Friday, July 29, 2016

ನೋಡಿಸ್ವಾಮಿ ನಾವಿರೋದು ಹೀಗೆ...(1983)

ಚಿತ್ರ : ನೋಡಿಸ್ವಾಮಿ ನಾವಿರೋದು ಹೀಗೆ...(1983)
ಸಾಹಿತ್ಯ : "ಸಾಹಿತ್ಯರತ್ನ" ಚಿ|| ಉದಯಶಂಕರ್...
ಗಾಯಕರು : ಡಾ|| ಎಸ್.ಪಿ.ಬಾಲಸುಬ್ರಹ್ಮಣ್ಯಂ...
-------------------------------------------------

ನೋಡಿ ಸ್ವಾಮಿ... ನಾವಿರೋದು ಹೀಗೆ...

ನೋಡಿ ಸ್ವಾಮಿ... ನೋಡಿ ಸ್ವಾಮಿ...
ನೋಡಿ ಸ್ವಾಮಿ... ನೋಡಿ ಸ್ವಾಮಿ...

ಅರೆ, ನೋಡಿ ಸ್ವಾಮಿ... ನಾವಿರೋದು ಹೀಗೆ...
ನೋಡಿ ಸ್ವಾಮಿ... ನಾವಿರೋದು ಹೀಗೆ...
ನೋಡಿ ಸ್ವಾಮಿ... ಸ್ವಾಮಿ.. ನೋಡಿ ಸ್ವಾಮಿ... ಸ್ವಾಮಿ... 
ನೋಡಿ ಸ್ವಾಮಿ...ಆಹಾ! | ನೋಡಿ ಸ್ವಾಮಿ...ಓಹೋ!

ನಾಳೆ ಎನ್ನುವ ಚಿಂತೆ ಮನದಲಿ ನಮಗಿಲ್ಲ...
ನಿನ್ನೆ ನಡೆದುದಾ ಮತ್ತೆ ಎಂದಿಗೂ ನೆನೆಯೊಲ್ಲ...

ಹಾ! ನಾಳೆ ಎನ್ನುವ ಚಿಂತೆ ಮನದಲಿ ನಮಗಿಲ್ಲ...
ನಿನ್ನೆ ನಡೆದುದಾ ಮತ್ತೆ ಎಂದಿಗೂ ನೆನೆಯೊಲ್ಲ...
ಇಂದು ಏನು ಬೇಕು, ಅದರ ಚಿಂತೆ ಸಾಕು... ಅಷ್ಟೇ...
ಇಂದೂ ಏನು ಬೇಕೂ..ಊ.. ಅದರ ಚಿಂತೆ ಸಾಕು...
ಈ ಬದುಕು ಸಾಗೋ ರೀತಿ ಹೀಗೆ....ಎ...

ನೋಡಿ ಸ್ವಾಮಿ... ಏಏ! | ನೋಡಿ ಸ್ವಾಮಿ... ಆಹಾ!
ನೋಡಿ ಸ್ವಾಮಿ...ಅಪನ್ ಕಾ ಭಾಯ್ | ನೋಡಿ ಸ್ವಾಮಿ...ಐಸೇಹೈ...
ಏ, ನೋಡಿ ಸ್ವಾಮಿ... ನಾವಿರೋದು ಹೀಗೆ...
ಅರೆ, ನೋಡಿ ಸ್ವಾಮಿ... ನಾವಿರೋದು ಹೀಗೆ...ಎ...ಯಾ...

ಎಲ್ಲಿ ಜೀವನ ನಡೆವುದೋ ಅದೇ ನಮ್ಮೂರು...
ಯಾರು ಸ್ನೇಹದಿ ಬರುವರೋ ಅವರೆ ನಮ್ಮೋರು...
ಹಾ! ಎಲ್ಲಿ ಜೀವನ ನಡೆವುದೋ ಅದೇ ನಮ್ಮೂರು...
ಯಾರು ಸ್ನೇಹದಿ ಬರುವರೋ ಅವರೆ ನಮ್ಮೋರು...
ಯಾರೂ ಮಿತ್ರರಲ್ಲಾ...ಹಾ! ಯಾರೂ ಶತ್ರುವಲ್ಲಾ...ಹೇ!
ಯಾರೂ ಮಿತ್ರರಲ್ಲಾ...ಆ.. ಯಾರೂ ಶತ್ರುವಲ್ಲಾ...ಆ..
ಈ ಬಗೆಯ ಬದುಕು ನಮದು ಎಂದೂ...ಊ...

ನೋಡಿ ಸ್ವಾಮಿ...ಹೇ ಭಗವಾನ...
ನೋಡಿ ಸ್ವಾಮಿ...ಇಕ್ಕಡ್ ಚೂಡು...
ನೋಡಿ ಸ್ವಾಮಿ...ನೇನಿ ಅಮ್ಮ ಸ್ವಾಮಿ...
ನೋಡಿ ಸ್ವಾಮಿ...ಹಾ!!

ಅರೆ, ನೋಡಿ ಸ್ವಾಮಿ... ನಾವಿರೋದು ಹೀಗೆ...ಎ...ಯಾ...
ಅರೆ, ನೋಡಿ ಸ್ವಾಮಿ... ನಾವಿರೋದು ಹೀಗೆ...ಹೋ!!

ಯಾರೋ ಯಾರೋ, ಈ ನಾಲ್ವರು..... ( ಸಿರಿವಂತ )

Tuesday, July 26, 2016

ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ...(ಹಗಲು ವೇಷ)

ಚಿತ್ರ : ಹಗಲುವೇಷ....(2000)
ಸಾಹಿತ್ಯ : ಬರಗೂರು ರಾಮಚಂದ್ರಪ್ಪನವರು...
ಗಾಯಕರು : ಡಾ|| ರಾಜಕುಮಾರ್... ಮತ್ತು...ಸಂಗಡಿಗರು
-----------------------------------------------------------

ಇಂಡಿಯಾ ಇಂಡಿಯಾ ನಮ್ಮ ಇಂಡಿಯಾ..
ಇಂಡಿಯಾ ಇಂಡಿಯಾ ನಮ್ಮ ಇಂಡಿಯಾ...
ಬೆವರಿನ ಬೆಳಕಿನ ಬೆಟ್ಟ ಇಂಡಿಯಾ, 
ದುಡಿಮೆಯ ಹಿರಿಮೆಯ ಗೆದ್ದ ಇಂಡಿಯಾ...

ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ...
ಅಗ್ಗದ ಅರಸರಿಗೆಂದಿಗೂ ಕುಗ್ಗದೂ ಇಂಡಿಯಾ...
ನಮ್ಮ ಇಂಡಿಯಾ, ಬೆವರಿನ ಇಂಡಿಯಾ...
ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ...
ಅಗ್ಗದ ಅರಸರಿಗೆಂದಿಗೂ ಕುಗ್ಗದೂ ಇಂಡಿಯಾ...
ನಮ್ಮ ಇಂಡಿಯಾ, ಬೆವರಿನ ಇಂಡಿಯಾ...
ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ...||

ಬಂಡೆ ಬಂಡೆಯ ಮೇಲೆ, ಗಂಡು ಅರಳಿದ ಲೀಲೆ...
ಗುಂಡು ಹೊಡೆಯೋ ಗಂಡು, ಪಳಗಿ ನಿಂತ ಬೆಂಡು...
ಬಿಡುಗಡೆಯ ಬೆಳಕನ್ನು ಚೆಲ್ಲೋ...ಓಓಓಓಓ..ಓಓಓ..
ಬಿಡುಗಡೆಯ ಬೆಳಕನ್ನು ಚೆಲ್ಲೋ, ಬಂಡಾಯದ ಗುಂಡಿಗೆ...||

ಜಗ್ಗದು ಜಗ್ಗದು....
ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ...
ಅಗ್ಗದ ಅರಸರಿಗೆಂದಿಗೂ ಕುಗ್ಗದೂ ಇಂಡಿಯಾ...
ನಮ್ಮ ಇಂಡಿಯಾ, ಬೆವರಿನ ಇಂಡಿಯಾ...
ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ...

ಇಂಡಿಯಾ ಇಂಡಿಯಾ ನಮ್ಮ ಇಂಡಿಯಾ..
ಇಂಡಿಯಾ ಇಂಡಿಯಾ ನಮ್ಮ ಇಂಡಿಯಾ...


ಕೋಟೆ ಕೊತ್ತಳಕಾದ, ಕೋಡ ಹಿಡಿ ಪದ ಹಣತೆ...
ನಾಡಿಗೆ ದಿನವು ದುಡಿದ, ಕೂಲಿ ಕಂಬಳಿ ಜನತೆ...
ಸ್ವಾತಂತ್ರ್ಯದ ಹಕ್ಕನ್ನು ಕೇಳಿ...ಓಓಓಓಓ...ಓಓಓ...
ಸ್ವಾತಂತ್ರ್ಯದ ಹಕ್ಕನ್ನು ಕೇಳಿ, ಎದ್ದೂ ನಿಂತ ಜನತೆ...||

ಜಗ್ಗದು ಜಗ್ಗದು....
ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ...
ಅಗ್ಗದ ಅರಸರಿಗೆಂದಿಗೂ ಕುಗ್ಗದೂ ಇಂಡಿಯಾ...
ನಮ್ಮ ಇಂಡಿಯಾ, ಬೆವರಿನ ಇಂಡಿಯಾ...
ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ...

ಇಂಡಿಯಾ ಇಂಡಿಯಾ ನಮ್ಮ ಇಂಡಿಯಾ..
ಇಂಡಿಯಾ ಇಂಡಿಯಾ ನಮ್ಮ ಇಂಡಿಯಾ...
ಬೇವರಿನ ಬೆಳಕಿನ ಬೆಟ್ಟ ಇಂಡಿಯಾ, 
ದುಡಿಮೆಯ ಹಿರಿಮೆಯ ಗೆದ್ದ ಇಂಡಿಯಾ...

ಹಾಳೆ ಹಾಳೇಯ ಮೇಲೆ, ಮಿಂಚು ಮಾತಿನ ನಾಳೆ...
ಜನಪರರ ಕೊರಳಲ್ಲಿ, ಬಿಡುಗಡೆಯ ರಣ ಕಹಳೆ...
ಮೂರು ಬಣ್ಣದ ಬಾವುಟ ಹಿಡಿದ..
ಆಆಆಆಆ...ಆಆಆ.. ಓಓಓಓಓ...ಓಓಓ...
ಮೂರು ಬಣ್ಣದ ಬಾವುಟ ಹಿಡಿದ, ಸಿಡಿಲ ಮುತ್ತಿನ ಮಾಲೆ...||

ಜಗ್ಗದು ಜಗ್ಗದು.....
ಜಗ್ಗದು ಜಗ್ಗದು..... 
ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ...
ಅಗ್ಗದ ಅರಸರಿಗೆಂದಿಗೂ ಕುಗ್ಗದೂ ಇಂಡಿಯಾ...
ನಮ್ಮ ಇಂಡಿಯಾ, ಬೆವರಿನ ಇಂಡಿಯಾ...
ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ...
ಅಗ್ಗದ ಅರಸರಿಗೆಂದಿಗೂ ಕುಗ್ಗದೂ ಇಂಡಿಯಾ...
ನಮ್ಮ ಇಂಡಿಯಾ, ಬೆವರಿನ ಇಂಡಿಯಾ...
ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ...||

Saturday, July 23, 2016

ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ, ಹೊಸ ಹಕ್ಕಿಯ ನೋಡಿದೆ.....(ಆನಂದ.....)

ಚಿತ್ರ : ಆನಂದ.....(1986)
ಸಾಹಿತ್ಯ : "ಸಾಹಿತ್ಯರತ್ನ" ಚಿ||ಉದಯಶಂಕರ್.....
ಗಾಯಕರು : ಡಾ|| ಎಸ್.ಪಿ.ಬಾಲಸುಬ್ರಹ್ಮಣ್ಯಂ....
--------------------------------------------
ಹೇ.........
ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ,
ಹೊಸ ಹಕ್ಕಿಯ ನೋಡಿದೆ.....
ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ,
ಹೊಸ ಹಕ್ಕಿಯ ನೋಡಿದೆ.......
ಕೇಳುತಾ, ಕೇಳುತ, ಮೇಲೆ ನಾ ಹಾರಿದೇ....
ಕೇಳುತಾ, ಕೇಳುತ, ಮೇಲೆ ನಾ ಹಾರಿದೇ.... ಹಾಡಿದೆ....
ಟುವ್ವಿ ಟುವ್ವಿ || ಟುವ್ವಿ ಟುವ್ವಿ
ಟುವ್ವಿ.. ಟುವ್ವಿ.. ಟುವ್ವೀ....

ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ,
ಹೊಸ ಹಕ್ಕಿಯ ನೋಡಿದೆ..............
ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ,
ಹೊಸ ಹಕ್ಕಿಯ ನೋಡಿದೆ..............

ಕೇಳುತಾ ಕೇಳುತ ಮೇಲೆ ನಾ ಹಾರಿದೇ..ಹೇ..
ಕೇಳುತಾ ಕೇಳುತ ಮೇಲೆ ನಾ ಹಾರಿದೇ..
ಹಾಡಿದೆ.. ಟುವ್ವಿ ಟುವ್ವಿ

ಟುವ್ವಿ ಟುವ್ವಿ.
ಟುವ್ವಿ.. ಟುವ್ವಿ.. ಟುವ್ವೀ....

ನಿನ್ನೆಯು ಮುಗಿದುದು, ನಾಳೆಯು ಕನಸದು...
ತುಂಬಿದ ಯೌವನ, ಈ ದಿನ ನಮ್ಮದು...
ಎನ್ನುತಾ ಆಡಿದೆ, ಆಗ ಹೊಸತನ ನೋಡಿದೆ...
ನಿನ್ನೆಯು ಮುಗಿದುದು, ನಾಳೆಯು ಕನಸದು....
ತುಂಬಿದ ಯೌವನ, ಈ ದಿನ ನಮ್ಮದು....
ಎನ್ನುತಾ ಆಡಿದೆ, ಆಗ ಹೊಸತನ ನೋಡಿದೆ....
ನೂರು ಕಲ್ಪನೆ ಮಾಡಿದೆ, ನೂರು ರಾಗವ ಹಾಡಿದೆ....
ನೂರು ಕಲ್ಪನೆ ಮಾಡಿದೆ, ನೂರು ರಾಗವ ಹಾಡಿದೆ....

ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ,
ಹೊಸ ಹಕ್ಕಿಯ ನೋಡಿದೆ.........
ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ,
ಹೊಸ ಹಕ್ಕಿಯ ನೋಡಿದೆ......

ಕೇಳುತಾ ಹಹ.. ಕೇಳುತ ಹೆಹೇ.. ಮೇಲೆ ನಾ ಹಾರಿದೇ..ಹೇ..
ಕೇಳುತಾ ಕೇಳುತ, ಮೇಲೆ ನಾ ಹಾರಿದೇ..
ಹಾಡಿದೆ...ಟುವ್ವಿ ಟುವ್ವಿ..
ಟುವ್ವಿ ಟುವ್ವಿ..ಟುವ್ವಿ..
ಟುವ್ವಿ.. ಟುವ್ವೀ....

ರಪ್ಪಪ್ಪಾ.. ರಪ್ಪಪ್ಪಾ.. ರಪ್ಪಪ್ಪಪ್ಪ..
ರಪ್ಪಪ್ಪಾ.. ರಪ್ಪಪ್ಪಾ.. ರಪ್ಪಪ್ಪಪ್ಪ..
ರಪ್ಪಪ್ಪಪಾಪ.. ಪಪ್ಪಪ್ಪಪ್ಪಾ..
ರಪ್ಪಪ್ಪಪಾಪ.. ಪಪ್ಪಪ್ಪಪ್ಪಾ..

ಸೂರ್ಯನ ಕಿರಣವ ಕೈಯಲಿ ಹಿಡಿದೆನು.....
ಮೋಡವ ಕರಗಿಸಿ ಆಡುತ ಕುಡಿದೆನು....
ಎಣಿಸುತಾ ತಾರೆಯ, ನಾನು ಕಳೆದೆನು ರಾತ್ರಿಯಾ......
ತರತರಪರಪ್ಪರಪ್ಪ..
ಸೂರ್ಯನ ಕಿರಣವ ಕೈಯಲಿ ಹಿಡಿದೆನು....
ಮೋಡವ ಕರಗಿಸಿ ಆಡುತ ಕುಡಿದೆನು.....
ಎಣಿಸುತಾ ತಾರೆಯ, ನಾನು ಕಳೆದೆನು ರಾತ್ರಿಯಾ......
ಮುಗಿಲ ಮೆತ್ತೆಯಲಿ ತೇಲಿದೆ, ಭುವಿಯ ಅಂದವನು ನೋಡಿದೆ....
ಮುಗಿಲ ಮೆತ್ತೆಯಲಿ ತೇಲಿದೆ, ಭುವಿಯ ಅಂದವನು ನೋಡಿದೆ....

ಟುವ್ವಿ ಟುವ್ವೀ.. ಟುವ್ವಿ ಎಂದು ಹಾಡುವ
ಹೊಸ ಹಕ್ಕಿಯ ನೋಡಿದೆ.. (Everybody)
ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ,
ಹೊಸ ಹಕ್ಕಿಯ ನೋಡಿದೆ

ಹೆ.. ಕೇಳುತಾ ಕೇಳುತ ಮೇಲೆ ನಾ ಹಾರಿದೇ..
ಹಾಗೆ ಜೊಯ್ನ್ ಫೋಕ್ಸ್.....
ಕೇಳುತಾ.........ಹುಹೂ..
ಕೇಳುತ...........ಹಹಾ..
ಮೇಲೆ ನಾ ಹಾರಿದೇ......ಹಾಡಿದೆ..
ಟುವ್ವಿ ಟುವ್ವಿ.......ಟುವ್ವಿ ಟುವ್ವಿ
ಟುವ್ವಿ.........ಟುವ್ವಿ.. ಟುವ್ವೀ....

Tuesday, July 19, 2016

ಬಾ ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜಾ.....( ಕಾಮನ ಬಿಲ್ಲು..)

ಚಿತ್ರ : ಕಾಮನ ಬಿಲ್ಲು...(೧೯೮೩)
ಸಾಹಿತ್ಯ : "ಸಾಹಿತ್ಯರತ್ನ" ಚಿ||ಉದಯಶಂಕರ....
ಗಾಯಕರು : ಡಾ|| ರಾಜ್ ಕುಮಾರ್...
---------------------------------------------------

ಬಾ ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜಾ.....
ಬಾ ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜಾ.....
ನಿನ್ನ ಹವಳದಂಥ ತುಟಿಗೆ ಇಂದು, (ಮುತ್ತು)ಎಂದು ನಾನು...
ಬಾ ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜಾ.....
ಬಾ ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜಾ.....

ನಿನ್ನ ಮೊಗವನ್ನು ಕಂಡಾಗ ನಾಚಿ, ಶಶಿ ಮೋಡದಲಿ ಮರೆಯಾದನು..ಹೋ..
ನಿನ್ನ ತುಂಟಾಟ ನೋಡಿ ಬೆರಗಾಗಿ, ಕೃಷ್ಣ ಗುಡಿಯಲ್ಲಿ ಶಿಲೆಯಾದನು...
ನೀನಾಡೋ ತೊದಲು ನುಡಿ, ಅರಗಿಣಿಯ ಮಾತಂತೆ...
ನೀನಾಡೋ ತೊದಲು ನುಡಿ, ಅರಗಿಣಿಯ ಮಾತಂತೆ...
ಸವಿಜೇನ ಹನಿಯಂತೆ ನನ್ನ ಮುದ್ದು ರಾಜಾ...

 ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜಾ.....
ಬಾ ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜಾ.....
ನಿನ್ನ ಹವಳದಂಥ ತುಟಿಗೆ ಇಂದು, (ಮುತ್ತು)ಎಂದು ನಾನು...
ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜಾ.....
ಬಾ ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜಾ.....

ನಕ್ಕು ನಲಿವಾಗ ಬೆಳದಿಂಗಳಂತೆ, ನೀನು ಅತ್ತಾಗ ಸಂಗೀತವೋ...ಹ್ಹ್ ಹ್ಹ್...
ಅತ್ತ ಬಂಗಾರದ ಗೊಂಬೆಯಂತೆ, ಕಂದ ಈ ಮನೆಗೆ ನೀ ಪ್ರಾಣವೂ...
ನಿನ್ನನ್ನು ಬಣ್ಣಿಸಲು, ನನ್ನಲ್ಲಿ ಮಾತಿಲ್ಲಾ...
ನಿನ್ನನ್ನು ಬಣ್ಣಿಸಲು, ನನ್ನಲ್ಲಿ ಮಾತಿಲ್ಲಾ...
ನೀ ನನ್ನ ಉಸಿರಂತೆ ನನ್ನ ಮುದ್ದು ರಾಜಾ...

 ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜಾ.....
ಬಾ ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜಾ.....
ನಿನ್ನ ಹವಳದಂಥ ತುಟಿಗೆ ಇಂದು, (ಮುತ್ತು)ಎಂದು ನಾನು...
ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜಾ.....
ಬಾ ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜಾ.....

(ಅಳಬೇಡ ಮರಿ,ಅಳಬೇಡ ಮರಿ, ಉಳ್ಳ ಉಳ್ಳಳ್ಳ್ ಲಾಯೀ...
ಅಳಬೇಡ ಚಿನ್ನ, ಅಳಬೇಡ ಚಿನ್ನ, ಚೆಂದಾಮಾಮನ ನೋಡ್ತೀಯಾ,
ಬೆಣ್ಣೆ ತಿನಸ್ಲಾ..? ಹಾಲ ಕುಡಸ್ಲಾ..?
ಅಯ್ಯೋ ಏನಪ್ಪಾ ಮಾಡ್ಲೀ ಇವಾಗ ನಾನು...?
ಹೋ ಬ್ಯಾಡ ಮರಿ,ಬ್ಯಾಡ ಮರಿ...
ಬಾ ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜಾ.....
ಬಾ ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜಾ.....
ಬಾ ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜಾ.....
ಹಾ..ಹಾ..ಹಾಹಾ..ಹಾಹಾ....ಹುಯ್ಯೀ ಹುಯ್ಯೀ....)

ನೀನಾಡೋ ಮಾತೆಲ್ಲ ಚೆಂದಾ, ನಿನ್ನಿಂದ ಈ ಬಾಳೇ ಅಂದಾ...( ವಸಂತ ಗೀತ.... )

ಚಿತ್ರ : ವಸಂತ ಗೀತ.... (೧೯೮೦)
ಸಾಹಿತ್ಯ : "ಸಾಹಿತ್ಯರತ್ನ" ಚಿ||ಉದಯಶಂಕರ....
ಗಾಯಕರು : ಡಾ|| ರಾಜ್ ಕುಮಾರ್...
-----------------------------------------------------

ನೀನಾಡೋ ಮಾತೆಲ್ಲ ಚೆಂದಾ, ನಿನ್ನಿಂದ ಈ ಬಾಳೇ ಅಂದಾ...
ಹೋಯ್ಯೀ ಹೋಯ್ಯೀ ಹೋಯ್ಯೀ....
ನೀನಾಡೋ ಮಾತೆಲ್ಲ ಚೆಂದಾ, ನಿನ್ನಿಂದ ಈ ಬಾಳೇ ಅಂದಾ...
ನನಗಾಗಿ ನೀ ಬಂದೇ, ನಿನಗಾಗಿ ನಾ ಬಂದೇ....
ನನಗಾಗಿ ನೀ ಬಂದೇ, ನಿನಗಾಗಿ ನಾ ಬಂದೇ....
ಮನ ಆಸೆಯ ಕಡಲಾಗಿದೆ, ತನು ಹೂವಿನ ಒಡಲಾಗಿದೆ...ಹೇ...

ನೀನಾಡೋ ಮಾತೆಲ್ಲ ಚೆಂದಾ, ನಿನ್ನಿಂದ ಈ ಬಾಳೇ ಅಂದಾ...

ಕಂದ ನೀನಂದು ಕಾಣದಾದಾಗ, ಬಾಳು ಇರುಳಾಯಿತೂ...
ನನ್ನ ಈ ಜೀವ, ತಾಳದೆ ನೋವ, ಸಾಕು ಸಾಕಾಯಿತು....
ಹಾ..ಹಾಹಾಹಾ... ಹೇ ಹೇಹೇಹೇ...
ನೀನು ನನ್ನಿಂದ ದೂರವಾದಾಗ, ಕಂದ ನಾ ಉಳಿಯೇನು...
ಹೂವ ಕಂಪಂತೆ, ಗಾಳಿ ತಂಪಂತೆ, ರಾಗದಿಂಪಂತೆ, ಸಂಜೇ ಗೆಂಪಂತೆ,
ನನ್ನಲ್ಲಿಯೇ ಒಂದಾಗಿರು, ಈ ದೇಹಕೆ ಉಸಿರಾಗಿರೂ...ಓ...ಹೇ..

ನೀನಾಡೋ ಮಾತೆಲ್ಲ ಚೆಂದಾ, ನಿನ್ನಿಂದ ಈ ಬಾಳೇ ಅಂದಾ...

ಇಂಥ ಮುದ್ದಾದ ಹೆಣ್ಣು ಮಗುವನ್ನು, ಎಂದೂ ನಾ ಕಾಣೇನು...
ನಿನ್ನ ಈ ವೇಶ, ಮೊದಲು ಕಂಡಾಗ, ನಾನೇ ಬೆರೆಗಾದೇನು...
ಓಹೋಹೋ ಹೋಹೋ... ಆಹಾಹಾ ಹಾ ಆಆ...
ದಾಡಿ ಬಿಳುಪಾಗಿ, ಬೆನ್ನು ಬಿರುಸಾಗಿ, ನಾನು ಮುದಿಯಾದೇನು...
ಬೇರೆ ಮಾಡೋರು, ಯಾರು ಇನ್ನೀಲ್ಲ, ವೇಶ ನಮದೆಂದು, ಯಾರು ಹೇಳಲ್ಲ,
ನಿಮ್ಮಮ್ಮನೇ ಎದುರಾದರು, ನಮ್ಮೀಬ್ಬರ ಗುರುತಾಗದೂ...ಹೇ...

ನೀನಾಡೋ ಮಾತೆಲ್ಲ ಚೆಂದಾ, ನಿನ್ನಿಂದ ಈ ಬಾಳೇ ಅಂದಾ...
ನನಗಾಗಿ ನೀ ಬಂದೇ, ನಿನಗಾಗಿ ನಾ ಬಂದೇ....
ನನಗಾಗಿ ನೀ ಬಂದೇ, ನಿನಗಾಗಿ ನಾ ಬಂದೇ....
ಮನ ಆಸೆಯ ಕಡಲಾಗಿದೆ, ತನು ಹೂವಿನ ಒಡಲಾಗಿದೆ...ಹೇ...
ನೀನಾಡೋ ಮಾತೆಲ್ಲ ಚೆಂದಾ, ನಿನ್ನಿಂದ ಈ ಬಾಳೇ ಅಂದಾ...

Thursday, July 14, 2016

ಅಂದವೋ ಅಂದವು ಕನ್ನಡ ನಾಡು...ಹೇಹೇ...(ಮಲ್ಲಿಗೆ ಹೂವೇ)

ಚಿತ್ರ : ಮಲ್ಲಿಗೆ ಹೂವೇ...(1992)
ಸಾಹಿತ್ಯ : "ನಾದಬ್ರಹ್ಮ" ಹಂಸಲೇಖ...♪♫♪
ಗಾಯಕರು : ಕೆ.ಜೆ.ಯೇಸುದಾಸ... ಮತ್ತು ಚಿತ್ರಾ...
------------------------------------------------

ಅಂದವೋ ಅಂದವು ಕನ್ನಡ ನಾಡು...ಹೇಹೇ...
ನನ್ನ ಗೂಡು ಅಲ್ಲಿದೆ ನೋಡು...
ಚೆಂದವೋ ಚೆಂದವು ಈ ನನ್ನಯ ಗೂಡು...ಹೇಹೇ...
ನನ್ನ ಹಾಡು ಅಲ್ಲಿದೆ ನೋಡು...
ಕಾವೇರಿ ಹರಿವಳೂ, ನನ್ನ ಮನೆಯ ಅಂಗಳದಲ್ಲಿ...
ಕಸ್ತೂರಿ ಮೆರೆವಳೂ, ನನ್ನ ಮಡದಿ ಮಲ್ಲಿಗೆಯಲ್ಲಿ...

ಅಂದವೋ ಅಂದವು ಕನ್ನಡ ನಾಡು...ಹೇಹೇ...
ನನ್ನ ಗೂಡು ಅಲ್ಲಿದೆ ನೋಡು...


ನನ್ನ ಮನೆಯ ಮುಂದೆ, ಸಹ್ಯಾದ್ರಿ ಗಿರಿಯ ಹಿಂದೆ,
ದಿನವೂ ನೂರು ಶಶಿಯು ಹುಟ್ಟಿ ಬಂದರೂ...
ನನ್ನ ರತಿಯ ಮೊಗವ, ಮರೆಮಾಚದಂಥ ನಗುವ,
ಅವನೆಂದು ತಾರಲಿಲ್ಲವೇ... ಪ್ರಿಯೇ... ಓಹೋ...
ನನ್ನ ಕಣ್ಣ ಮುಂದೆ, ಮರಗಿಡದ ಮಧ್ಯ ಮಧ್ಯ,
ಕೋಟಿ ಪಕ್ಷಿ ಕೂಗು ಕೇಳಿ ಬಂದರೂ...
ನನ್ನ ಚೆಲುವೆ ಹಾಡು, ಅನುರಾಗದಿಂದ ನೋಡು,
ಆ ರಾಗ ನೋಟ ಕಾಣದೆ... ಪ್ರಿಯೇ...ಹೇಹೇ...
ಸಹ್ಯಾದ್ರಿ ಕಾಯ್ವಳೂ, ನನ್ನ ಮನೆಯ ಕರುಣೆಯ ಮೇಲೆ...
ಆಗುಂಬೆ ನಗುವಳೂ, ನನ್ನ ಮಡದಿ ನೊಸಲಿನ ಮೇಲೆ...

ಅಂದವೋ ಅಂದವು ಕನ್ನಡ ನಾಡು...ಹೇಹೇ...
ನನ್ನ ಗೂಡು ಅಲ್ಲಿದೆ ನೋಡು...
--------------------------------------------------
ಹೂಯ್ಯಾ ಹೂಯ್ಯಾ, ಹೂಯ್ಯಾ ಹೂಯ್ಯಾ...
ಲಾಲಲಾಲಲಲಾ... ಲಾಲಲಾಲಲಲಾ...ಲಾಲಲಾ... 
-------------------------------------------------
ನಾಳೆಗಿಂತ ಇಂದೆ ಸಿಹಿಯಾದ ದಿವಸವಂತೆ,
ಇಂದು ನಾಳೆ ಸಿಹಿಯ ಸ್ನೇಹವೆಂಬುದು...
ಅಂತರಾಳವೆಂಬ, ನೇತ್ರಾವತಿಯ ತುಂಬ,
ಈ ಸ್ನೇಹ ಜಲದ ಸೆಲೆಯು ನಿಲ್ಲದೋ...ಹೇಹೇ... 
ಉಸಿರು ಎಂಬ ಹಕ್ಕಿ, ಎದೆ ಗೂಡಿನಲ್ಲಿ ಸಿಕ್ಕಿ,
ಕುಹು ಕುಹು ಎಂದರೇನೆ ಜೀವನ...
ಬೆಚ್ಚಗಿರುವ ಮನೆಯ, ತನ್ನ ಇಚ್ಚೆಯರಿವ ಸತಿಯ,
ಸವಿ ಪ್ರೇಮದೊರೆತ ಬಾಳು ಧನ್ಯವೋ...ಹೇಹೇ...
ಈ ನಾಡು ನುಡಿಯಿದು, ನನಗೆ ಎಂದೂ ಕೋಟಿ ರುಪಾಯಿ...
ಈ ಬಾಳ ಗುಡಿಯಲಿ, ನಿಜದ ಮುಂದೆ ನಾನು ಸಿಪಾಯಿ...


ಅಂದವೋ ಅಂದವು ಕನ್ನಡ ನಾಡು... ಓಹೋ...
ನನ್ನ ಗೂಡು ಅಲ್ಲಿದೆ ನೋಡು...
ಚೆಂದವೋ ಚೆಂದವು ಈ ನನ್ನಯ ಗೂಡು... ಓಹೋ...
ನನ್ನ ಹಾಡು ಅಲ್ಲಿದೆ ನೋಡು...
ಕಾವೇರಿ ಹರಿವಳೂ, ನನ್ನ ಮನೆಯ ಅಂಗಳದಲ್ಲಿ...
ಕಸ್ತೂರಿ ಮೆರೆವಳೂ, ನನ್ನ ಮಡದಿ ಮಲ್ಲಿಗೆಯಲ್ಲಿ...

ಓ ಚೆಲುವೆ ನಗುತಾ ಇರು ನೀ, ಸೋದರಿಯೆ ಸುಖವಾಗಿರು ನೀ.....(ಗರುಡ ಧ್ವಜ)

Tuesday, July 12, 2016

ರೈತ ರೈತ ರೈತ, ಅನ್ನ ಕೋಡುವ ದಾತಾ... (ದೊರೆ)

ಚಿತ್ರ : ದೊರೆ..... (1995)
ಸಾಹಿತ್ಯ : "ನಾದಬ್ರಹ್ಮ" ಹಂಸಲೇಖ.....♫♪♫
ಗಾಯಕರು : ಡಾ|| ರಾಜಕುಮಾರ್.....
-----------------------------------------------
ರೈತ ರೈತ ರೈತ, ಅನ್ನ ಕೋಡುವ ದಾತಾ..
ಜೀತ ಜೀತ ಜೀತ, ದೊರೆಗಳು ಬೇಳಸಿದ ಭೂತ..
ಬೇಲಿಯ, ಹೊರಗಡೆ, ಬಂದಾ ಹೂವ.....
ರೈತನ, ತೋಳಿಗೆ, ಕೋಡೋ ಜೀವ.....


ರೈತ ರೈತ ರೈತ, ಅನ್ನ ಕೋಡುವ ದಾತಾ..
ಜೀತ ಜೀತ ಜೀತ, ದೊರೆಗಳು ಬೇಳಸಿದ ಭೂತ..
ಬೇಲಿಯ, ಹೊರಗಡೆ, ಬಂದಾ ಹೂವ.....
ರೈತನ, ತೋಳಿಗೆ, ಕೋಡೋ ಜೀವ.....


ಜಗದಾ ದೃಷ್ಟಿಯಲ್ಲಿ, ಎಲ್ಲೋ ಲೋಪ ಉಂಟು....
ಸುಖವಾ ಹಂಚುವಲ್ಲಿ, ಏನೋ ದೋಷ ಉಂಟು....
ದಣಿಯೋನು ಧಣಿಯೇ ಆಗಿಲ್ಲ, ಆಳೋನು ಆಳು ಆಗಿಲ್ಲ...
ಪ್ರಜೆಗೆ ರಾಜಯೋಗ, ಅವನೇ ದೊರೆಯು ಈಗಾ..
ಲೋಪ ದೋಷವನ್ನು, ತಿದ್ದಲೇ ಬೇಕು ಬೇಗಾ..
ದುಡಿಯೋನ ಬೆನ್ನಿನಾ ಬೇವರು ||
ಲೋಕಾನಾ ಕಾಯುವಾ ಉಸಿರು..
ರೈತ ನೀನೇ ಸಿಂಹ.....
ರೈತ ನೀನೇ ಸಿಂಹ..... 
ರೈತ ನೀನೇ ಸಿಂಹ.....
ಎಂಬ ಬರಹ ಬದಲಿಸಿ ಬ್ರಹ್ಮ.....


ರೈತ ರೈತ ರೈತ, ಅನ್ನ ಕೋಡುವ ದಾತಾ..
ಜೀತ ಜೀತ ಜೀತ, ದೊರೆಗಳು ಬೇಳಸಿದ ಭೂತ..
ಬೇಲಿಯ, ಹೊರಗಡೆ, ಬಂದಾ ಹೂವ.....
ರೈತನ, ತೋಳಿಗೆ, ಕೋಡೋ ಜೀವ.....


ಏಳೋ ಮೇಲೆ ಇನ್ನೂ, ಬಾಗೋ ವರೆಗೆ ಬೆನ್ನೂ...
ಕೇಳೋ ನ್ಯಾಯವಿನ್ನೂ, ನೆಲವೆ ನಮಗೆ ಹೊನ್ನು...
ಆಳೋನು ನಾವು ಕೆಲಕಾಲ, ಹಿಡಿ ಬೇಡ ಧಣಿಯ ಕೈ ಕಾಲ..
ಸುಖದಾ ಹಳೆಯ ಕನಸು, ಮಾಡೋ ಇಂದು ನನಸು..
ವಿಜಯ, ವೀರ್ರ್ಯ, ಸೂರ್ರ್ಯ |
ಜಗದ ಹಿಂದೆ ಇರಿಸು..
ಕೈಗೆತ್ತಿ ಕೊಳ್ಳು ನೊಗ ಬಿಲ್ಲು...
ಹೂಳೆತ್ತಿ ನುಗ್ಗಿ ನೀ ನಿಲ್ಲು.....
ರೈತ ನೀನೇ ದೇಶ..... 
ರೈತ ನೀನೇ ದೇಶ..... 
ರೈತ ನೀನೇ ದೇಶ.....
ನಿನ್ನ ಕಾಯಕ ಮೆಚ್ಚುವ ಈಶ......


ರೈತ ರೈತ ರೈತ, ಅನ್ನ ಕೋಡುವ ದಾತಾ..
ಜೀತ ಜೀತ ಜೀತ, ದೊರೆಗಳು ಬೇಳಸಿದ ಭೂತ..
ಬೇಲಿಯ, ಹೊರಗಡೆ, ಬಂದಾ ಹೂವ.....
ರೈತನ, ತೋಳಿಗೆ, ಕೋಡೋ ಜೀವ.....


Friday, July 8, 2016

ಅಲ್ಹಾಅಲ್ಹಾ..... ನೀನೇ ಎಲ್ಲಾ.... ಅಲ್ಹಾಅಲ್ಹಾ ನೀನೇ ಎಲ್ಲಾ.... ಚಿತ್ರ : ಗುರಿ...

ಚಿತ್ರ : ಗುರಿ....(1986)
ಸಾಹಿತ್ಯ : "ಸಾಹಿತ್ಯರತ್ನ" ಚಿ||ಉದಯಶಂಕರ್....
ಗಾಯಕರು : ಡಾ|| ರಾಜಕುಮಾರ್... 
-----------------------------------------

ಅಲ್ಹಾಅಲ್ಹಾ..... ನೀನೇ ಎಲ್ಲಾ....
ಅಲ್ಹಾಅಲ್ಹಾ ನೀನೇ ಎಲ್ಲಾ....
ನಿನ್ನನು ಬಿಟ್ಟರೆ ಗತಿಯಾರಿಲ್ಲಾ, ನಿನ್ನದೇ ಜಗವೆಲ್ಲಾ...
ನಿನ್ನನು ಬಿಟ್ಟರೆ ಗತಿಯಾರಿಲ್ಲಾ, ನಿನ್ನದೇ ಜಗವೆಲ್ಲಾ...
ಲಾ ಇಲಾಹಾ ಇಲ್ಹಲ್ಲಾ, ಮಹ್ಮದ ಉಲ್ ಉಸ್ಸುರುಲ್ಹಾ....
ಅಲ್ಹಾ ಪಲಾ, ಅಲ್ಹಾ ಅಲ್‍ಲಪಲ್ಹಾ.....
ಅಲ್ಹಾ ಪಲಾ, ಅಲ್ಹಾ ಅಲ್‍ಲಪಲ್ಹಾ.....


ಅಲ್ಹಾಅಲ್ಹಾ ನೀನೇ ಎಲ್ಲಾ, ಅಲ್ಹಾಅಲ್ಹಾ ನಿನ್ನದೇ ಎಲ್ಲಾ....

ಬೀಸುತ ಓಡುವ ತಂಬೆಲರೆಲ್ಲಾ, ಬಾನಲಿ ಹಾರುವ ಹಕ್ಕಿಗಳೆಲ್ಲಾ...
ಬೀಸುತ ಓಡುವ ತಂಬೆಲರೆಲ್ಲಾ, ಬಾನಲಿ ಹಾರುವ ಹಕ್ಕಿಗಳೆಲ್ಲಾ...
ಕಡಲಲಿ ಏಳುವ ಅಲೆ ಅಲೆಯಲ್ಲಾ, ಅಲ್ಹಾಅಲ್ಹಾ ಎನುತಿದೆಯಲ್ಲಾ...
ಅಲ್ಹಾಅಲ್ಹಾ ಎನುತಿದೆಯಲ್ಲಾ...
ಅಲ್ಹಾಅಲ್ಹಾ, ಯಾ ಅಲ್ಹಾ... ಅಲ್ಹಾಅಲ್ಹಾ, ಹಾಯ್ ಅಲ್ಹಾ...
ನಿನ್ನನು ಬಿಟ್ಟರೆ ಗತಿಯಾರಿಲ್ಲಾ, ನಿನ್ನದೇ ಜಗವೆಲ್ಲಾ...

ನನ್ನ ಬಾಳಲ್ಲಿ ನೆಮ್ಮದಿಯಿಲ್ಲಾ, ಎಲ್ಲೆಡೆ ಕತ್ತಲೇ ತುಂಬಿದೆಯಲ್ಲಾ...
ದಾರಿಯ ತೋರುವರಾರು ಇಲ್ಲಾ....
ದಾರಿಯ ತೋರುವರಾರು ಇಲ್ಲಾ, ನೀ ಕೈಬಿಟ್ಟರೇ ಬದುಕೇ ಇಲ್ಲಾ... 
ಅಲ್ಹಾ.......


ಅಲ್ಹಾಅಲ್ಹಾ ನೀನೇ ಎಲ್ಲಾ....
ನಿನ್ನನು ಬಿಟ್ಟರೆ ಗತಿಯಾರಿಲ್ಲಾ, ನಿನ್ನದೇ ಜಗವೆಲ್ಲಾ...

ಯಾಲಾ ಅಲ್ಹಾ ಯಾ ಅಲ್ಹಾ.... 
ಯಾಲಾ ಅಲ್ಹಾ ಯಾ ಅಲ್ಹಾ....
ಯಾಲಾ ಅಲ್ಹಾ ಯಾ ಅಲ್ಹಾ.... 
ಯಾಲಾ ಅಲ್ಹಾ ಯಾ ಅಲ್ಹಾ....


ಅಲ್ಹಾ ಎಂದರೇ ಕಷ್ಟಗಳಿಲ್ಲಾ.... ಕಷ್ಟಗಳಿಲ್ಲಾ....
ಅಲ್ಹಾ ಎಂದರೇ ವೇದನೆಯಿಲ್ಲಾ... ವೇದನೆಯಿಲ್ಲಾ...
ಅಲ್ಹಾ ಎಂದರೇ ಕಷ್ಟಗಳಿಲ್ಲಾ.... ಯಾ ಅಲ್ಹಾ...
ಅಲ್ಹಾ ಎಂದರೇ ವೇದನೆಯಿಲ್ಲಾ... ಹಾಯ್ ಅಲ್ಹಾ...
ಅಲ್ಹಾ ನೀನು ದಯೇ ತೋರಿದರೆ, ಮುಳ್ಳು ಹೂವಾಗಿ ಅರಳುವುದಲ್ಲಾ...
ಮುಳ್ಳು ಹೂವಾಗಿ ಅರಳುವುದಲ್ಲಾ...


ಅಲ್ಹಾಅಲ್ಹಾ ನೀನೇ ಎಲ್ಲಾ....
ನಿನ್ನನು ಬಿಟ್ಟರೆ ಗತಿಯಾರಿಲ್ಲಾ, ನಿನ್ನದೇ ಜಗವೆಲ್ಲಾ...
ಲಾ ಇಲಾಹಾ ಇಲ್ಹಲ್ಲಾ, ಮಹ್ಮದ ಉಲ್ ಉಸ್ಸುರುಲ್ಹಾ....
ಅಲ್ಹಾ ಪಲಾ, ಅಲ್ಹಾ ಅಲ್‍ಲಪಲ್ಹಾ....
ಅಲ್ಹಾಅಲ್ಹಾ, ಯಾ ಅಲ್ಹಾ... ಅಲ್ಹಾಅಲ್ಹಾ, ಹಾಯ್ ಅಲ್ಹಾ...
ನಿನ್ನನು ಬಿಟ್ಟರೆ ಗತಿಯಾರಿಲ್ಲಾ, ನಿನ್ನದೇ ಜಗವೆಲ್ಲಾ...
ಅಲ್ಹಾಅಲ್ಹಾ ನೀನೇ ಎಲ್ಲಾ....
ಅಲ್ಹಾಅಲ್ಹಾ ನಿನ್ನದೇ ಎಲ್ಲಾ....

Tuesday, July 5, 2016

ಮೃತ್ಯುಂಜಯಾಯ ಧರ್ಮಚ್ಚರಾಯ ಸರ್ವಂಶಿವಾಯ ಸಂಭೂತನೇ... ಚಿತ್ರ : ನಾನಿ (2016)

ಚಿತ್ರ : ನಾನಿ (2016)
ಸಾಹಿತ್ಯ : ಗುರುಮೂರ್ತಿ.ವಾಯ್....
ಗಾಯಕರು : ಶಂಕರ್ ಮಹಾದೇವನ್.......
-----------------------------------------------------------------
ಹರಹರ ಮಹಾದೇವ... ಹರಹರ ಮಹಾದೇವ...
ಹರಹರ ಮಹಾದೇವ...
ಓಂ...ಭಂಭಂಭೋಲೇ.... ಓಂ...ಭಂಭಂಭೋಲೇ....
ಓಂ...ನಮಃ ಶಿವಾಯ.... 
----------------------------------------------------------------
ಶಿವಶಿವಶಿವಶಿವಶಿವ ಶಂಕರ...ಹರಹರ | ಹರಹರ ಮಹಾದೇವ...
ಶಿವಶಿವಶಿವಶಿವಶಿವ ಶಂಕರ...ಹರಹರ | ಹರಹರ ಮಹಾದೇವ...
ಮೃತ್ಯುಂಜಯಾಯ ಧರ್ಮಚ್ಚರಾಯ ಸರ್ವಂಶಿವಾಯ ಸಂಭೂತನೇ...
ವೀರಭದ್ರಾಯ ನೀಲಕಂಠಾಯ ಮಹಾದೇವಾಯ ಸಕಲೇಶನೇ...
ಪರಮೇಶಾ...ಆ... ಜಗದೀಶಾ....ಆ.... | 
ಹರಹರ ಮಹಾದೇವ... ಹರಹರ ಮಹಾದೇವ...
ಆಆಆಆಆ....ಆಆಆಆಆ....ಆಆಆಆಆಆ
----------------------------------------------------------------
ನೀನೇ ರುಧ್ರಾಯ, ನೀನೇ ಭರ್ಗಾಯ, ನೀನೇ ಸೋಮಾಯ ಶ್ರೀಕಂಠನೆ...
ದೇವ ದೇವಾಯ, ಬಾಲ ನೇತ್ರಾಯ, ಕಾಲಕಾಲಾಯ ಮಹೇಶನೇ....
ಕಾಲಾಗ್ನೀ ತಸ್ಮೈ ನಮಃ, ಮಹಾಪ್ರಾಣ ಈಶನೇ ನಮಃ...
ಓಂಕಾರ ರೂಪನೇ ನಮಃ.... ಓಂ.....

ಶಿವಶಿವಶಿವಶಿವಶಿವ ಶಂಕರ...ಹರಹರ | ಹರಹರ ಮಹಾದೇವ...
ಶಿವಶಿವಶಿವಶಿವಶಿವ ಶಂಕರ...ಹರಹರ | ಹರಹರ ಮಹಾದೇವ...

ಢಂಢಂಢಂಢಂಢಂಢಂ ಢಮರುಗ ಬಡಿದಿದೆ ನಾದಮಯ....
ಗಣಗಣಗಣಗಣಗಣಗಣ ಗಣಗಣಮೊಳಗಿದೆ ಗಂಟಮಯ...
ಧಗಧಗಧಗಧಗಧಗ ಧಗಧಗಉರಿದಿದೆ ಅಗ್ನೀಜ್ವಾಲಮಯ...
ಬಡಬಡಬಡಬಡಬಡಬಡ ಬಡಿದಿದೆ ಸಿಡಲ ಘೋರಮಯ...
ಕರಗೋಯ್ತು ಬಡ ಜೀವ, ಓ ದಯೆ ತೋರೋ ಭಗವಂತ....
ಋಣಭಾರ ದಡಸೇರಿಸೋ, ಶಿವನೆ ನೀ ಧೀಮಂತ...
ಶಿರಬಾಗುತ ನಿನ್ನ ಕರೆದಿದೆ, ಕನಿಕರಿಸೋ ಗುಣವಂತ...ಆ...ಆ...

ಶಿವಶಿವಶಿವಶಿವಶಿವ ಶಂಕರ...ಹರಹರ | ಹರಹರ ಮಹಾದೇವ...
ಶಿವಶಿವಶಿವಶಿವಶಿವ ಶಂಕರ...ಹರಹರ | ಹರಹರ ಮಹಾದೇವ...
-------------------------------------------------------------
ಪಮಪಮಪಮಪ ನಿಪನಿಪನಿಪನಿಪ ಸನಿಸನಿಸನಿಸನಿಸನಿ ನಿಸರಿ....
-------------------------------------------------------------
ಓ.. ನೀನೇ ಧಿಮಾಯ, ನೀನೇ ಜಟಾಯ, ನೀನೇ ಉಗ್ರಾಯ ರುಧ್ರೇಶನೆ....
ನೀನೇ ಭೃಡಾಯ, ನೀನೇ ಹರಾಯ, ಶಿವಕಂಠಾಯ ಮೈಲಾರನೇ...
ಹರಿಹರಾ ಬ್ರಹ್ಮನೇ ನಮಃ, ತ್ರೀಲೋಕ ಮೂರ್ತಿಯೇ ನಮಃ....
ಅಖಿಲಾಂಡ ನಾಯಕನೇ ನಮಃ....

ಗರಗರಗರಗರಗರ ತಿರುಗಿದೆ ಭೂಮಿ ರಭಸದಲಿ....
ಸುಡುಸುಡುಸುಡುಸುಡು ಸುಡುತಿದೆ ಮಿಥಿಲಾ ರೋಷದಲಿ...
ಭರಭರಭರಭರಭರ ಬೀಸಿದೆ ಗಾಳಿ ವೇಗದಲಿ...
ಹರಹರಹರಹರಹರಹರ ಜಪಿಸಿದೆ ನಾಮವ ಘೋಷದಲಿ...
ಅಸುನೀಗಿದ ಜನ್ಮಕೇ ಜೀವ ನೀಡಯ್ಯಾ...
ತಡಮಾಡದೆ ಜೀವಕೇ ಮುಕ್ತಿ ನೀಡಯ್ಯಾ....
ಮುನಿಸೇತಕೆ ಮಹಾರುಧ್ರನೆ ಧರೆಗಿಳಿದು ಬಾರಯ್ಯಾ...ಆ...

ಶಿವಶಿವಶಿವಶಿವಶಿವ ಶಂಕರ... ಹರಹರ | 
ಶಿವಶಿವಶಿವಶಿವಶಿವ ಶಂಕರ... ಹರಹರ |