ಚಿತ್ರ : ಹಠವಾದಿ ( ೨೦೦೬ )
ಸಾಹಿತ್ಯ ಮತ್ತು ಸಂಗೀತ : ವಿ.ರವಿಚಂದ್ರನ್...
ಗಾಯಕರು : ಶಂಕರ್ ಮಹದೇವನ್...
-------------------------------------------------------
ಆಟ ಹುಡುಗಾಟವೊ... ಆಟ ಹುಡುಗಾಟವೊ...
ಆಟ ಹುಡುಗಾಟವೊ...
ಪರಮಾತ್ಮನಾಟವೊ... ಪರಮಾತ್ಮನಾಟವೊ...
ಪರಮಾತ್ಮನಾಟವೊ...
--------------------------------------------------------------
ಆಟ ಹುಡುಗಾಟವೊ, ಪರಮಾತ್ಮನಾಟವೊ ...
ಪಾಠವೊ, ನಾಟ್ಕವೊ, ಭಗವಂತನಾಟವೊ...
ಆಸೆ ಇಟ್ಟೊನು ಅವನೆ... ಕನಸು ಕೊಟ್ಟೊನು ಅವನೆ...
ಆಸೆ ಇಟ್ಟೊನು ಅವನೆ, ಕನಸು ಕೊಟ್ಟೊನು ಅವನೆ...
ಒಂದೆ ಮನೆಯಲ್ಲಿ ಬೇಧ-ಭಾವ ಇಟ್ಟೊನು ಅವನೆ...
ಅವ ಜಾಣನೊ, ಅವನು ಬಲುಜಾಣನೊ....
ಆಟ ಹುಡುಗಾಟವೊ, ಪರಮಾತ್ಮನಾಟವೊ.....
ಪಾಠವೊ, ನಾಟ್ಕವೊ, ಭಗವಂತನಾಟವೊ....
ಹುಟ್ಟೆಂದ ಮೇಲೆ ಸಾವಿರಲೆ ಬೇಕು...
ತಿಳಿದಿದ್ದರು ನಾನು ಬದುಕಬೇಕು......
ಯಾಕಿ ಶಿಕ್ಷೆ .....ಏ....?
ಈ ರಂಗಮಂಚ ಇದು ನಿನ್ನ ಭಿಕ್ಷೆ ....
ಈ ಜನರ ಪ್ರೀತಿ ಇದು ಶ್ರೀರಕ್ಷೆ....
ಯಾಕಿ ಪರೀಕ್ಷೆ.....ಏ....?
ತಾಯಿ ಹಾಡು ಕುಡಿಸುವಾಗ, ಯಮನು ಕೂಡ ಕಾಯುವ.....
ತುತ್ತು ಅನ್ನ ತಿನ್ನುವಾಗ, ಸಾವು ಕೊಡದೆ ನಿಲ್ಲುವ....
ಅವನ ಕರುಣೇ ನಿನಗೆ ಇಲ್ಲವೆ....
ಹೇ...ಹೇ.... ಹೇ....ಹೇ.....
ಆಟ ಹುಡುಗಾಟವೊ, ಪರಮಾತ್ಮನಾಟವೊ...
ಪಾಠವೊ, ನಾಟ್ಕವೊ, ಭಗವಂತನಾಟವೊ....
ಯಾರೊ ನಾ ಯಾರೊ ಇವರೆಲ್ಲ ಯಾರೊ...?
ಯಾರೊ ನಾ ಯಾರೊ ಇವರೆಲ್ಲ ಯಾರೊ...?
ಯಾಕೊ ಅದು ಯಾಕೊ ಈ ಬಂಧ ಯಾಕೊ..?
ಯಾಕಿ ಪ್ರೀತಿ....?
ಹಾಡು ಈ ಹಾಡು ನಿನಾಗಾಗಿಯೆ...
ಜೀವ ಈ ಜೀವ ಇವರಿಗಾಗಿಯೆ.....
ಯಾಕಿ ಪ್ರೀತಿ...?..................ಓಹೊ!
ಈ ಪ್ರಾಣ ನಿನ್ನದಲ್ಲ, ಈ ಜೀವ ಸಾಯೊದಿಲ್ಲ....
ಇವರ ಅಭಿಮಾನಕೆ, ನೀನು ಸೋಲಬೇಕಲ್ಲ....
ನೀ ಇದ್ದರೆ ಇಳಿದು ಬಾರೊ....ಓಹೊ!.....
ಆಟ ಹುಡುಗಾಟವೊ, ಪರಮಾತ್ಮನಾಟವೊ....
ಪಾಠವೊ, ನಾಟ್ಕವೊ, ಭಗವಂತನಾಟವೊ.....
ಆಸೆ ಇಟ್ಟೊನು ಅವನೆ... ಕನಸು ಕೊಟ್ಟೊನು ಅವನೆ...
ಆಸೆ ಇಟ್ಟೊನು ಅವನೆ, ಕನಸು ಕೊಟ್ಟೊನು ಅವನೆ...
ಒಂದೆ ಮನೆಯಲ್ಲಿ ಬೇಧ-ಭಾವ ಇಟ್ಟೊನು ಅವನೆ...
ಅವ ಜಾಣನೊ, ಅವನು ಬಲುಜಾಣನೊ....
No comments:
Post a Comment