Saturday, January 23, 2021

ಪ್ರೇಮದ ಹೂಗಾರ - ಚಿಕ್ಕೆಜಮಾನ್ರು

 ಸಾಹಿತ್ಯ : ಹಂಸಲೇಖ

ಗಾಯನ : ಎಸ್.ಪಿ. ಬಾಲಸುಬ್ರಹ್ಮಣ್ಯಂ


ಪ್ರೇಮದ ಹೂಗಾರ .... ಪ್ರೇಮದ ಹೂಗಾರ
ಪ್ರೇಮದ ಹೂಗಾರ ಈ ಹಾಡುಗಾರ

ಹೂ ನೀಡುತ್ತಾನೆ ಮುಳ್ಳು ಬೇಡುತ್ತಾನೆ..
ಬೆಲ್ಲದ ಬಣಕಾರ ಈ ಹಾಡುಗಾರ
ಸಿಹಿ ನೀಡುತ್ತಾನೆ ಕಹಿ ಬೇಡುತ್ತಾನೆ
ಮಣ್ಣಿನ ಮಮಕಾರ ತಂಪಿರುವ,
ಮಾನದ ಮಣಿಹಾರ ಹೊಂದಿರುವ ಈ ಭಾವ ಜೀವ...

ಪ್ರೇಮದ ಹೂಗಾರ ಈ ಹಾಡುಗಾರ
ಹೂ ನೀಡುತ್ತಾನೆ ಮುಳ್ಳು ಬೇಡುತ್ತಾನೆ..

ಗಂಧದ ಕೊರಳಾಗಿ ಸ್ವಂತಕ್ಕೆ ಬರಡಾಗಿ
ನೋವಿನಲೂ ತೇಯುವುದು ಈ ಒಡಲು
ಗಂಗೆಯು ತಾನಾಗಿ ನೀರಿಗೆ ಎರವಾಗಿ
ಸೇರುತಿದೆ ಕಂಬನಿಯ ಆ ಕಡಲು.... ಕರುಣೆಯ ಕುಂಬಾರ
ಕರುಣೆಯ ಕುಂಬಾರ ಈ ಹಾಡುಗಾರ
ಮಣ್ಣು ಬೇಡುತ್ತಾನೆ ಕೊಡ ನೀಡುತ್ತಾನೆ
ಮಮತೆಯ ಅಲೆಗಾರ ಈ ಹಾಡುಗಾರ
ಮನೆ ಮಾಡುತ್ತಾನೆ ಹೊರ ಹೋಗುತ್ತಾನೆ ..
ಗೋವಿನ ಹಾಲಂಥ ಮನಸಿರುವ
ಜೇನಂತ ಕೂಸಿನ ಮಾತಿರುವ  ಈ ಭಾವ ಜೀವಾ...

ಪ್ರೇಮದ ಹೂಗಾರ  ಈ ಹಾಡುಗಾರ
ಹೂ ನೀಡುತ್ತಾನೆ ಮುಳ್ಳು ಬೇಡುತ್ತಾನೆ

ನಿತ್ಯವೂ ತಾನುರಿದು ಲೋಕಕೆ ದಿನಗರೆದು
ಎಚ್ಚರಿಸೋ ಸೂರ್ಯನಿಗೆ ನಿದಿರೆಯಿಲ್ಲಾ
ರಾತ್ರಿಗೆ ತಾನುಳಿದು ತಾಪಕೆ ತಂಪೆರೆದು
ಸಂಚರಿಸೋ ಚಂದ್ರನಿಗೆ ಸ್ವಂತವಿಲ್ಲ
ಊರಿನ ಗೆಣೆಕಾರ...
ಊರಿನ ಗೆಣೆಕಾರ ಈ ಹಾಡುಗಾರ
ಕಾಪಾಡುತ್ತಾನೆ ಕಡೆಯಾಗುತ್ತಾನೆ
ಸತ್ಯದ ಹರಿಕಾರ ಈ ಹಾಡುಗಾರ
ಹೊರಡುತ್ತಾನೆ ಒಂಟಿಯಾಗುತ್ತಾನೆ
ಮಣ್ಣಿನ ಮಮಕಾರ ಕಂಪಿರುವ
ಮಾನದ ಮಣಿ ಹಾರ ಹೊಂದಿರುವಾ  ಈ ಭಾವ ಜೀವ

ಪ್ರೇಮದ ಹೂಗಾರ ಈ ಹಾಡುಗಾರ
ಹೂ ನೀಡುತ್ತಾನೆ ಮುಳ್ಳು ಬೇಡುತ್ತಾನೆ