ಚಿತ್ರ : ರಾಜಕುಮಾರ (2017)
ಸಾಹಿತ್ಯ : ಗೌಸಪೀರ್...
ಗಾಯಕರು : ಸೋನು ನಿಗಮ್...
************************************
ಸಾಗರದ... ಅಲೆಗೂ ದಣಿವು...
ಪರ್ವತಕು... ಬಿಳೋ ಭಯವು...
ಮಳೆಯ ಹನಿಗು ಬಂತು ನೋಡು ದಾಹ...
ಶಶಿಗೆ ಕಳಚಿ ಹೋಯ್ತು ಖುಷಿಯ ಸ್ನೇಹ...
ಹಾರಾಡೋ ಮೋಡವಿಂದು, ರೆಕ್ಕೆಗಳ ಮುರಿದುಕೊಂಡು...
ನಿಂತಿದೆ ಮಂಕಾಗಿ ಸುಮ್ಮನೇ...
ತಂಗಾಳಿ ಅಂಗಳವು ದಂಗಾಗಿ..
ಬೆವರಿರೊ ಸೂಚನೆ..
ಸಾಗರದ... ಅಲೆಗೂ ದಣಿವು..
ಬೆಂಕಿ ಮಳೆಗೆ ಬೆಂದಾ ಮೇಲೆ ಹೂವು...
ಹೇಗೆ ತಾನೆ ಕಾಣಬೇಕು ನಗುವು..?
ಬೇಸರದ ರಾಟೆಯು, ಎದೆಯಲಿ ತಿರುಗಿ...
ತಿರುಗುವ ಈ ಭೂಮಿಯೇ, ನಿಂತಿದೆ ಕೊರಗಿ...
ಬದುಕಿನ ಹೊಸ ರೂಪದ, ಪರಿಚಯವಾಗಿ...
ಬೆಳಕೆ ಕಳೆದ್ಹೋಗಿದೆ, ಸೂರ್ಯನು ಮುಳುಗಿ...
ಎಲ್ಲೇ ನೋಡು, ಹಳೆ ಗುರುತು...
ಬಾಳೋದ್ಹೇಗೆ, ಎಲ್ಲಾ ಮರೆತು...
ಬಯಸದೆ ನಾ ಎಲ್ಲ ಅಂದು, ಬಯಸಿದರೂ ಇಲ್ಲ ಇಂದು...
ಈಜುವುದ್ಹೇಗೆ ಕುದಿಯೊ ನದಿಯನ್ನ..?
ಚೂಪಾದ ಕಲ್ಲಿಂದ ಚೂರಾಯ್ತು, ಕನಸಿನಾ ದರ್ಪಣ...
ಸಾಗರದ...ಅಲೆಗೂ ದಣಿವು...
ಕಾಲಾ ನೀನು ಮಾಯ, ಮಾಯ...
ಇಲ್ಲ ನಿನಗೇ ನ್ಯಾಯ...
ವಾಸಿ ಮಾಡೋರ್ಯಾರು, ಯಾರು...
ಒಳಗೇ ಆದ ಗಾಯ...
ನಂಜು ಒಂದು, ಹೃದಯ ಸವರಿ...
ಮಂಜು ಕವಿದು, ಮುಪ್ಪುದಾರಿ...
ಗೆದ್ದಾಗ ಬೆನ್ನುತಟ್ಟಿ, ಬಿದ್ದಾಗ ಮೇಲೆ ಎತ್ತಿ...
ಜೊತೆಯಲಿ ನಿಲ್ಲೋರಿಲ್ಲಾ ಒಂಟಿ ನಾ...
ಆಸೆಗಳ ಆಕಾಶ ಪಾತಾಳ...
ಮುಟ್ಟಿದೆ ಈ ದಿನ...
ಸಾಗರದ... ಅಲೆಗೂ ದಣಿವು...
ಬೆಂಕಿ ಮಳೆಗೆ ಬೆಂದಾ ಮೇಲೆ ಹೂವು...
ಹೇಗೆ ತಾನೆ ಕಾಣಬೇಕು ನಗುವು..?