Sunday, October 30, 2016

ದೀಪದಿಂದ ದೀಪವ ಹಚ್ಚಬೇಕು ಮಾನವ... (ನಜುಂಡಿ...)

ದೀಪದಿಂದ ದೀಪವ ಹಚ್ಚಬೇಕು ಮಾನವ...
ಪ್ರೀತಿಯಿಂದ ಪ್ರೀತಿ ಹಂಚಿರೋ...

ದೀಪದಿಂದ ದೀಪವ ಹಚ್ಚಬೇಕು ಮಾನವ...
ಪ್ರೀತಿಯಿಂದ ಪ್ರೀತಿ ಹಂಚಲೂ...
ಮನಸ್ಸಿನಿಂದ ಮನಸನು ಬೆಳಗಬೇಕು ಮಾನವ...
ಮೇಲು ಕೀಳು ಭೇದ ನಿಲ್ಲಲೂ...
ಭೇದವಿಲ್ಲ ಬೆಂಕಿಗೆ.. ದ್ವೇಷವಿಲ್ಲ ಬೆಳಕಿಗೆ..
ನೀ.. ತಿಳಿಯೋ...  ನೀ.. ತಿಳಿಯೋ..

ದೀಪದಿಂದ ದೀಪವ ಹಚ್ಚಬೇಕು ಮಾನವ...
ಪ್ರೀತಿಯಿಂದ ಪ್ರೀತಿ ಹಂಚಲೂ..
ಓ..ಹೋ... ಹೋ... ಹೊ.. ಒಒಓ... ಓ...ಹೋ... ಹೋ... ಹೊ... ಒಒಓ...
ಓ..ಹೋ... ಹೋ... ಹೊ.. ಒಒಓ... ಓ...ಹೋ... ಹೋ... ಹೊ... ಒಒಓ...

ಆಸೆ ಹಿಂದೆ  ದುಖಃ ಎಂದರೂ...
ರಾತ್ರಿ ಹಿಂದೆ ಹಗಲು ಎಂದರೂ...
ವೇಷವೆಂದೂ ಹೊರೆ ಎಂದರೂ...
ಹಬ್ಬ ಅದಕೆ ಹೆಗಲು ಎಂದರೂ....
ಎರಡು ಮುಖದ ನಮ್ಮ ಜನುಮದ.. ವೇಷಾವಳಿ...
ಕಳೆದು ಹಾಲ್ ಬೆಳಕ ಕುಡಿವುದೇ.. ದೀಪಾವಳಿ...

ದೀಪದಿಂದ ದೀಪವ ಹಚ್ಚಬೇಕು ಮಾನವ...
ಪ್ರೀತಿಯಿಂದ ಪ್ರೀತಿ ಹಂಚಲೂ...
ಭೇದವಿಲ್ಲ ಬೆಂಕಿಗೆ.. ದ್ವೇಷವಿಲ್ಲ ಬೆಳಕಿಗೆ...
ನೀ.. ತಿಳಿಯೋ... ನೀ.. ತಿಳಿಯೋ...
ದೀಪದಿಂದ ದೀಪವ ಹಚ್ಚಬೇಕು ಮಾನವ...
ಪ್ರೀತಿಯಿಂದ ಪ್ರೀತಿ ಹಂಚಲೂ...

ಮಣ್ಣಿನಿಂದ ಹಣತೆಯಾದರೇ...
ಬೀಜದಿಂದ ಎಣ್ಣೆಯಾಯಿತು....
ಅರಳೆಯಿಂದ ಬತ್ತಿಯಾದರೇ....
ಸುಡುವ ಬೆಂಕಿ ಜ್ಯೋತಿಯಾಯಿತು...
ನಂದಿಸುವುದು ತುಂಬಾ ಸುಲಭವೋ....
ಹೇ... ಮಾನವ...
ಆನಂದಿಸುವುದು ತುಂಬಾ ಕಠಿಣವೊ...
ಹೇ.. ದಾನವ...

ದೀಪದಿಂದ ದೀಪವ ಹಚ್ಚಬೇಕು ಮಾನವ...
ಪ್ರೀತಿಯಿಂದ ಪ್ರೀತಿ ಹಂಚಲೂ...
ಭೇದವಿಲ್ಲ ಬೆಂಕಿಗೆ.. ದ್ವೇಷವಿಲ್ಲ ಬೆಳಕಿಗೆ...
ನೀ.. ತಿಳಿಯೋ...  ನೀ.. ತಿಳಿಯೋ...

ದೀಪದಿಂದ ದೀಪವ ಹಚ್ಚಬೇಕು ಮಾನವ...
ಪ್ರೀತಿಯಿಂದ ಪ್ರೀತಿ ಹಂಚಲೂ....

Tuesday, October 18, 2016

ಕೆಣಕುತಿದೆ ನಿನ್ನ ಕಣ್ಣೋಟ  ... ಕುಣಿಸುತಿದೇ ನಿನ್ನ ಕಣ್ಣಾಟ..ಚಿತ್ರ : ಆಸೆಗೊಬ್ಬ ಮೀಸೆಗೊಬ್ಬ..(1990)


ಚಿತ್ರ : ಆಸೆಗೊಬ್ಬ ಮೀಸೆಗೊಬ್ಬ..(1990)
ಗಾಯಕರು : ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ...
ಸಾಹಿತ್ಯ : ಸಾಹಿತ್ಯ ರತ್ನ. ಚಿ! ಉದಯಶಂಕರ್...
--------------------------------------------------------------

ಕೆಣಕುತಿದೆ ನಿನ್ನ ಕಣ್ಣೋಟ  ...
ಕುಣಿಸುತಿದೇ ನಿನ್ನ ಕಣ್ಣಾಟ...
ಸೆಳೆಯಲು ನಿನ್ನ ತನುವಿನ ಮಾಟ,
ಕಲಿಯಲು ಆಸೆ ಪ್ರಣಯದ ಪಾಠ,
ಮಾಡುವುದೆನಿಗಾ  ???...

ಕೆಣಕುತಿದೆ ನಿನ್ನ ಕಣ್ಣೋಟ  ...

ಸಂಜೆ ಬಾನ ಬಣ್ಣ ಕಂಡೆ ಕೆನ್ನೇಲಿ,
ಕಂಡೆ ಚಂದ್ರ ತಂದ ಕಾಂತಿ ನಿನ್ನ ಕಣ್ಣಲಿ!!
ನೀ ನುಡಿದರು ಸೊಗಸು,
ಮೌನವು ಸೊಗಸು, ಎಲ್ಲ  ಸಂಗೀತವೇ ....

ಕೆಣಕುತಿದೆ ನಿನ್ನ ಕಣ್ಣೋಟ...

ಸೆಳೆಯಲು ನಿನ್ನ ತನುವಿನ ಮಾಟ,
ಕಲಿಯಲು ಆಸೆ ಪ್ರಣಯದ ಪಾಠ,
ಮಾಡುವುದೆನಿಗಾ  ???

ಕೆಣಕುತಿದೆ ನಿನ್ನ ಕಣ್ಣೋಟ  ...

ಎಂದು ಕಂಡ ಅಂದ ಅಂದು ನಿನ್ನದು,
ನಲ್ಲೆ ಎಂದೋ ಕಂಡ ಸ್ನೇಹ ಪ್ರೇಮ ನಮ್ಮದು!!
ಇದು ಸಾವಿರ ಜನುಮ,
ಜೊತೆಯಲಿ ನಾವು, ಕಂಡ ಆನಂದವೂ ......

ಕೆಣಕುತಿದೆ ನಿನ್ನ ಕಣ್ಣೋಟ  ...

ಕುಣಿಸುತಿದೇ ನಿನ್ನ ಕಣ್ಣಾಟ...
ಸೆಳೆಯಲು ನಿನ್ನ ತನುವಿನ ಮಾಟ,
ಕಲಿಯಲು ಆಸೆ ಪ್ರಣಯದ ಪಾಠ,
ಮಾಡುವುದೆನಿಗಾ  ??

ಕೆಣಕುತಿದೆ ನಿನ್ನ ಕಣ್ಣೋಟ  ...