ಚಿತ್ರ : ತುತ್ತಾ.. ಮುತ್ತಾ.. ( 1998 )
ಸಾಹಿತ್ಯ : ನಾದಬ್ರಹ್ಮ "ಹಂಸಲೇಖ"
ಗಾಯಕರು : ಡಾ || ಎಸ್.ಪಿ.ಬಾಲಸುಬ್ರಮಣ್ಯಂ....
----------------------------------------------
ತುಸು ಮೆಲ್ಲ ಬೀಸೂ ಗಾಳಿಯೇ....
ತುಸು ಮೆಲ್ಲ ಬೀಸೂ ಗಾಳಿಯೇ....
ಈ ಲಾಲಿ... ಸುವ್ವಾಲಿ... ಈ ತಾಯಿ ಕೇಳಲಿ...
ನಿದ್ದೇಲಿ ಆಡಲಿ...
ತುಸು ಮೆಲ್ಲ ಬೀಸೂ ಗಾಳಿಯೇ....
ಲಾಲನೆಯ , ಪಾಲನೆಯ,
ಮಾಡಿದಂತ ಜೀವಕೆ....
ಚಿಂತಿಸುತ , ಹರಸುತ,
ಮಿಡಿದು ಬಡಿದ ತಂತಿಗೆ....
ಕೊಂಚ ಬಿಡುವು ಬೇಡವೆ,
ನಿದ್ದೆಯಲ್ಲೂ
ಮಗನ ನೆನೆವ ಮನಸ್ಸಿಗೆ... ||
ತುಸು ಮೆಲ್ಲ ಬೀಸೂ ಗಾಳಿಯೇ....
ತುಸು ಮೆಲ್ಲ ಬೀಸೂ ಗಾಳಿಯೇ....
ಈ ಲಾಲಿ... ಸುವ್ವಾಲಿ... ಈ ತಾಯಿ ಕೇಳಲಿ...
ನಿದ್ದೇಲಿ ಆಡಲಿ...
ಜನುಮದ , ಜನುಮದ,
ನೆನಪು ನೀಡು ಜೋಗುಳ...
ನೋವಿನ , ನಲಿವಿನ,
ಕಲಸು ಮೇಳ ಜೋಗುಳ...
ಹೇಳಿದಂತ ಗುರುವಿಗೆ,
ಜೋಗುಳದಿ ಲೋಕ ತೂಗೊ ತಾಯಿಗೆ...||
ತುಸು ಮೆಲ್ಲ ಬೀಸೂ ಗಾಳಿಯೇ....
ತುಸು ಮೆಲ್ಲ ಬೀಸೂ ಗಾಳಿಯೇ....
ಈ ಲಾಲಿ... ಸುವ್ವಾಲಿ... ಈ ತಾಯಿ ಕೇಳಲಿ...
ನಿದ್ದೇಲಿ ಆಡಲಿ...