುತ್ರ...
ಇವ ಅಂಜನಿ ಪುತ್ರ...

ದುಷ್ಟರ ವಧೆಗೆ ಜೀವವ ತಳೆದ,
ಬಲ ಭೀಮನ ಮಿತ್ರ...
ಇವ ಅಂಜನಿ ಪುತ್ರ...ಇವ ಅಂಜನಿ ಪುತ್ರ...
ಇವ ಅಂಜನಿ ಪುತ್ರ...
ಸಿಡಿದೆದ್ರೆ ಮಾತ್ರ ಉಳ್ಸೋದೇ ಡೌಟು,
ನಿಲ್ಬೇಡಿ ಹತ್ರ...

ರಾಜ ಮಾರ್ಗದಲಿ ನೆಡಿತಾನೆ...
ಬೇಡಿ ಬಂದವರ ಕಾಯ್ತಾನೆ...
ಶಿಷ್ಟರ ರಕ್ಷಕೆ ಭುವಿಗಿಳಿದಿರುವ...
ಪವನ ಜರಸುತನೆ...

ಕ್ಷೀರ ಸಾಗರದ ಮನಸವನೆ...
ಕಷ್ಟಕೆ ಹೆಗಲು ನೀಡ್ತಾನೆ...
ಪ್ರೀತಿ ಪಾತ್ರರಿಗೆ ಹತ್ರಾನೆ...
ಇವ ನಕ್ಕರೆ ಸ್ವರ್ಗಾನೆ...

ಇವನೆ...ಇವನೆ... ದೀನ ಬಂಧು ಇವನೆ...
ಇವನೆ...ಇವನೆ..‌. ಕರುಣಾ ಸಿಂಧು ಇವನೆ...
ಇವನೆ... ಬಾ ಬೇಗ ಹರನೆ..‌.
ಇವನೆ...ಇವನೆ... ಅಂಜನಿ ಪುತ್ರಾನೆ...‌

ಬೆಟ್ಟಕು ಮಿಗಿಲಾಗಿರುವ, ಪ್ರೀತಿ ನಿಂದೇನೆ...
ಅಲೆದಷ್ಟು ಜಡಿಯಾಗಿರುವ,ಚಿನ್ನದ ಗುಣದವನೆ...
ಇತಿಹಾಸ ಕಾಯ್ತ ಐತೆ, ನಿನ್ನ ಹೆಜ್ಜೆಯನ್ನೆ...
ಈ ಮಣ್ಣಿನ ಹೆಮ್ಮೆ ನೀನೆ, Son Of "ಮುತ್ತು"ನೆ.....

ರಾಂಗು ರೂಟುಗಳ ಹೊಡಿತಾನೆ....
ಗದಾ ಬಾಹುವಿನ ಬಲದವನೆ....
ಕಣಕ್ಕೆ ಇಳಿದು ಯುದ್ಧಕೆ ನಿಂತರೆ,
ಮಹಾ ಧೂತನಿವನೆ...
ರಾಮ ಸ್ತೋತ್ರಗಳ ಕಲಿತವನೆ...
ಸತ್ಯ ನಿಲ್ಲೊಕಡೆ ಉಳಿತಾನೆ...
ದುಷ್ಟರ ಪ್ರಾಣವ ಅಂಗೈಲಿಡಿದು,
ಗಗನಕ್ಕೆ ಎಸಿತಾನೆ..‌. 

ಇವನೆ..‌.ಇವನೆ... ಮ್ರುತ್ಯುಂಜಯನಿವನೆ...
ಇವನೆ...ಇವನೆ... ವಜ್ರ ನಾಥನಿವನೆ...
ಇವನೆ...ಇವನೆ... ಕರುನಾಡ ಮನೆ ಮಗನೆ...
ಇವನೆ...ಇವನೆ... ಲೋಹಿತಾಷ್ವನಿವನೆ...

ಸ್ನೇಹಕ್ಕೆ ಕೈಯ ಚಾಚು, ಗೆಳೆಯ ಆಗ್ತಾನೆ...‌
ಪ್ರೀತಿಸೊ ಅಭಿಮಾನಿಗಳ, ಹಾರ್ಟಲ್ ಇಡ್ತಾನೆ...
ಧೈರ್ಯಕ್ಕೆ ಕೇಳ್ಳ ಬೇಡ, ರಾಮ ಧೂತನಿವನೆ...
ಕೈ ಕಟ್ಕೊಂಡ್ ಪಕ್ಕಕ್ ಸರ್ಕೊ, 
ಅಪ್ಪು ಬರ್ತಾವ್ನೆ...‌

ಇವನೆ...ಇವನೆ... ರಾಜರತ್ನನಿವನೆ...
ಇವನೆ...ಇವನೆ...
ಕುಲ ಕೋಟಿ ಕನ್ನಡಿಗರೊಡೆಯನೆ...
ಇವನೆ...ಇವನೆ... ಕಾಲನಾಥನಿವನೆ...
ಇವನೆ...ಇವನೆ..‌. ಅಂಜನಿ ಪುತ್ರಾನೆ...

Monday, November 13, 2017

ಕನ್ನಡದ ಸಿದ್ಧ, ಹಾಡೋದಕ್ಕೆ ಎದ್ದ.. ಕನ್ನಡಕ್ಕೆ ಇವನು, ಸಾಯೋದಕ್ಕೂ ಸಿದ್ಧ..

ಚಿತ್ರ : ಮೋಜುಗಾರ..ಸೊಗಸುಗಾರ(1995)
ಸಾಹಿತ್ಯ : ಹಂಸಲೇಖ
ಗಾಯಕರು :ಡಾ|| ವಿಷ್ಣುವರ್ಧನ್

ಕನ್ನಡದ ಸಿದ್ಧ, ಹಾಡೋದಕ್ಕೆ ಎದ್ದ..
ಕನ್ನಡಕ್ಕೆ ಇವನು, ಸಾಯೋದಕ್ಕೂ ಸಿದ್ಧ..

ಕನ್ನಡವೇ ನಮ್ಮಮ್ಮ ಅವಳಿಗೆ ಕೈಮುಗಿಯಮ್ಮ
ಮಾತಾಡೋ ದೇವರಿವಳು, ನಮ್ಮ ಕಾಪಾಡೋ ಗುರು ಇವಳು
ಕನ್ನಡವೇ ನಮ್ಮಮ್ಮ ಅವಳಿಗೆ ಕೈಮುಗಿಯಮ್ಮ
ನಲಿದಾಡೋ ನೀರಿವಳು, ನಾ ಉಸಿರಾಡೋ ಕಾಡಿವಳು

ಬರೆಯೋರ ತವರೂರು..ನಡೆಯೋರ ಹಿರಿಯೂರು
ನಟಿಸೋರ ನವಿಲೂರು..ನುಡಿಸೋರ ಮೈಸೂರು
ಕೂಡಿದರೇ ಕಾಣುವುದು, ಎದೆಯೆಲ್ಲ ಹಾಡಾಗುವುದು
ಮಧುರ ಮಧುರಇದು.. ಅಮರ ಅಮರಇದು
ಕನ್ನಡವೇ ನಮ್ಮಮ್ಮ ಅವಳಿಗೆ ಕೈಮುಗಿಯಮ್ಮ
ಮಾತಾಡೋ ದೇವರಿವಳು, ನಮ್ಮ ಕಾಪಾಡೋ ಗುರು ಇವಳು

ಈ ಭಾಷೆ ಕಲಿಯೋದು, ಬೆಣ್ಣೆನ ತಿಂದಂತೆ
ನಮ್ಮ ಭಾಷೆ ಬರೆಯೋಕೆ, ಕಲಿಸೋರೆ ಬೇಡಂತೆ
ಹಾಡಿದರೆ ನುಲಿಯುವುದು, ಮೈತುಂಬಾ ಓಡಾಡುವುದು
ಸರಳ ಸರಳಇದು.. ವಿರಳ ವಿರಳಇದು

ಕನ್ನಡವೇ ನಮ್ಮಮ್ಮ ಅವಳಿಗೆ ಕೈಮುಗಿಯಮ್ಮ
ಮಾತಾಡೋ ದೇವರಿವಳು, ನಮ್ಮ ಕಾಪಾಡೋ ಗುರು ಇವಳು
ಕನ್ನಡವೇ ನಮ್ಮಮ್ಮ ಅವಳಿಗೆ ಕೈಮುಗಿಯಮ್ಮ
ನಲಿದಾಡೋ ನೀರಿವಳು, ನಾ ಉಸಿರಾಡೋ ಕಾಡಿವಳು

ಸಿದ್ಧವೋ, ಸಿದ್ಧವೋ ಕನ್ನಡಕ್ಕೆ ಸಾಯಲು..
ಸಿದ್ಧವೋ, ಬದ್ಧವೋ ಕನ್ನಡಕ್ಕೆ ಬಾಳಲು..


Thursday, November 2, 2017

ಹಾಯಾಗಿ ಕುಳಿತಿರು ನೀನು ರಾಣಿಯಹಾಗೆ...[ಹಾಲು ಜೇನು]

ಚಿತ್ರ: ಹಾಲು ಜೇನು...( ೧೬೮೨)
ಸಾಹಿತ್ಯ : ಸಾಹಿತ್ಯ ರತ್ನ "ಚಿ. ಉದಯಶಂಕರ್"...
ಗಾಯಕರು : ಗಾನ ಗಂಧರ್ವ "ಡಾ. ರಾಜಕುಮಾರ್"...
*******************************************
ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ, ಮಹಾರಾಣಿಯ ಹಾಗೆ...
ಆಯಾಸ ಪಡದಿರು ಇನ್ನು ಕೂಗುತಲೀಗೆ...
ಎಲ್ಲಾ ಕೆಲಸ ಮಾಡಿ ಮುಗಿಸುವೆ,
ನೀನೆ ಆಗ ಮೆಚ್ಚಿಕೊಳ್ಳುವೆ....
ಪಬಬಂ ಪಬಬಂ ಪಬಬಂ...

ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ, ಮಹಾರಾಣಿಯ ಹಾಗೆ....

ಭೀಮಸೇನ ನಳ ಮಹಾರಾಜರು ಗಂಡಸರಲ್ಲವೇ...
ಭೀಮಸೇನ ನಳ ಮಹಾರಾಜರು ಗಂಡಸರಲ್ಲವೇ...
ನನ್ನ ಹಾಗೆ ಮೀಸೆ ಹೊತ್ತ ಮಹನೀಯರಲ್ಲವೇ, ಮಹನೀಯರಲ್ಲವೇ....
ನೆನ್ನೆಯ ತನಕ ನೀನೆ ದುಡಿದೆ,
ಈ ಸಂಸಾರಕೆ ಜೀವ ತೈದೆ....
ಈ ದಿನವಾದರು ನಿನ್ನ, ಸೇವೆಯ ಮಾಡುವೆ ಚಿನ್ನ...
ಪಬಬಂ ಪಬಬಂ ಪಬಬಂ...‌

ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ, ಮಹಾರಾಣಿಯ ಹಾಗೆ...
ಆಯಾಸ ಪಡದಿರು ಇನ್ನು ಕೂಗುತಲೀಗೆ...
ಎಲ್ಲಾ ಕೆಲಸ ಮಾಡಿ ಮುಗಿಸುವೆ,
ನೀನೆ ಆಗ ಮೆಚ್ಚಿಕೊಳ್ಳುವೆ....
ತರರಂ ತರರಂ ತರರಂ...

ಚಿನ್ನದಂತ ಹೆಂಡತಿ ಇರಲು ಕಣ್ಣೀರೇತಕೆ...
ಚಿನ್ನದಂತ ಹೆಂಡತಿ ಇರಲು ಕಣ್ಣೀರೇತಕೆ...
ಮನಸನು ಅರಿತು ನೆಡೆಯುತಲಿರಲು,
ಚಿಂತೆಯ ಮಾತೇಕೆ...
ನೀ ನಗುತಿರಲು ನಮ್ಮೀ ಮನೆಗೆ ,
ಆ ಸ್ವರ್ಗವೇ ಜಾರಿದಂತೆ...
ಹೆಂಡತಿ ಸೇವಕಿಯಲ್ಲ, ಗಂಡನು ದೇವರು ಅಲ್ಲ...
ಪಬಬಂ ಪಬಬಂ ಪಬಬಂ....

ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ, ಮಹಾರಾಣಿಯ ಹಾಗೆ...
ಆಯಾಸ ಪಡದಿರು ಇನ್ನು ಕೂಗುತಲೀಗೆ...
ಎಲ್ಲಾ ಕೆಲಸ ಮಾಡಿ ಮುಗಿಸುವೆ,
ನೀನೆ ಆಗ ಮೆಚ್ಚಿಕೊಳ್ಳುವೆ...
ತರರಂ ತರರಂ ತರರಂ...

Wednesday, November 1, 2017

ಬೊಂಬೆ ಹೇಳುತೈತೆ.... (ರಾಜಕುಮಾರ್) ೨೦೧೭

ಚಿತ್ರ : ರಾಜಕುಮಾರ (2017)
ಸಾಹಿತ್ಯ : ಸಂತೋಷ ಆನಂದರಾಮ...
ಗಾಯಕರು : ವಿಜಯ ಪ್ರಕಾಶ...
------------------------------------------------------
ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ
ನೀನೇ ರಾಜಕುಮಾರ (2)...

ಹೊಸಬೆಳಕೊಂದು ಹೊಸಿಲಿಗೆ ಬಂದು
ಬೆಳಗಿದೆ ಮನೆಯ ಮನಗಳ ಇಂದು
ಆರಾಧಿಸೋ ರಾರಾಧಿಸೋ ರಾಜರತ್ನನು
ಆಡಿಸಿಯೇ ನೋಡು
ಬೀಳಿಸಿಯೇ ನೋಡು
ಎಂದೂ ಸೋಲದು
ಸೋತು ತಲೆಯ ಬಾಗದು

ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ
ನೀನೇ ರಾಜಕುಮಾರ ...

ಗುಡಿಸಲೆ ಆಗಲಿ ಅರಮನೆಯಾಗಲಿ
ಆಟವೆ ನಿಲ್ಲದು
ಎಂದೂ ಆಟ ನಿಲ್ಲದು
ಹಿರಿಯರೆ ಇರಲಿ ಕಿರಿಯರೆ ಬರಲಿ
ಭೇದವ ತೋರದು
ಎಂದೂ ಭೇದ ತೋರದು
ಎಲ್ಲ ಇದ್ದು ಏನೂ ಇಲ್ಲದ ಹಾಗೆ ಬದುಕಿರುವ
ಆಕಾಶ ನೋಡದ ಕೈಯೇ ನಿನದು ಪ್ರೀತಿ ಹಂಚಿರುವ
ಜೊತೆಗಿರು ನೀನು ಅಪ್ಪನ ಹಾಗೆ
ಹಣ್ಣೆಲೆ ಕಾಯೋ ವಿನಯದಿ ಹೀಗೇ
ನಿನ್ನನು ಪಡೆದ ನಾನು ಪುನೀತ
ಬಾಳು ನಗುನಗುತಾ

ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ
ನೀನೇ ರಾಜಕುಮಾರ ...

ಮ್ ಮ್ ಮ್ ಮ್ .....

ತಾನೇ ಉರಿದು ಮನೆಗೆ ಬೆಳಕು ಕೊಡುವ ದೀಪವಿದು
ನಂದಾದೀಪವೇ ಇದು
ಆಡಿಸುವಾತನ ಕರುಣೆಯ ಮೇಲೆ ನಮ್ಮ ಪಾತ್ರವು
ಸಮಯದ ಸೂತ್ರ ಅವನದು
ಒಂದು ಮುತ್ತಿನ ಕಥೆಯ ಹೇಳಿತು ಹೀಗೊಂದೆ
ಆ ಕಥೆಯಲ್ಲಿದ್ದ ರಾಜನಂಗೆ ನೀನು ಬಂದೆ
ಯೋಗವು ಒಮ್ಮೆ ಬರುವುದು ನಮಗೆ
ಯೋಗ್ಯತೆ ಒಂದೆ ಉಳಿವುದು ಕೊನೆಗೆ
ಸೂರ್ಯನೊಬ್ಬ ಚಂದ್ರನೊಬ್ಬ ರಾಜನೂ ಒಬ್ಬ
ಈ ರಾಜನೂ ಒಬ್ಬ

ಆಡಿಸಿಯೇ ನೋಡು
ಬೀಳಿಸಿಯೇ ನೋಡು
ಎಂದೂ ಸೋಲದು
ಸೋತು ತಲೆಯ ಬಾಗದು...

ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ
ನೀನೇ ರಾಜಕುಮಾರ ...

Thursday, August 31, 2017

ಬಾಳಿನಲಿ ಒಂದೊಂದು ದಿನಕೊಂದು, ಬಣ್ಣದ ಬಣ್ಣದ ವೇಷ... ಬಣ್ಣದ ಬಣ್ಣದ ವೇಷ...(ಗೋಪಿ ಕೃಷ್ಣ)

ಚಿತ್ರ : ಗೋಪಿ ಕೃಷ್ಣ...(1992)....
ಸಾಹಿತ್ಯ : ನಾದಬ್ರಹ್ಮ"ಹಂಸಲೇಖ"..
ಗಾಯಕರು : ಮನು ಮತ್ತು ಚಿತ್ರಾ...
-------------------------------------------------------------------
ನಾಯಕರ ಓ ನಾಯಕ, ಚಾಲು ಇನ್ನು ಈ ನಾಟಕ...
ಸೂತ್ರ ನೀನೂ, ಪಾತ್ರ ನಾನೂ...

ಬಾಳಿನಲಿ ಒಂದೊಂದು ದಿನಕೊಂದು,
ಬಣ್ಣದ ಬಣ್ಣದ ವೇಷ... ಬಣ್ಣದ ಬಣ್ಣದ ವೇಷ...
ಬದುಕಿನ ಅವಸರಾ, ಕೆಡಿಸಿದೆ ಹುಡುಗರಾ...ಆ..

ಬಾಳಿನಲಿ ಒಂದೊಂದು ದಿನಕೊಂದು,
ಬಣ್ಣದ ಬಣ್ಣದ ವೇಷ... ಬಣ್ಣದ ಬಣ್ಣದ ವೇಷ...
ಬದುಕಿನ ಅವಸರಾ, ಕೆಡಿಸಿದೆ ಹುಡುಗರಾ...ಆ..
ಬಾಳಿನಲಿ ಒಂದೊಂದು ದಿನಕೊಂದು,
ಬಣ್ಣದ ಬಣ್ಣದ ವೇಷ... ಬಣ್ಣದ ಬಣ್ಣದ ವೇಷ...

ನಾಯಕರ ಓ ನಾಯಕ, ಬೊಂಬೆಗಳ ಸಂಚಾಲಕ...
ಚಾಲು ಇನ್ನು ಈ ನಾಟಕ...
ಸೂತ್ರ ನೀನೂ, ಪಾತ್ರ ನಾನೂ...
ಸುಳ್ಳುಗಳ ಆದೇಶಿಸಿ, ವೀರರನು ಓಡಾಡಿಸಿ...
ಧರ್ಮಗಳ ಕಾಪಾಡಿಸೋ,
ಸೂತ್ರ ನೀನೂ, ಪಾತ್ರ ನಾನೂ...
ಬಾಳಿನಲಿ ಒಂದೊಂದು ತಲೆಗೊಂದು,
ತೀರದ ಭಾರದ ಚಿಂತೆ, ಭಾರದ ತೀರದ ಚಿಂತೆ...
ಬದುಕಿನ ಅವಸರ, ನುಡಿಸಿದೆ ಅಪಸ್ವರ...
ಬಾಳಿನಲಿ ಒಂದೊಂದು ವಿಷಯಕೂ,
ದಿನವೂ ತಲೆಗೆ ಕೆರೆತ, ದುಡ್ಡಿಗೂ ಕಾಸಿಗೂ ಅಲೆತ,
ಬದುಕಿನ ಅವಸರ, ಕುಣಿಸಿದೆ ಥರ ಥರ..‌.
ಬಣ್ಣದ ಬಣ್ಣದ ವೇಷ... ಬಣ್ಣದ ಬಣ್ಣದ ವೇಷಾ.‌..ಆ...

ಬಿಳಿಯ ದಾಡಿ ಚಂದಿರ, ಹುಡುಗಿಯರ ಈ ಮಂದಿರ...
ನೋಡಿ ಒಳಗೆ ಬಂದಿರಾ, ಯಾರು ಬೇಕೂ..?
ಏನು ಬೇಕೂ..?

ಬಂಗಲೆಯ ಭಾಮಾಮಣಿ, ತಿಂಡಿಗಳ ನುಂಗೋ ಗಣಿ,
ಅರಗಿಣಿ ಓ ರೂಪಿಣಿ, ಕೆಲಸ ಬೇಕೂ...
ಕಲಿಸ ಬೇಕೂ...

ಬಾಳಿನಲಿ ಒಂದೊಂದು ದಿನಕೊಂದು,
ತರಲೆ ತಲೆಯ ನೋವು, ಯಾಕೆ ಬಂದ್ರೀ ನೀವೂ...
ಹಾಡಿನ ಮೇಷ್ಟರೇ, ಪುಣ್ಯ ನೀವ ಹೊರಟರೆ.‌‌‌‌..

ಬಾಳಿನಲಿ ಒಂದೊಂದು ದಿನಕೊಂದು,
ಬಣ್ಣದ ಬಣ್ಣದ ವೇಷ... ಬಣ್ಣದ ಬಣ್ಣದ ವೇಷಾ.‌..ಆ...
ಬದುಕಿನ ಅವಸರ, ಬಯಸಿದೆ ಕನಿಕರ...

ಬಾಳಿನಲಿ ಒಂದೊಂದು ದಿನಕೊಂದು,
ಬಣ್ಣದ ಬಣ್ಣದ ವೇಷ... ಬಣ್ಣದ ಬಣ್ಣದ ವೇಷಾ.‌..ಆ...

Friday, August 11, 2017

NO1

ಚಿತ್ರ : ನಂಬರ್ 1. (1999)
ಸಾಹಿತ್ಯ : ಕವಿರಾಜ್....
ಗಾಯಕರು : ರಾಜೇಶ್ ಕೃಷ್ಣನ್ ಮತ್ತು ಚಿತ್ರಾ..
-------------------------------------------------------------------------
ಓ..ಓ..ಓ..ಓ..
ಬೆಳ್ಳಿ ಚುಕ್ಕಿ ಬಾಲೆ ನೀನಂದೂ ಬಂದ ವೇಳೆ, ಮುಗಿಲಿನ ಹಾಳೆ ಬಂಗಾರ ಚಲ್ಲೋ ಮಾಲೆ
ಸ್ವಲ್ಪ ನಿನ್ನ ಪ್ರೀತಿ ತೋರಮ್ಮಾ...
ಬೆಳ್ಳಿ ಚುಕ್ಕಿ ಬಾಲೆ ನೀನೊಂದು ಪ್ರೀತಿ ಶಾಲೆ, ಋತುಗಳೆ ಇಂದು ನಿನ್ನಕ್ಷರ ಮಾಲೆ
ನಾನು ನಿನ್ನ ಪ್ರೀತಿ ಸಾಲಮ್ಮಾ...
ಪ್ರೇಮ ವಾಹಿನಿ, ಹೃದಯಾಂತ ರಂಗಿಣಿ, 
ನೀ ಕಾಯೋ ಹಲವಾರು, ಉಸಿರಲ್ಲಿ ನನ್ನದೊಂದು
ಹೂವ ಒಂದು ಅರಳಲಿದೆ, ದಿನ.. ದಿನ..

ಬೆಳ್ಳಿ ಚುಕ್ಕಿ ಮೇಲೆ ಆಹಾ ಬರೆದ ನಿನ್ನ ಓಲೆ, ಭೂಮಿ ಬಾನ ಮೇಲೆ ಬಂದಂತ ಮಳೆ ಬಿಲ್ಲೆ
ನನ್ನ ಪ್ರೀತಿ ಸಾಲ ಹೇಳಲೆ...
ಪ್ರೇಮ ಗೀತೆಯಲ್ಲಿ ಆ ಇಬ್ಬನಿಯ ಚೆಲ್ಲಿ, ಋತುಗಳ ಮಳ್ಳಿ ಹಿಂಗ್ಯಾಕೇ ನಿಂತೆ ಅಲ್ಲಿ, 
ತೋರು ನಿನ್ನ ಪ್ರೀತಿ ಕಣ್ಣಲ್ಲಿ...
ರಾಗ ವಾಹಿನಿ, ಅನುರಾಗ ಬಂಧಿನಿ, 
ನೀ ಬರೆಯೋ ಹಲವಾರು, ಹೊಂಬಿಸಿಲ ಕಥೆಯಲ್ಲಿ
ನನಗೊಂದನು ಉಳಿಸು, ಕ್ಷಣ.. ದಿನ..

ಬೆಳ್ಳಿ ಚುಕ್ಕಿ ಬಾಲೆ ನೀನಂದೂ ಬಂದ ವೇಳೆ, ಮುಗಿಲಿನ ಹಾಳೆ ಬಂಗಾರ ಚಲ್ಲೋ ಮಾಲೆ
ಸ್ವಲ್ಪ ನಿನ್ನ ಪ್ರೀತಿ ತೋರಮ್ಮಾ...

ಪ್ರೇಮದ ಕಣ್ಣ, ತೆರೆಸಲು ಚೆನ್ನ, ಒಂದು ಒಂದೊಂದು ಕವನ,
ಓ, ಶಿಖರ ಇವನ ಸುಂದರ ವದನ, ಕೇಳೇ ನೀನೂ ಶಂಭೋ ಶಿವನ..
ಸಾಗರದಲ್ಲಿ ಮುತ್ತೊಂದಿಲ್ಲ ಮೊನ್ನೇ ತಾನೇ ಕಳುವಾಯ್ತಲ್ಲ ಗೊತ್ತಾ ಯಾಕೆ ?
ಓ, ಪ್ರೇಮದಲಿಂದು ಸಿಹಿಯೇ ಇಲ್ಲ ಅದಕೆ ತುಟಿಗೆ ಹತ್ತಿದೆಯಲ್ಲ ಇನ್ನೂ ಜೋಕೆ
ಕಣ್ಣೇ, ಕಣ್ಣನ್ನೇ ದೂರು... ನೋಡು ಇಲ್ಲಿ ಆಹಾ! ಎಲ್ಲ ಚೆಂದ, 
ಅಷ್ಟೇ ಇಳಿಜಾರೂ ಹುಷಾರು...

ಪ್ರೇಮಲೋಕದ ಪರಿಭಾಷೆ ಅರಿಯದೇ, 
ಶೃಂಗಾರ ಸೆರಗಲ್ಲಿ, ಬಂಗಾರ ಮೆರುಗಲ್ಲಿ...
ಸಿಂಧೂರ ಅರಸಿಹಳು, ಕ್ಷಣ.. ಕ್ಷಣ..

ಬೆಳ್ಳಿ ಚುಕ್ಕಿ ಬಾಲೆ ನೀನಂದೂ ಬಂದ ವೇಳೆ, ಮುಗಿಲಿನ ಹಾಳೆ ಬಂಗಾರ ಚಲ್ಲೋ ಮಾಲೆ
ಸ್ವಲ್ಪ ನಿನ್ನ ಪ್ರೀತಿ ತೋರಮ್ಮಾ...

ಪ್ರೀತಿಗೆ ಯಾರಾದ್ರೂ ಕರಗೋದು ಸುಳ್ಳೇನೆ, ಬೆಣ್ಣೆನೆ ಮಣ್ಣೆನೆ ಕಲ್ಲರಳಿ ಚಿತ್ರಾನೇ..
ಗುಡಿಯೇನ, ಮನೆಯೇನ ಎಲ್ಲಾವೂ ಒಂದೇನಾ , ನೀನ ಇದ್ರೇ ಇರುವೇನಾ,
ಇರುತಾವೇ ತಂದಾನಾ...
ಬಾ ಬಾರೇ ಬಾಲೆ, ಸುವ್ವಿ ಸುವ್ವಾಲೆ, ಕರಗಹೋಗುವ ಇಲ್ಲೇ ,ಈ ಪ್ರೀತಿ ಯಲ್ಲೇ
ಹಾಡು ಕಡೆದೋರ ಖವ್ವಾಲೆ ಪದವ, ಯಾರಿಲ್ಲ ನಮಗ, ನನ್ನವ್ವಾ ನೀನೇ ಬಳಗ
ಬಿಟ್ಟೋಗಬ್ಯಾಡ ಅಳುತಾವೆ ಎಲ್ಲ ಒಳಗ...

ಈ ಪ್ರೇಮ ಕಾರಣ, ಶರಣಾಗಿ ಹೋದೆನಾ..
ಬೆಳಕೆಲ್ಲ ಒಳ ಬಂದು, ಒಲವಲ್ಲಿ ಅದು ಮಿಂದು
ಹೊಸರಾಗ ಹರಿಸಿದೆಯೋ, ಕ್ಷಣ.. ಕ್ಷಣ..

ಬೆಳ್ಳಿ ಚುಕ್ಕಿ ಬಾಲೆ ನೀನಂದೂ ಬಂದ ವೇಳೆ, ಮುಗಿಲಿನ ಹಾಳೆ ಬಂಗಾರ ಚಲ್ಲೋ ಮಾಲೆ
ಸ್ವಲ್ಪ ನಿನ್ನ ಪ್ರೀತಿ ತೋರಮ್ಮಾ...
ಬೆಳ್ಳಿ ಚುಕ್ಕಿ ಬಾಲೆ ನೀನೊಂದು ಪ್ರೀತಿ ಶಾಲೆ,ಋತುಗಳೆ ಇಂದು ನಿನ್ನಕ್ಷರ ಮಾಲೆ
ನಾನು ನಿನ್ನ ಪ್ರೀತಿ ಸಾಲಮ್ಮಾ...

Sunday, May 14, 2017

ಅಮ್ಮ ನೀನು ನಮಗಾಗಿ, ಸಾವಿರ ವರುಷ ಸುಖವಾಗಿ...

ಚಿತ್ರ: ಕೆರಳಿದ ಸಿಂಹ....(1981)
ಸಾಹಿತ್ಯ :"ಸಾಹಿತ್ಯ ರತ್ನ" ಚಿ.ಉದಯಶಂಕರ್...
ಹಿನ್ನಲೆ ಗಾಯಕರು: ಡಾ. ರಾಜ್ ಕುಮಾರ್,
ಮತ್ತು ಡಾ.ಪಿ.ಬಿ.ಶ್ರೀನಿವಾಸ್...
-------------------------------------------------------------------
ಅಮ್ಮ ನೀನು ನಮಗಾಗಿ,
ಸಾವಿರ ವರುಷ ಸುಖವಾಗಿ,
ಬಾಳಲೆ ಬೇಕು ಈ ಮನೆ ಬೆಳಕಾಗಿ...

ಅಮ್ಮ ನೀನು ನಮಗಾಗಿ,
ಸಾವಿರ ವರುಷ ಸುಖವಾಗಿ,
ಬಾಳಲೆ ಬೇಕು ಈ ಮನೆ ಬೆಳಕಾಗಿ...

ಅಮ್ಮ ನೀನು ನಮಗಾಗಿ,
ಸಾವಿರ ವರುಷ ಸುಖವಾಗಿ...

ಬಾಡದ ತಾವರೆ ಹೂವಿನ ಹಾಗೆ,
ಎಂದಿಗು ಆರದ ಜ್ಯೋತಿಯ ಹಾಗೆ...
ಗೋಪುರವೇರಿದ ಕಲಶದ ಹಾಗೆ,
ಆ ಧೃವ ತಾರೆಯೆ ನಾಚುವ ಹಾಗೆ...
ಜೊತೆಯಲಿ ಎಂದೆಂದು ನೀ ಇರಬೇಕು,
ಬೇರೆ ಏನು ಬೇಡೆವು ನಾವು..‌.

ಅಮ್ಮ ನೀನು ನಮಗಾಗಿ,
ಸಾವಿರ ವರುಷ ಸುಖವಾಗಿ...

ಸಂಜೆಯ ಗಾಳಿಯ ತಂಪಿನ,
ಹಾಗೆ ಮಲ್ಲಿಗೆ ಹೂವಿನ ಕಂಪಿನ ಹಾಗೆ....
ಜೀವವ ತುಂಬುವ ಉಸಿರಿನ ಹಾಗೆ,
ನಮ್ಮನು ಸೇರಿ ಎಂದಿಗು ಹೀಗೆ...
ನಗುತಲಿ ಒಂದಾಗಿ ನೀ ಇರಬೇಕು,
ನಿನ್ನ ನೆರಳಲಿ ನಾವಿರಬೇಕು...

ಅಮ್ಮ ನೀನು ನಮಗಾಗಿ,
ಸಾವಿರ ವರುಷ ಸುಖವಾಗಿ...

ಸಾವಿರ ನದಿಗಳು ಸೇರಿದರೇನು,
ಸಾಗರಕೆ ಸಮನಾಗುವುದೇನು...
ಶತಕೋಟಿ ದೇವರು ಹರಸಿದರೇನು,
ಅಮ್ಮನ ಹರಕೆಗೆ ಸರಿಸಾಟಿಯೇನು....
ತಾಯಿಗೆ ಆನಂದ ತಂದರೆ ಸಾಕು,
ಬೇರೆ ಪೂಜೆ ಏತಕೆ ಬೇಕು...

ಅಮ್ಮ ನೀನು ನಮಗಾಗಿ,
ಸಾವಿರ ವರುಷ ಸುಖವಾಗಿ...

Sunday, May 7, 2017

ಚಿಂತೆ ಯಾಕೆ ಮಾಡುತಿಯೊ ಗೆಳೆಯ, (ಯಾರೆ ನೀನು ಚೆಲುವೆ) 1998

ಚಿತ್ರ : ಯಾರೆ ನೀನು ಚೆಲುವೆ.(1998)
ಸಾಹಿತ್ಯ : "ನಾದಬ್ರಹ್ಮ" ಹಂಸಲೇಖ...
ಗಾಯಕರು : ಎಸ್.ಪಿ.ಬಾಲಸುಬ್ರಹ್ಮಣ್ಯಂ...
----------------------------------------------------------
ಚಿಂತೆ ಯಾಕೆ ಮಾಡುತಿಯೊ ಗೆಳೆಯ,
ಎಳಯ್ಯ ಲವ್ವೇ ಹಿಗಯ್ಯ...
ಕಾದಮೇಲೆ ತಾನೆ ಪ್ರೀತಿ ಗೆಳೆಯ,
ಎಳಯ್ಯ ಕುಂತರೆ ಹ್ಯಾಗಯ್ಯ...

ಪ್ರೀತಿಗೆ ಅವಳುಂಟು, ಸ್ನೇಹಕ್ಕೆ ನಾನುಂಟು...
ಕಂಡಿದ್ದೆ ಕೇಳಿದ್ದೆ ಓದಿದ್ದೆ ಮೆಚ್ಚಿದ್ದೆ,
ನೂರಾರು ಲವ್ ಸ್ಟೋರಿಯ...
ಅವು ಹುಲಕಡ್ಡಿ ಆಗ್ಹೋದ್ವಯ್ಯ ,
ನಿನ್ನ ಲವ್ ಸ್ಟೋರಿ ಬೆಸ್ಟಾಯ್ತಯ್ಯ...

ಗೆಳೆಯ ಎಳಯ್ಯ, ಕುಂತರೆ ಹ್ಯಾಗಯ್ಯ..
ಚಿಂತೆ ಯಾಕೆ ಮಾಡುತಿಯೊ ಗೆಳೆಯ,
ಎಳಯ್ಯ ಲವ್ವೇ ಹಿಗಯ್ಯ...

ಪ್ರೀತಿ ಕುರುಡು ಪ್ರೀತಿನೆ ದೇವ್ರು,
ಅಂದ್ರು ಕವಿಗಳು ಸುಖವಾಗಿ...
ಸಾಕ್ಷಿ ಇಟ್ಟು ಸಾಬೀತು ಮಾಡಿದೆ,
ಗೆಳೆಯ ನೀನು ನಿಜವಾಗಿ...
ಕಾಣುತಿರುವ ದೇವರೊಡನೆ,
ಮಾತನಾಡೋ ಭಕ್ತನಂತೆ...
ಗೆಳೆಯ ನೀನಾದೆ, ಗೆಳೆಯ ನೀನಾದೆ...

ನೋಡದೇನೆ ಪ್ರೀತಿಮಾಡಿ,
ಗಿನ್ನಿಸ್ ಗೊಂದು ದಾಖಲೆ ನೀಡಿ...
ವಿರಹಿ ಯಾಕಾದೇ, ವಿರಹಿ ಯಾಕಾದೆ...
ಟೇಕಿಟೀಜಿ ಪಾಲಿಸೀ....
ಟೇಕಿಟೀಜಿ ಪಾಲಿಸಿ, ನಿನ್ನ ಚಿಂತೆಗೆ ಫಾರ್ಮಸಿ...

ಪ್ರೀತಿಗೆ ಅವಳುಂಟು, ಸ್ನೇಹಕ್ಕೆ ನಾನುಂಟು...
ಕಂಡಿದ್ದೆ ಕೇಳಿದ್ದೆ ಓದಿದ್ದೆ ಮೆಚ್ಚಿದ್ದೆ,
ನೂರಾರು ಲವ್ ಸ್ಟೋರಿಯ...
ಅವು ಹುಲಕಡ್ಡಿ ಆಗ್ಹೋದ್ವಯ್ಯ ,
ನಿನ್ನ ಲವ್ ಸ್ಟೋರಿ ಬೆಸ್ಟಾಯ್ತಯ್ಯ...

ಗೆಳೆಯ ಎಳಯ್ಯ, ಕುಂತರೆ ಹ್ಯಾಗಯ್ಯ..
ಚಿಂತೆ ಯಾಕೆ ಮಾಡುತಿಯೊ ಗೆಳೆಯ,
ಎಳಯ್ಯ ಲವ್ವೇ ಹಿಗಯ್ಯ...

ಅಣ್ಣಾ ಸ್ವಲ್ಪ ಬಿಸಿ ಮುಟ್ಸಣ್ಣಾ....

ಬಾಳು ನರಕ ಅನ್ನೊನು ತಿರುಕ,
ಅಂದ್ರು ಗೆಳೆಯ ತಿಳಿದವರು...
ನರಕದೊಳಗೆ ಸ್ವರ್ಗಾನೇ ಕಟ್ಟಿ,
ತೋರಿಸಿದರು ನಗುವವರು...
ನಗುವಿಗಿಂತ ಟಾಣಿಕ್ ಇಲ್ಲ,
ನಗುವಿನಂಥ ಮ್ಯಾಜಿಕ್ ಇಲ್ಲ...
ನಗುವ ಬಾ ಗೆಳೆಯ ಹಾ ಹಾ!
ನಗುವ ಬಾ ಗೆಳೆಯ...

ಪ್ರೀತಿ ಮಾಡಬಾರದಂತೆ,
ಮಾಡಿದರೆ ಅಳಬಾರದಂತೆ...
ನಗಿಸು ನನ್ನ ಗೆಳೆಯ..ಏ.. ಹೆಹೇ..
ಇಳಿಸು ಎದೆ ಹೊರೆಯ....
ನಗುವ ಪಾಲಿಸಿ ಪಾಲಿಸೂ...
ನಗುವ ಪಾಲಿಸು, ನಿನ್ನ ಗುರಿಯನು ಸಾಧಿಸು...

ಪ್ರೀತಿಗೆ ಅವಳುಂಟು, ಸ್ನೇಹಕ್ಕೆ ನಾನುಂಟು...
ಕಂಡಿದ್ದೆ ಕೇಳಿದ್ದೆ ಓದಿದ್ದೆ ಮೆಚ್ಚಿದ್ದೆ,
ನೂರಾರು ಲವ್ ಸ್ಟೋರಿಯ...
ಅವು ಹುಲಕಡ್ಡಿ ಆಗ್ಹೋದ್ವಯ್ಯ ,
ನಿನ್ನ ಲವ್ ಸ್ಟೋರಿ ಬೆಸ್ಟಾಯ್ತಯ್ಯ...

ಗೆಳೆಯ ಎಳಯ್ಯ, ಏಳ್ಹೆಜ್ಜೆ ಹಾಕಯ್ಯ..
ಚಿಂತೆ ಯಾಕೆ ಮಾಡುತಿಯೋ ಗೆಳೆಯ ಎಳಯ್ಯ...
ಲವ್ವೇ ಹೀಗಯ್ಯ...

Thursday, April 20, 2017

ಸಾಗರದ... ಅಲೆಗೂ ದಣಿವು... ಪರ್ವತಕು... ಬಿಳೋ ಭಯವು...(ರಾಜಕುಮಾರ)

ಚಿತ್ರ : ರಾಜಕುಮಾರ (2017)
ಸಾಹಿತ್ಯ : ಗೌಸಪೀರ್...
ಗಾಯಕರು : ಸೋನು ನಿಗಮ್...
************************************
ಸಾಗರದ... ಅಲೆಗೂ ದಣಿವು...
ಪರ್ವತಕು... ಬಿಳೋ ಭಯವು...
ಮಳೆಯ ಹನಿಗು ಬಂತು ನೋಡು ದಾಹ...
ಶಶಿಗೆ ಕಳಚಿ ಹೋಯ್ತು ಖುಷಿಯ ಸ್ನೇಹ...
ಹಾರಾಡೋ ಮೋಡವಿಂದು, ರೆಕ್ಕೆಗಳ ಮುರಿದುಕೊಂಡು...
ನಿಂತಿದೆ ಮಂಕಾಗಿ ಸುಮ್ಮನೇ...
ತಂಗಾಳಿ ಅಂಗಳವು ದಂಗಾಗಿ..
ಬೆವರಿರೊ ಸೂಚನೆ..

ಸಾಗರದ... ಅಲೆಗೂ ದಣಿವು..
ಬೆಂಕಿ ಮಳೆಗೆ ಬೆಂದಾ ಮೇಲೆ ಹೂವು...
ಹೇಗೆ ತಾನೆ ಕಾಣಬೇಕು ನಗುವು..?

ಬೇಸರದ ರಾಟೆಯು, ಎದೆಯಲಿ ತಿರುಗಿ...
ತಿರುಗುವ ಈ ಭೂಮಿಯೇ, ನಿಂತಿದೆ ಕೊರಗಿ...
ಬದುಕಿನ ಹೊಸ ರೂಪದ, ಪರಿಚಯವಾಗಿ...
ಬೆಳಕೆ ಕಳೆದ್ಹೋಗಿದೆ, ಸೂರ್ಯನು ಮುಳುಗಿ...
ಎಲ್ಲೇ ನೋಡು, ಹಳೆ ಗುರುತು...
ಬಾಳೋದ್ಹೇಗೆ, ಎಲ್ಲಾ ಮರೆತು...
ಬಯಸದೆ ನಾ ಎಲ್ಲ ಅಂದು, ಬಯಸಿದರೂ ಇಲ್ಲ ಇಂದು...
ಈಜುವುದ್ಹೇಗೆ ಕುದಿಯೊ ನದಿಯನ್ನ..?
ಚೂಪಾದ ಕಲ್ಲಿಂದ ಚೂರಾಯ್ತು, ಕನಸಿನಾ ದರ್ಪಣ...

ಸಾಗರದ...ಅಲೆಗೂ ದಣಿವು...

ಕಾಲಾ ನೀನು ಮಾಯ, ಮಾಯ...
ಇಲ್ಲ ನಿನಗೇ ನ್ಯಾಯ...
ವಾಸಿ ಮಾಡೋರ್ಯಾರು, ಯಾರು...
ಒಳಗೇ ಆದ ಗಾಯ...
ನಂಜು ಒಂದು, ಹೃದಯ ಸವರಿ...
ಮಂಜು ಕವಿದು, ಮುಪ್ಪುದಾರಿ...
ಗೆದ್ದಾಗ ಬೆನ್ನುತಟ್ಟಿ, ಬಿದ್ದಾಗ ಮೇಲೆ ಎತ್ತಿ...
ಜೊತೆಯಲಿ ನಿಲ್ಲೋರಿಲ್ಲಾ ಒಂಟಿ ನಾ...
ಆಸೆಗಳ ಆಕಾಶ ಪಾತಾಳ...
ಮುಟ್ಟಿದೆ ಈ ದಿನ...

ಸಾಗರದ... ಅಲೆಗೂ ದಣಿವು...
ಬೆಂಕಿ ಮಳೆಗೆ ಬೆಂದಾ ಮೇಲೆ ಹೂವು...
ಹೇಗೆ ತಾನೆ ಕಾಣಬೇಕು ನಗುವು..?

Wednesday, April 12, 2017

ದೋಣಿ ಸಾಗಲಿ ಮುಂದೆ ಹೋಗಲಿ

ಚಲನಚಿತ್ರ: ಮಿಸ್ ಲೀಲಾವತಿ ....(1965)
ಸಾಹಿತ್ಯ : ರಾಷ್ಟ್ರಕವಿ "ಕುವೆಂಪು"
ಗಾಯಕರು: ಎಸ್. ಜಾನಕಿ, ರಾಮಚಂದ್ರ ರಾವ್.
----------------------------------------------------------------
ದೋಣಿ ಸಾಗಲಿ ಮುಂದೆ ಹೋಗಲಿ
ದೂರ ತೀರವ ಸೇರಲಿ
ಬೀಸು ಗಾಳಿಗೆ ಬೀಳುತೇಳುವ
ತೆರೆಯ ಮೇಗಡೆ ಹಾರಲಿ ||ಪ||

ಹೊನ್ನಗಿಂಡಿಯ ಹಿಡಿದು ಕೈಯೊಳು,
ಹೇಮವಾರಿಯ ಚಿಮುಕಿಸೆ..
ಮೇಘಮಾಲೆಗೆ ಬಣ್ಣವೀಯುತ,
ಯಕ್ಷಲೋಕವ ವಿರಚಿಸೆ..
ನೋಡಿ ಮೂಡಣದಾ ದಿಗಂತದಿ,
ಮೂಡುವೆಣ್ಣಿನ ಮೈಸಿರಿ....
ರಂಜಿಸುತ್ತಿದೆ ಚೆಲುವೆಯಾಕೆಗೆ,
ಸುಪ್ರಭಾತವ ಬಯಸಿರಿ.... ||1||

ಕೆರೆಯ ಅಂಚಿನ ಮೇಲೆ ಮಿಂಚಿನ,
ಹನಿಗಳಂದದಿ ಹಿಮಮಣಿ....
ಮಿಂಚುತೀರ್ಪುವು ಮೂಡುತೈತರೆ,
ಬಾಲಕೋಮಲ ದಿನಮಣಿ....
ಹಸಿರು ಜೋಳದ ಹೊಲದ ಗಾಳಿಯು,
ತೀಡಿ ತಣ್ಣಗೆ ಬರುತಿದೆ....
ಹುದುಗಿ ಹಾಡುವ ಮತ್ತ ಕೋಕಿಲ,
ಮಧುರ ವಾಣಿಯ ತರುತಿದೆ.... ||2||

ದೂರ ಬೆಟ್ಟದ ಮೇಲೆ ತೇಲುವ,
ಬಿಳಿಯ ಮೋಡವ ನೋಡಿರಿ...
ಅದನೆ ಹೋಲುತ ಅಂತೆ ತೇಲುತ,
ದೋಣಿಯಾಟವನಾಡಿರಿ...
ನಾವು ಲೀಲಾಮಾತ್ರ ಜೀವರು,
ನಮ್ಮ ಜೀವನ ಲೀಲೆಗೆ....
ನೆನ್ನೆ ನೆನ್ನೆಗೆ ಇಂದು ಇಂದಿಗೆ,
ಇರಲಿ ನಾಳೆಯು ನಾಳೆಗೆ .... ||3||