Tuesday, July 19, 2016

ಬಾ ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜಾ.....( ಕಾಮನ ಬಿಲ್ಲು..)

ಚಿತ್ರ : ಕಾಮನ ಬಿಲ್ಲು...(೧೯೮೩)
ಸಾಹಿತ್ಯ : "ಸಾಹಿತ್ಯರತ್ನ" ಚಿ||ಉದಯಶಂಕರ....
ಗಾಯಕರು : ಡಾ|| ರಾಜ್ ಕುಮಾರ್...
---------------------------------------------------

ಬಾ ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜಾ.....

ನಿನ್ನ ಹವಳದಂಥ ತುಟಿಗೆ ಇಂದು, (ಮುತ್ತು)ಎಂದು ನಾನು...

ನಿನ್ನ ಮೊಗವನ್ನು ಕಂಡಾಗ ನಾಚಿ, ಶಶಿ ಮೋಡದಲಿ ಮರೆಯಾದನು..ಹೋ..
ನಿನ್ನ ತುಂಟಾಟ ನೋಡಿ ಬೆರಗಾಗಿ, ಕೃಷ್ಣ ಗುಡಿಯಲ್ಲಿ ಶಿಲೆಯಾದನು...
ನೀನಾಡೋ ತೊದಲು ನುಡಿ, ಅರಗಿಣಿಯ ಮಾತಂತೆ...
ನೀನಾಡೋ ತೊದಲು ನುಡಿ, ಅರಗಿಣಿಯ ಮಾತಂತೆ...
ಸವಿಜೇನ ಹನಿಯಂತೆ ನನ್ನ ಮುದ್ದು ರಾಜಾ...

 ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜಾ.....
ಬಾ ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜಾ.....
ನಿನ್ನ ಹವಳದಂಥ ತುಟಿಗೆ ಇಂದು, (ಮುತ್ತು)ಎಂದು ನಾನು...
ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜಾ.....
ಬಾ ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜಾ.....

ನಕ್ಕು ನಲಿವಾಗ ಬೆಳದಿಂಗಳಂತೆ, ನೀನು ಅತ್ತಾಗ ಸಂಗೀತವೋ...ಹ್ಹ್ ಹ್ಹ್...
ಅತ್ತ ಬಂಗಾರದ ಗೊಂಬೆಯಂತೆ, ಕಂದ ಈ ಮನೆಗೆ ನೀ ಪ್ರಾಣವೂ...
ನಿನ್ನನ್ನು ಬಣ್ಣಿಸಲು, ನನ್ನಲ್ಲಿ ಮಾತಿಲ್ಲಾ...

ನೀ ನನ್ನ ಉಸಿರಂತೆ ನನ್ನ ಮುದ್ದು ರಾಜಾ...

 ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜಾ.....
ಬಾ ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜಾ.....
ನಿನ್ನ ಹವಳದಂಥ ತುಟಿಗೆ ಇಂದು, (ಮುತ್ತು)ಎಂದು ನಾನು...
ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜಾ.....
ಬಾ ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜಾ.....

(ಅಳಬೇಡ ಮರಿ,ಅಳಬೇಡ ಮರಿ, ಉಳ್ಳ ಉಳ್ಳಳ್ಳ್ ಲಾಯೀ...
ಅಳಬೇಡ ಚಿನ್ನ, ಅಳಬೇಡ ಚಿನ್ನ, ಚೆಂದಾಮಾಮನ ನೋಡ್ತೀಯಾ,
ಬೆಣ್ಣೆ ತಿನಸ್ಲಾ..? ಹಾಲ ಕುಡಸ್ಲಾ..?
ಅಯ್ಯೋ ಏನಪ್ಪಾ ಮಾಡ್ಲೀ ಇವಾಗ ನಾನು...?
ಹೋ ಬ್ಯಾಡ ಮರಿ,ಬ್ಯಾಡ ಮರಿ...
ಬಾ ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜಾ.....
ಬಾ ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜಾ.....
ಬಾ ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜಾ.....
ಹಾ..ಹಾ..ಹಾಹಾ..ಹಾಹಾ....ಹುಯ್ಯೀ ಹುಯ್ಯೀ....)

No comments: