Sunday, June 10, 2018

ಬಾಳುವಂತ ಹೂವೆ ಬಾಡುವ ಆಸೆ ಏಕೆ..? ಚಿತ್ರ: ಆಕಸ್ಮಿಕ (1993)


ಚಿತ್ರ: ಆಕಸ್ಮಿಕ (1993) 
ಸಾಹಿತ್ಯ: ಹಂಸಲೇಖ 
ಗಾಯಕ:- ಡಾ. ರಾಜ್‍ಕುಮಾರ್ 
--------------------------------------------------
ಬಾಳುವಂತ ಹೂವೆ ಬಾಡುವ ಆಸೆ ಏಕೆ..? 
ಹಾಡುವಂತ ಕೋಗಿಲೆ ಅಳುವ ಆಸೆ ಏಕೆ..? 
ಕವಲು ದಾರಿಯಲ್ಲಿ ಬಾಳು ಸಾಧ್ಯವೆ... 
ಅವಳಿ ದೋಣಿ ಮೇಲೆ ಯಾನ ಯೋಗ್ಯವೇ... 
ಬಾಳುವಂತ ಹೂವೆ, ಬಾಡುವಾಸೆ ಏಕೆ 
ಹಾಡುವಂತ ಕೋಗಿಲೆ, ಅಳುವ ಆಸೆ ಏಕೆ? 

ಯಾರಿಗಿಲ್ಲ ನೋವು ಯಾರಿಗಿಲ್ಲ ಸಾವು... 
ವ್ಯರ್ಥ ವ್ಯಸನದಿಂದ ಸಿಹಿಯು ಕೂಡ ಬೇವು... 
ಬಾಳು ಒಂದು ಸಂತೆ ಸಂತೆ ತುಂಬ ಚಿಂತೆ... 
ಮದ್ಯ ಮನಗಳಿಂದ ಚಿಂತೆ ಬೇಳೆವುದಂತೆ... 
ಅಂಕೆಯಿರದ ಮನಸನು ದಂಡಿಸುವುದು ನ್ಯಾಯ... 
ಮೂಖ ಮುಗ್ಧ ದೇಹವ ಹಿಂಸಿಸುವುದು ಹೇಯ... 
ಸಣ್ಣ ಬಿರುಕು ಸಾಲದೆ ತುಂಬು ದೋಣಿ ತಳ ಸೇರಲು... 
ಸಣ್ಣ ಅಳುಕು ಸಾಲದೆ ತುಂಬು ಬದುಕು ಬರಡಾಗಲು.... 

ಬಾಳುವಂತ ಹೂವೆ, ಬಾಡುವಾಸೆ ಏಕೆ 
ಹಾಡುವಂತ ಕೋಗಿಲೆ, ಅಳುವ ಆಸೆ ಏಕೆ? 

ಬಾಳ ಕದನದಲ್ಲಿ ಭರವಸೆಗಳು ಬೇಕು... 
ನಾಳೆ ನನ್ನದೆನ್ನುವ ನಂಬಿಕೆಗಳು ಬೇಕು.... 
ಜೀವರಾಶಿಯಲ್ಲಿ ಮಾನವರಿಗೆ ಆದ್ಯತೆ... 
ನಾವೆ ಮೂಢರಾದರೆ ಜ್ಞಾನಕೆಲ್ಲಿ ಪೂಜ್ಯತೆ... 
ಇಲ್ಲಿ ಈಸಬೇಕು ಇದ್ದು ಜಯಿಸಬೇಕು... 
ನಾಗರಿಕರಾದಮೇಲೆ ಸುಗುಣರಾಗಬೇಕು.. 
ನಿನ್ನ ಹಳದಿ ಕಣ್ಣಲಿ ಜನರನೇಕೆ ನೀ ನೋಡುವೆ.... 
ಮನದ ಡೊಂಕು ಕಾಣದೆ ಜಗವನೇಕೆ ನೀ ದೂರುವೆ..? 

ಬಾಳುವಂತ ಹೂವೆ, ಬಾಡುವಾಸೆ ಏಕೆ... 
ಹಾಡುವಂತ ಕೋಗಿಲೆ, ಅಳುವ ಆಸೆ ಏಕೆ... 
ಕವಲು ದಾರಿಯಲ್ಲಿ ಬಾಳು ಸಾಧ್ಯವೇ... 
ಅವಳಿ ದೋಣಿ ಮೇಲೆ ಯಾನ ಯೋಗ್ಯವೇ?

ಬಿಸಿಲು ಕುದುರೆಯೊಂದು ಎದೆಯಿಂದ ಓಡಿದಂತೆ..ಚಿತ್ರ : ಗೂಗ್ಲಿ (2013)

ಚಿತ್ರ : ಗೂಗ್ಲಿ (2013)
ಸಾಹಿತ್ಯ : ಯೋಗರಾಜ್ ಭಟ್....
ಗಾಯಕರು : ರಾಜೇಶ್ ಕೃಷ್ಣನ್....
-----------------------------------
ಓ...
ಬಿಸಿಲು ಕುದುರೆಯೊಂದು ಎದೆಯಿಂದ ಓಡಿದಂತೆ..
ಅವಳ ನೆನಪಿನಿಂದ ನದಿಯೊಂದು ಮೂಡಿದಂತೆ..
ಕಣ್ಣು ಕಂಬನಿಯಾ ಮುಚ್ಚಿಡಲು ಹೇದರುವುದು...
ನಿನ್ನೆ, ಮೊನ್ನೆಗಳಾ ಎತ್ತಿಡಲಿ ಅನಿಸುವುದು...
ಕೆಳಗೆ ಬಂದು ಮರಳಿ ಹೋದ ಹಾಡಾದ ಚಂದೀರ..
ಅವಳು ಹೋದ ಮೇಲೆ ಬಂದನೋ ಒಂದೇ ಸುಂದರ..
ಬರೆದುಕೊಂಡೆ ಹಣೆಯ ರಂಗೋಲಿ...
ಇನ್ನು ಮುಂದೆ ವಿರಹ ಮಾಮೂಲೀ...
ನನ್ನ ನೆರಳಿಗೂ, ದಾರಿ ಮರೆಯುತಿದೆ..
ಕುರುಡು ಕನಸಿಗೆ, ನೆನಪೇ ದೀವಟಿಗೆ..

ಹೃದಯದ ತೋಟದೊಳಗಡೆ,
ಎಂದೂ ಅರಳದ ಹೂವಿನ ಬೆಳವಣಿಗೆ..
ಎಲ್ಲಿಗೋ ಹೊರಟು ಹೋಗಿದೆ,
ನಂಗೂ ತಿಳಿಯದೇ ನನ್ನಯ ಮುಗುಳುನಗೆ..
ಹೃದಯದ ತೋಟದೊಳಗಡೆ,
ಎಂದೂ ಅರಳದ ಹೂವಿನ ಬೆಳವಣಿಗೆ..
ಎಲ್ಲಿಗೋ ಹೊರಟು ಹೋಗಿದೆ,
ನಂಗೂ ತಿಳಿಯದೇ ನನ್ನಯ ಮುಗುಳುನಗೆ..

ಬಿಸಿಲು ಕುದುರೆಯೊಂದು ಎದೆಯಿಂದ ಓಡಿದಂತೆ..
ಅವಳ ನೆನಪಿನಿಂದ ನದಿಯೊಂದು ಮೂಡಿದಂತೆ..

ಕಣ್ಣಿನ ಕಡಲಲಿ ಮುಳುಗಡೆಯಾಗಿದೆ ನಾನೇ ಬಿಟ್ಟ ದೋಣಿ,
ನಿನ್ನೇಯ ಪ್ರಶ್ನೇಗೆ ಉತ್ತರ ಎಲ್ಲಿದೆ? ಅವಳೋ ತುಂಬಾ ಮೌನಿ,
ಮೊದಲಿನಿಂದ ಮೋಹಿಸುವೇನು, ಮರಳಿ ಬಂದರೆ ಅವಳು..
ನನಗೂ ಗೋತ್ತು, ಅವಳು ಬರಳು ನನ್ನ ಸ್ವಪ್ನದಲೂ..

ಹೃದಯದ ತೋಟದೊಳಗಡೆ,
ಎಂದೂ ಅರಳದ ಹೂವಿನ ಬೆಳವಣಿಗೆ..
ಎಲ್ಲಿಗೋ ಹೊರಟು ಹೋಗಿದೆ,
ನಂಗೂ ತಿಳಿಯದೇ ನನ್ನಯ ಮುಗುಳುನಗೆ..
ಹೃದಯದ ತೋಟದೊಳಗಡೆ,
ಎಂದೂ ಅರಳದ ಹೂವಿನ ಬೆಳವಣಿಗೆ..
ಎಲ್ಲಿಗೋ ಹೊರಟು ಹೋಗಿದೆ,
ನಂಗೂ ತಿಳಿಯದೇ ನನ್ನಯ ಮುಗುಳುನಗೆ..

ಬಿಸಿಲು ಕುದುರೆಯೊಂದು ಎದೆಯಿಂದ ಓಡಿದಂತೆ..
ಅವಳ ನೆನಪಿನಿಂದ ನದಿಯೊಂದು ಮೂಡಿದಂತೆ..