ಚಿತ್ರ: ಹುಲೀ ಹೆಜ್ಜೆ... ( 1984 )
ಸಾಹಿತ್ಯ: ಪ್ರೊ|| ದೊಡ್ಡರಂಗೇ ಗೌಡರು...
ಗಾಯಕರು: ಡಾ|| ವಿಷ್ಣುವರ್ಧನ್...
ಕಂಡದ್ದ ಕಂಡಾಂಗೆ ಹೇಳಿದ್ರೆ ನೀವೆಲ್ಲ ಕೆಂಡ್ದಂತ ಕ್ವಾಪ ಮಾಡ್ಬೇಡಿ...
ಇದ್ದದ್ದ ಇದ್ದಾಂಗೆ ಹೇಳಿದ್ರೆ ನೀವೆಲ್ಲ ಎದ್ಬಂದು ಎದೆಗೆ ಒದಿಬ್ಯಾಡಿ...
ಕಂಡದ್ದ ಕಂಡಾಂಗೆ ಹೇಳಿದ್ರೆ ನೀವೆಲ್ಲ ಕೆಂಡ್ದಂತ ಕ್ವಾಪ ಮಾಡ್ಬೇಡಿ...
ಇದ್ದದ್ದ ಇದ್ದಾಂಗೆ ಹೇಳಿದ್ರೆ ನೀವೆಲ್ಲ ಎದ್ಬಂದು ಎದೆಗೆ ಒದಿಬ್ಯಾಡಿ...
ಯಾವ್ದ್ಯವ್ದೊ ದಾರೀಗೆ ಹೊಗ್ಬ್ಯಾಡಿ,
ಮರ್ವಾದೆ ಎಂದು ಮೀರ್ಬ್ಯಾಡಿ...
ಯಾವ್ದ್ಯವ್ದೊ ದಾರೀಗೆ ಹೊಗ್ಬ್ಯಾಡಿ,
ಮರ್ವಾದೆ ಎಂದು ಮೀರ್ಬ್ಯಾಡಿ...
ಹುಡ್ಗೀರು ಚೆಡ್ಡೀಯ, ಹುಡ್ಗಾರು ಲಂಗಾವ,
ತೊಟ್ಕೊಳ್ಳಿ ಯಾವ್ದಾರ ದೇಶ್ದಾಗೇ...
ಮೈಪೂರ ಬಿಟ್ಕೊಂಡು, ಮಾನಾನೇ ಕಳ್ಕೊಂಡು,
ಕುಂತ್ಕೊಳ್ಳಿ ಹೆಂಗಾರ ಹುಚ್ರಾಂಗೆ...
ಹುಡ್ಗೀರು ಚೆಡ್ಡೀಯ, ಹುಡ್ಗಾರು ಲಂಗಾವ,
ತೊಟ್ಕೊಳ್ಳಿ ಯಾವ್ದಾರ ದೇಶ್ದಾಗೇ...
ಮೈಪೂರ ಬಿಟ್ಕೊಂಡು, ಮಾನಾನೇ ಕಳ್ಕೊಂಡು,
ಕುಂತ್ಕೊಳ್ಳಿ ಹೆಂಗಾರ ಹುಚ್ರಾಂಗೆ...
ಬೇಡ್ರಪ್ಪೊ ಆರೀತಿ ನಮ್ಗಲ್ಲ,
ಇರ್ಲಪ್ಪ ನಮ್ ನೀತಿ ನಮ್ಗೆಲ್ಲ...
ಬೇಡ್ರಪ್ಪೊ ಆರೀತಿ ನಮ್ಗಲ್ಲ,
ಇರ್ಲಪ್ಪ ನಮ್ ನೀತಿ ನಮ್ಗೆಲ್ಲ...
ಕಂಡದ್ದ ಕಂಡಾಂಗೆ ಹೇಳಿದ್ರೆ ನೀವೆಲ್ಲ ಕೆಂಡ್ದಂತ ಕ್ವಾಪ ಮಾಡ್ಬೇಡಿ...
ಯಾವ್ದ್ಯವ್ದೊ ದಾರೀಗೆ ಹೊಗ್ಬ್ಯಾಡಿ,
ಮರ್ವಾದೆ ಎಂದು ಮೀರ್ಬ್ಯಾಡಿ...
ಬೆಣ್ಣೆಯ ಮಗ್ಲಾಗೆ ಬೆಂಕಿಯು ಇದ್ದಾಗ,
ಯಾವತ್ತು ಹುಸಾರಾಗಿರ್ಬೇಕು...
ಹೆಣ್ಣಿನ ಪಕ್ದಾಗೆ ಗಂಡೊಂದು ಬಂದಾಗ,
ಎಚ್ರಾಗಿ ದೂರ್ದೂರ ಇರಬೇಕು...
ಬೆಣ್ಣೆಯ ಮಗ್ಲಾಗೆ ಬೆಂಕಿಯು ಇದ್ದಾಗ,
ಯಾವತ್ತು ಹುಸಾರಾಗಿರ್ಬೇಕು...
ಹೆಣ್ಣಿನ ಪಕ್ದಾಗೆ ಗಂಡೊಂದು ಬಂದಾಗ,
ಎಚ್ರಾಗಿ ದೂರ್ದೂರ ಇರಬೇಕು...
ಕಾಡ್ತೈತೆ ಪ್ರಾಯ ಮುಂದಾಗಿ, ಕೆಡ್ತೈತೆ ಗ್ಯಾನ ಮಂಕಾಗಿ...
ಕಾಡ್ತೈತೆ ಪ್ರಾಯ ಮುಂದಾಗಿ, ಕೆಡ್ತೈತೆ ಗ್ಯಾನ ಮಂಕಾಗಿ...
ಕಂಡದ್ದ ಕಂಡಾಂಗೆ ಹೇಳಿದ್ರೆ ನೀವೆಲ್ಲ ಕೆಂಡ್ದಂತ ಕ್ವಾಪ ಮಾಡ್ಬೇಡಿ...
ಯಾವ್ದ್ಯವ್ದೊ ದಾರೀಗೆ ಹೊಗ್ಬ್ಯಾಡಿ,
ಮರ್ವಾದೆ ಎಂದು ಮೀರ್ಬ್ಯಾಡಿ...
ಪ್ರಾಣಿಗಳಂಗ್ ನೆಡ್ಕಂತ ಹೆಂಗೆಂಗೋ ಬಿದ್ಕಂತ್,
ಮನ್ಸಾರನೆಡ್ಕಂಡ್ರೆ ಏನ್ಬಂತು....?
ಬುದ್ಯಲ್ಲ ಇದ್ರೂನು ಸುದ್ವಾಗಿ ಬಾಳ್ದಿದ್ರೆ,
ಮನ್ಸ್ರಾಗಿ ಹುಟ್ಟೀನು ಏನಾಯ್ತು.....?
ಪ್ರಾಣಿಗಳಂಗ್ ನೆಡ್ಕಂತ ಹೆಂಗೆಂಗೋ ಬಿದ್ಕಂತ್,
ಮನ್ಸಾರನೆಡ್ಕಂಡ್ರೆ ಏನ್ಬಂತು....?
ಬುದ್ಯಲ್ಲ ಇದ್ರೂನು ಸುದ್ವಾಗಿ ಬಾಳ್ದಿದ್ರೆ,
ಮನ್ಸ್ರಾಗಿ ಹುಟ್ಟೀನು ಏನಾಯ್ತು.....?
ಎಲ್ಲಾರು ಸರಿಯಾಗಿ ನಡಿಬೇಕು, ನಡಿದೋರ ಸ್ವಂಟಾವ ಮುರಿಬೇಕು
ಎಲ್ಲಾರು ಸರಿಯಾಗಿ ನಡಿಬೇಕು, ನಡಿದೋರ ಸ್ವಂಟಾವ ಮುರಿಬೇಕು
ಕಂಡದ್ದ ಕಂಡಾಂಗೆ ಹೇಳಿದ್ರೆ ನೀವೆಲ್ಲ ಕೆಂಡ್ದಂತ ಕ್ವಾಪ ಮಾಡ್ಬೇಡಿ...
ಇದ್ದದ್ದ ಇದ್ದಾಂಗೆ ಹೇಳಿದ್ರೆ ನೀವೆಲ್ಲ ಎದ್ಬಂದು ಎದೆಗೆ ಒದಿಬ್ಯಾಡಿ...
ಕಂಡದ್ದ ಕಂಡಾಂಗೆ ಹೇಳಿದ್ರೆ ನೀವೆಲ್ಲ ಕೆಂಡ್ದಂತ ಕ್ವಾಪ ಮಾಡ್ಬೇಡಿ...
ಇದ್ದದ್ದ ಇದ್ದಾಂಗೆ ಹೇಳಿದ್ರೆ ನೀವೆಲ್ಲ ಎದ್ಬಂದು ಎದೆಗೆ ಒದಿಬ್ಯಾಡಿ...
ಯಾವ್ದ್ಯವ್ದೊ ದಾರೀಗೆ ಹೊಗ್ಬ್ಯಾಡಿ,
ಮರ್ವಾದೆ ಎಂದು ಮೀರ್ಬ್ಯಾಡಿ...
ಯಾವ್ದ್ಯವ್ದೊ ದಾರೀಗೆ ಹೊಗ್ಬ್ಯಾಡಿ,
ಮರ್ವಾದೆ ಎಂದು ಮೀರ್ಬ್ಯಾಡಿ...
No comments:
Post a Comment