Tuesday, May 31, 2016
Wednesday, May 25, 2016
Saturday, May 21, 2016
Friday, May 20, 2016
Tuesday, May 17, 2016
ಯಾರು ಯಾರು ಯಾರು ಯಾರು, ಯಾರಿಗಾಗಿ ಇಲ್ಲ ಯಾರು...(ಚಿತ್ರ : ಹಠವಾದಿ )
ಚಿತ್ರ : ಹಠವಾದಿ ( ೨೦೦೬ )
ಸಾಹಿತ್ಯ : ಶ್ರೀ ಚಂದ್ರು...
ಸಂಗೀತ : ವಿ.ರವಿಚಂದ್ರನ್...
ಗಾಯಕರು : ಶಂಕರ್ ಮಹದೇವನ್.......
--------------------------------------
ಯಾರು ಯಾರು ಯಾರು ಯಾರು,
ಯಾರಿಗಾಗಿ ಇಲ್ಲ ಯಾರು...
ನೂರು ನೂರು ನೂರು ನೂರು,
ಬದುಕೊ ದಾರಿ ನೂರು ನೂರು...
-------------------------------------------
ಯಾರು ಯಾರು ಯಾರು ಯಾರು,
ಯಾರಿಗಾಗಿ ಇಲ್ಲ ಯಾರು....
ನೂರು ನೂರು ನೂರು ನೂರು,
ಬದುಕೊ ದಾರಿ ನೂರು ನೂರು....
ಬೆಳೆಯೋನೆಂದು ಸೋಲೊದಿಲ್ಲ,
ಕಲಿತೋನೆಂದು ಬಾಗೊದಿಲ್ಲ,
ತುಳಿಯೊನೆಂದು ಉಳಿಯೋದಿಲ್ಲ,
ಯಾರನ್ಯಾರು ಬೆಳೆಸೊದಿಲ್ಲ,
ಎಲ್ಲ ಗೊತ್ತು ಅನ್ನೋರಿಲ್ಲ,
ಯಾರು ಇಲ್ಲಿ ಮೊದಲೇನಲ್ಲ,
ಭೂಮಿ ಮೇಲೆ ದೇವರು ಮೊದಲ?
ದೇವರಿಗಿಂತ ನಾವೆ ಮೊದಲ?
ಯಾರು ಯಾರು ಯಾರು ಯಾರು ಯಾರು ಯಾರು,
ಯಾರಿಗಾಗಿ ಯಾರು, ಯಾರಿಗಿಲ್ಲ ಯಾರು...
ಗುರುವೇ ಇಲ್ಲದೆ ಕಲಿತೋರುಂಟು,
ನಂಟೆ ಇಲ್ಲದೆ ಬದುಕೋರುಂಟು,
ಯಾರು ಯಾರು ಯಾರು ಯಾರು ಯಾರು...
ಯಾರಿಗಾಗಿ ಅಲ್ಲ ಯಾರು,
ಯಾರಿಗಾಗಿ ಇಲ್ಲ ಯಾರು,
ಯಾರು ಯಾರು ಯಾರು ಯಾರು ಯಾರು ಯಾರು,
ಯಾರು ಯಾರು ಯಾರು ಯಾರು,
ಯಾರಿಗಾಗಿ ಇಲ್ಲ ಯಾರು....
ನೂರು ನೂರು ನೂರು ನೂರು,
ಬದುಕೊ ದಾರಿ ನೂರು ನೂರು....
ಭಾಷೆ ಮೊದಲ, ಪ್ರಾಸ ಮೊದಲ?
ದೇಶ ಮೊದಲ, ದ್ವೇಷ ಮೊದಲ?
ಜಾತಿ ಮೊದಲ, ನೀತಿ ಮೊದಲ?
ಮೌನ ಮೊದಲ, ಮುತ್ತಿನಂತ ಮಾತು ಮೊದಲ?
ನಾದ ಮೊದಲ, ಭಾವ ಮೊದಲ?
ವೇದ ಮೊದಲ, ಗಾದೆ ಮೊದಲ?
ವೀಣೆ ಮೊದಲ, ಸರಿಗಮ ಸ್ವರ ಮೊದಲ?
ಜನನ ಮೊದಲ, ಮರಣ ಮೊದಲ?
ಮಿಡಿತ ಮೊದಲ, ತುಡಿತ ಮೊದಲ?
ತಾಯಿ ಹಾಲ ಹನಿಯೆ ಮೊದಲ?
ಮೋಡ ಸುರಿದ ಮಳೆಯೆ ಮೊದಲ?
ಹೂವ ಒಡಲ, ಮಧುವೆ ಮೊದಲ?
ಜೇನ ಹನಿಯ, ಸಿಹಿಯೆ ಮೊದಲ?
ಹಚ್ಚ ಹಸಿರ, ಪೈರೆ ಮೊದಲ?
ಸ್ವಚ್ಚ ಗಾಳಿ, ಉಸಿರೆ ಮೊದಲ?
ಬೀಜಾನಾ? ವೃಕ್ಷನಾ? ಕೋಳಿನಾ? ಮೊಟ್ಟೇನಾ?
ನಾನಾ ನೀನಾ ನೀನಾ ನಾನಾ
ನಿಸಗರಿ ಸನಿ ಸನಿರಿಸ ನಿದ ಸನಿದಪ
ಮದಪಮ ದಪ ನಿದಪಮ ಗರಿಸನಿದನಿ...
ಯಾರು ಯಾರು ಯಾರು ಯಾರು ಯಾರು,
ಯಾರು ಯಾರು ಯಾರು ಯಾರು ಯಾರು,
ಯಾರಿಗಾಗಿ ಇಲ್ಲ ಯಾರು...
ನೂರು ನೂರು ನೂರು ನೂರು,
ಬುದ್ಧಿ ಹೇಳೊ ಮಂದಿ ನೂರು....
ಸಾಧನೆ ಇಲ್ಲದೆ ಗೆಲುವೇ ಇಲ್ಲ...
ಸಾಧಿಸಿದವನಿಗೆ ಸಾವೆ ಇಲ್ಲ..
ಸಾಗರ ವಿದ್ಯೆಗೆ ಕೊನೆಯೆ ಇಲ್ಲ...
ಸಾಧಕರನ್ನು ಮರೆಯೋದಿಲ್ಲ...
ಕನಸ ಕಾಣೊ ಕಣ್ಣಿನಲ್ಲಿ...
ಶ್ರಮದ ನೆರಳು ಸುಳಿಯೋದಿಲ್ಲ...
ತಿಳಿಯಬೇಕು ಗೆಲುವ ಗುಟ್ಟು...
ಗೆದ್ದರೆ ಇಲ್ಲಿ ಜೀವನ ಉಂಟು...
ಸೋಲು, ಗೆಲುವು, ನಲಿವು, ಉಳಿವು...
ಬಾಳು ನಿನ್ನ ದಾರಿಲಿ, ಲೋಕ ನಿನ್ನ ಕೈಯಲ್ಲಿ...
ಸತ್ಯ ನಿನ್ನ ಎದುರಲ್ಲುಂಟು, ಬಿಚ್ಚು ನಿನ್ನ ಬುದ್ಧಿ ಗಂಟು....
ನೋಡು ನೋಡು ನೋಡು ನೋಡು ನೋಡು...
ಕಣ್ಣ ತೆರೆದು, ಜಗವ ನೋಡು...
ಇದುವೇ ನಿತ್ಯದ, ಬದುಕಿನ ಹಾಡು...
ಹಾಡು ಹಾಡು ಹಾಡು ಹಾಡು ಹಾಡು...
ಸೃಷ್ಟಿ ಮೊದಲ, ದೃಷ್ಟಿ ಮೊದಲ?
ಹೆಜ್ಜೆ ಮೊದಲ, ಗೆಜ್ಜೆ ಮೊದಲ?
ಗೀತೆ ಮೊದಲ, ಗಾತೆ ಮೊದಲ?
ತತ್ವ ಮೊದಲ ತತ್ವ ಪದ ಹಾಡು ಮೊದಲ?
ತಾಳ ಮೊದಲ, ಮೇಳ ಮೊದಲ?
ಹಾಸ್ಯ ಮೊದಲ, ಲಾಸ್ಯ ಮೊದಲ?
ಜಾಣ ಮೊದಲ, ಜಾನಪದ ಹಾಡು ಮೊದಲ?
ಕವನ ಮೊದಲ, ಕವಿತೆ ಮೊದಲ?
ಬಣ್ಣ ಮೊದಲ, ಕುಂಚ ಮೊದಲ?
ಜೋಗಿಪದ ಹಾಡೆ ಮೊದಲ?
ಗೀಗೀ ಪದ ಗೀತೆ ಮೊದಲ?
ಕಂಚಿನ ಕಂಸಾಳೆ ಮೊದಲ?
ಡೊಳ್ಳಿನ ದೊಡ್ಡಾಟ ಮೊದಲ?
ಕೋಲಿನ ಕೋಲಾಟ ಮೊದಲ?
ಬಯಲಿನ ಬಯಲಾಟ ಮೊದಲ?
ಶ್ರದ್ಧೆನಾ? ಬುದ್ಧಿನಾ? ವಿದ್ಯೆನಾ? ಬಯಕೆನಾ?
ನಾನಾ ನೀನಾ ನೀನಾ ನಾನಾ
ನಿಸಗರಿ ಸನಿ ಸನಿರಿಸ ನಿದ ಸನಿದಪ....
ಮದಪಮ ದಪ ನಿದಪಮ ಗರಿಸನಿದನಿ....
ಯಾರು ಯಾರು ಯಾರು ಯಾರು....
ಯಾರು ಯಾರು ಯಾರು.......
Monday, May 16, 2016
ಆಟ ಹುಡುಗಾಟವೊ... ಆಟ ಹುಡುಗಾಟವೊ.. ಪರಮಾತ್ಮನಾಟವೊ... ಪರಮಾತ್ಮನಾಟವೊ...( ಚಿತ್ರ : ಹಠವಾದಿ)
ಚಿತ್ರ : ಹಠವಾದಿ ( ೨೦೦೬ )
ಸಾಹಿತ್ಯ ಮತ್ತು ಸಂಗೀತ : ವಿ.ರವಿಚಂದ್ರನ್...
ಗಾಯಕರು : ಶಂಕರ್ ಮಹದೇವನ್...
-------------------------------------------------------
ಆಟ ಹುಡುಗಾಟವೊ... ಆಟ ಹುಡುಗಾಟವೊ...
ಆಟ ಹುಡುಗಾಟವೊ...
ಪರಮಾತ್ಮನಾಟವೊ... ಪರಮಾತ್ಮನಾಟವೊ...
ಪರಮಾತ್ಮನಾಟವೊ...
--------------------------------------------------------------
ಆಟ ಹುಡುಗಾಟವೊ, ಪರಮಾತ್ಮನಾಟವೊ ...
ಪಾಠವೊ, ನಾಟ್ಕವೊ, ಭಗವಂತನಾಟವೊ...
ಆಸೆ ಇಟ್ಟೊನು ಅವನೆ... ಕನಸು ಕೊಟ್ಟೊನು ಅವನೆ...
ಆಸೆ ಇಟ್ಟೊನು ಅವನೆ, ಕನಸು ಕೊಟ್ಟೊನು ಅವನೆ...
ಒಂದೆ ಮನೆಯಲ್ಲಿ ಬೇಧ-ಭಾವ ಇಟ್ಟೊನು ಅವನೆ...
ಅವ ಜಾಣನೊ, ಅವನು ಬಲುಜಾಣನೊ....
ಆಟ ಹುಡುಗಾಟವೊ, ಪರಮಾತ್ಮನಾಟವೊ.....
ಪಾಠವೊ, ನಾಟ್ಕವೊ, ಭಗವಂತನಾಟವೊ....
ಹುಟ್ಟೆಂದ ಮೇಲೆ ಸಾವಿರಲೆ ಬೇಕು...
ತಿಳಿದಿದ್ದರು ನಾನು ಬದುಕಬೇಕು......
ಯಾಕಿ ಶಿಕ್ಷೆ .....ಏ....?
ಈ ರಂಗಮಂಚ ಇದು ನಿನ್ನ ಭಿಕ್ಷೆ ....
ಈ ಜನರ ಪ್ರೀತಿ ಇದು ಶ್ರೀರಕ್ಷೆ....
ಯಾಕಿ ಪರೀಕ್ಷೆ.....ಏ....?
ತಾಯಿ ಹಾಡು ಕುಡಿಸುವಾಗ, ಯಮನು ಕೂಡ ಕಾಯುವ.....
ತುತ್ತು ಅನ್ನ ತಿನ್ನುವಾಗ, ಸಾವು ಕೊಡದೆ ನಿಲ್ಲುವ....
ಅವನ ಕರುಣೇ ನಿನಗೆ ಇಲ್ಲವೆ....
ಹೇ...ಹೇ.... ಹೇ....ಹೇ.....
ಆಟ ಹುಡುಗಾಟವೊ, ಪರಮಾತ್ಮನಾಟವೊ...
ಪಾಠವೊ, ನಾಟ್ಕವೊ, ಭಗವಂತನಾಟವೊ....
ಯಾರೊ ನಾ ಯಾರೊ ಇವರೆಲ್ಲ ಯಾರೊ...?
ಯಾರೊ ನಾ ಯಾರೊ ಇವರೆಲ್ಲ ಯಾರೊ...?
ಯಾಕೊ ಅದು ಯಾಕೊ ಈ ಬಂಧ ಯಾಕೊ..?
ಯಾಕಿ ಪ್ರೀತಿ....?
ಹಾಡು ಈ ಹಾಡು ನಿನಾಗಾಗಿಯೆ...
ಜೀವ ಈ ಜೀವ ಇವರಿಗಾಗಿಯೆ.....
ಯಾಕಿ ಪ್ರೀತಿ...?..................ಓಹೊ!
ಈ ಪ್ರಾಣ ನಿನ್ನದಲ್ಲ, ಈ ಜೀವ ಸಾಯೊದಿಲ್ಲ....
ಇವರ ಅಭಿಮಾನಕೆ, ನೀನು ಸೋಲಬೇಕಲ್ಲ....
ನೀ ಇದ್ದರೆ ಇಳಿದು ಬಾರೊ....ಓಹೊ!.....
ಆಟ ಹುಡುಗಾಟವೊ, ಪರಮಾತ್ಮನಾಟವೊ....
ಪಾಠವೊ, ನಾಟ್ಕವೊ, ಭಗವಂತನಾಟವೊ.....
ಆಸೆ ಇಟ್ಟೊನು ಅವನೆ... ಕನಸು ಕೊಟ್ಟೊನು ಅವನೆ...
ಆಸೆ ಇಟ್ಟೊನು ಅವನೆ, ಕನಸು ಕೊಟ್ಟೊನು ಅವನೆ...
ಒಂದೆ ಮನೆಯಲ್ಲಿ ಬೇಧ-ಭಾವ ಇಟ್ಟೊನು ಅವನೆ...
ಅವ ಜಾಣನೊ, ಅವನು ಬಲುಜಾಣನೊ....
Friday, May 13, 2016
Wednesday, May 11, 2016
Tuesday, May 10, 2016
Monday, May 9, 2016
Sunday, May 8, 2016
Saturday, May 7, 2016
Thursday, May 5, 2016
Subscribe to:
Posts (Atom)