Sunday, June 19, 2016

ಮುಕ್ತ.... ಮುಕ್ತ.... (ಭಾವಗೀತೆ)

ಮುಕ್ತ.... ಮುಕ್ತ.... (ಭಾವಗೀತೆ)
ರಚನೆ : ಡಾ|| ಹೆಚ್.ಎಸ್.ವೆಂಕಟೇಶ ಮೂರ್ತಿ....
ಗಾಯಕರು : ವಿಜಯ ಪ್ರಕಾಶ.....

------------------------------------------------------
ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ | ನೀಡಿ ನೀಡಿ ಮುಕ್ತ...
ಬೇವ ಅಗಿವ ಸವಿ ಗಾನದ ಹಕ್ಕಿ | ಹಾರಿ ಮುಕ್ತ ಮುಕ್ತ...
ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ | ನೀಡಿ ನೀಡಿ ಮುಕ್ತ...
ಬೇವ ಅಗಿವ ಸವಿ ಗಾನದ ಹಕ್ಕಿ | ಹಾರಿ ಮುಕ್ತ ಮುಕ್ತ...

ಹಸಿರ ತೋಳಿನಲಿ ಬೆಂಕಿಯ ಕೂಸ | ಪೊರೆವುದು ತಾಯಿಯ ಹೃದಯ..
ಹಸಿರ ತೋಳಿನಲಿ ಬೆಂಕಿಯ ಕೂಸ | ಪೊರೆವುದು ತಾಯಿಯ ಹೃದಯ..
ಮರೆಯುವುದುಂಟೆ ಮರೆಯಲಿ ನಿಂತೆ | ಕಾಣುವ ಕರುಣಾ ಮಯಿಯ..
ಮರೆಯುವುದುಂಟೆ ಮರೆಯಲಿ ನಿಂತೆ | ಕಾಣುವ ಕರುಣಾ ಮಯಿಯ..

ತನ್ನಾವರಣವೆ ಸೆರೆಮನೆಯಾದರೆ | ಜೀವಕೆ ಎಲ್ಲಿಯ ಮುಕ್ತಿ...
ಬೆಳಕಿನ ಬಟ್ಟೆಯ ಬಿಚ್ಚುವ ಜ್ಯೋತಿಗೆ | ಬಯಲೇ ಜೀವನ ಮುಕ್ತಿ...
ಬೆಳಕಿನ ಬಟ್ಟೆಯ ಬಿಚ್ಚುವ ಜ್ಯೋತಿಗೆ | ಬಯಲೇ ಜೀವನ ಮುಕ್ತಿ...

ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ | ನೀಡಿ ನೀಡಿ ಮುಕ್ತ...
ಬೇವ ಅಗಿವ ಸವಿ ಗಾನದ ಹಕ್ಕಿ | ಹಾರಿ ಮುಕ್ತ ಮುಕ್ತ...

ಹೂ ಮೊಗವಾಡದ ಇರಿಯುವ ಮುಳ್ಳೇ | ಎಲ್ಲಿಯ ವರೆಗೆ ನಿನ್ನ ಆಟ...
ಹೂ ಮೊಗವಾಡದ ಇರಿಯುವ ಮುಳ್ಳೇ | ಎಲ್ಲಿಯ ವರೆಗೆ ನಿನ್ನ ಆಟ...
ಬೆಳಕಿನ ಕೂಸಿಗೆ ಕೆಂಡದ ಹಾಸಿಗೆ | ಕಲಿಸಿದೆ ಜೀವನ ಪಾಠ...
ಬೆಳಕಿನ ಕೂಸಿಗೆ ಕೆಂಡದ ಹಾಸಿಗೆ | ಕಲಿಸಿದೆ ಜೀವನ ಪಾಠ...

ಇರುಳ ವಿರುದ್ಧ, ಬೆಳಕಿನ ಯುದ್ಧ | ಕೊನೆಯಿಲ್ಲದ ಕಾದಾಟ...
ತಡೆಯೆ ಇಲ್ಲದೇ, ನಡೆಯಲೇ ಬೇಕು | ಸೋಲಿಲ್ಲದ ಹೋರಾಟ...
ಇರುಳ ವಿರುದ್ಧ, ಬೆಳಕಿನ ಯುದ್ಧ | ಕೊನೆಯಿಲ್ಲದ ಕಾದಾಟ...

ತಡೆಯೆ ಇಲ್ಲದೇ, ನಡೆಯಲೇ ಬೇಕು | ಸೋಲಿಲ್ಲದ ಹೋರಾಟ...

Thursday, June 16, 2016

ನೀಲ ಮೇಘ ಗಾಳಿ ಬೀಸಿ, ದೂರಾದ ಹಾಗೆ...(ಆನಂದ)

ನನ್ನಾಣೆ ಕೇಳೆ ನನ್ನ ಪ್ರಾಣವೆ, ನಂಗೆ ಯಾರು ಇಲ್ಲವೆ...(ಏಕಾಂಗಿ)

ಒಲವಿನ ಪ್ರಿಯಲತೆ, ಅವಳದೆ ಚಿಂತೆ.... (ಕುಲವಧು)

ನಿನ್ನಂತ ಅಪ್ಪಾ ಇಲ್ಲಾ, ಒಂದೊಂದು ಮಾತು ಬೆಲ್ಲಾ....(ದೇವತಾ ಮನುಷ್ಯ)

ಓ ... ಬಿಸಿಲು ಕುದುರೆಯೊಂದು ಎದೆಯಿಂದ ಓಡಿದಂತೆ.... (ಗೂಗ್ಲಿ)

ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು ....(ಭಾವಗೀತೆ)

Saturday, June 4, 2016

ನನ್ನವಳು ನನ್ನವಳು, ನನ್ನೆದೆಯಾ ಕಣ್ಣಿವಳು... (ನನ್ನವಳು)

ಗುರುವಾರ ಸಂಜೇ ನಾ ಹೊರಟಿದ್ದೆ, ಅಲೆಯೋಕೆ.... ಎದುರಾಯಿತು ಚೂಡಿದಾರ ತೊಟ್ಟ, ಮರಿ ಜಿಂಕೆ... ಚಿತ್ರ : ಪವರ (2014)

ಚಿತ್ರ : ಪವರ (2014) 
ಸಾಹಿತ್ಯ : ಕವಿರಾಜ್..... 
ಗಾಯಕರು : ಪುನೀತ್ ರಾಜಕುಮಾರ್.... 
ಮತ್ತು ಸಂಗಡಿಗರು... 
--------------------------------------------------------------
ಗುರುವಾರ ಸಂಜೇ ನಾ ಹೊರಟಿದ್ದೆ, ಅಲೆಯೋಕೆ.... 
ಎದುರಾಯಿತು ಚೂಡಿದಾರ ತೊಟ್ಟ, ಮರಿ ಜಿಂಕೆ.... 
ಬಿದ್ದೆ ಬಿದ್ದೆ ಬಿದ್ದೆ, ಯರ್ರಾ ಬಿರ್ರೀ ಬಿದ್ದೆ.... 
ಖಾಲಿ ಹಾರ್ಟು ಡೀಲಾಗೋಯ್ತು, ನಾನು ಲವ್ವಲ್ಲ ಬಿದ್ದೆ.... 
ಸೀದಾ ಸಾದಾ ಇದ್ದೇ, ಉಲ್ಟಾ ಪಲ್ಟಾ ಆದೆ.... 
ಹೆಂಗೆಂಗಿದ್ದೆ, ಹೆಂಗಾಗೋದೆ ಅಯ್ಯೋ ರಾಮ... ರಾಮ.... 
.................................................................. 
ಅಯ್ಯೋ ಅಯ್ಯೋ ಪಾಪಾ, ನೋಡೆ ನೀನು ಸ್ವಲ್ಪ, 
ಒಳ್ಳೆ ಹುಡುಗ ಅನ್ನಸ್ತಾನೇ ಸೈಡಲೀ....
ಏನೋ ಸ್ವಲ್ಪ ಹುಂಬ, ಚೂರು ಇಲ್ಲ ಜಂಬಾ, 
ನೀನು ಪ್ರೀತಿ ಮಾಡು, ಆಗೋದಾಗಲೀ...
 .................................................................. 
ಗುರುವಾರ ಸಂಜೇ ನಾ ಹೊರಟಿದ್ದೆ, ಅಲೆಯೋಕೆ... 
ಎದುರಾಯಿತು ಚೂಟಿದಾರ ತೊಟ್ಟ, ಮರಿ ಜಿಂಕೆ... 

ಅಯ್ಯೋ ಅಯ್ಯೋ ಪಾಪಾ, ನೋಡೆ ನೀನು ಸ್ವಲ್ಪ, 
ಒಳ್ಳೆ ಹುಡುಗ ಅನ್ನಸ್ತಾನೇ, ಸೈಡಲೀ..... 
ಏನೋ ಸ್ವಲ್ಪ ಹುಂಬ, ಚೂರು ಇಲ್ಲ ಜಂಬಾ, 
ನೀನು ಪ್ರೀತಿ ಮಾಡು, ಆಗೋದಾಗಲೀ...
 .................................................................. 
ಜೋರಾಗಿ ಅಳುವ ಕಂದ, ಇವಳನ್ನ ಕಂಡಾಗಿಂದ, 
ಬಾಯ್ತುಂಬ ನಗುವ ಚೆಂದ, ನೋಡೊ ಗೋವಿಂದ.... 
ರಾತ್ರೀಲಿ ಕಾಣೋ ಚಂದ್ರ, ಹಗಲೆಲ್ಲ ಕಾಣೇ ಆದ,
 ಗುಟ್ಟಾಗಿ ಇವಳ ಕೆನ್ನೇಲಿ ಬಚ್ಚಿಟ್ಟುಕೊಂಡ... 
ಹುಣ್ಣಿಮೇ ಹುಟ್ಟೋದೆ ಇವಳ ಕಣ್ಣಲ್ಲಿ... 
ಬೀಸಿದೆ ತಂಗಾಳಿ ಹೋದಲ್ಲೇ..... 
ಸುಮ್ಮನೇ ಗೊಣಗುತ್ತಾಳೆ ನಿಂತಲ್ಲೇ ... 
ಹೆಂಗೆಂಗಿದ್ದೆ, ಹೆಂಗಾಗೋದೆ ಅಯ್ಯೋ ರಾಮ... ರಾಮ...
................................................................... 
ಅಯ್ಯೋ ಅಯ್ಯೋ ಪಾಪಾ, ನೋಡೆ ನೀನು ಸ್ವಲ್ಪ, 
ಒಳ್ಳೆ ಹುಡುಗ ಅನ್ನಸ್ತಾನೇ ಸೈಡಲೀ... 
ಏನೋ ಸ್ವಲ್ಪ ಹುಂಬ, ಚೂರು ಇಲ್ಲ ಜಂಬಾ, 
ನೀನು ಪ್ರೀತಿ ಮಾಡು, ಆಗೋದಾಗಲೀ.... 
................................................................. 
ಗುರುವಾರ ಸಂಜೇ ನಾ ಹೊರಟಿದ್ದೆ... 

ಸ್ಲೇಟಲ್ಲಿ ಅಆಇಈ, ಬರಕೊಟ್ರು ನನ್ನ ಅಮ್ಮ, 
ತಿದ್ದೋಕೆ ಹೇಳಿದಂತೆ ಅಂದು ಕೇಳಮ್ಮ... 
ಹಾರ್ಟಲ್ಲಿ L O V E ಬರೆದಿಟ್ಟು ಇವಳು ನಂಗೆ, 
ತಿದ್ದೋಕೆ ಹೇಳಿದ್ದಾಳೆ, ಇಂದೇ ಕಣಮ್ಮ.... 
ಕಾಮನ, ಬಿಲ್ಲನ್ನೆ ಕಿತ್ತು ಕೈಯಲ್ಲಿ.... 
ನೀಡುವ, ಮಾಯಾವಿ ಈ ಮಳ್ಳಿ.... 
ಮೆಲ್ಲಗೆ ಬಂಧಿ ಆದೇ ನಾನಿಲ್ಲಿ.... 
ಹೆಂಗೆಗ್ಗಿದ್ದೆ, ಹೆಂಗಾಗೋದೆ ಅಯ್ಯೋ ರಾಮ... ರಾಮ.... 
ಗುರುವಾರ ಸಂಜೇ ನಾ ಹೊರಟಿದ್ದೆ, ಅಲೆಯೋಕೆ... 
ಎದುರಾಯೀತು ಚೂಡಿದಾರ ತೊಟ್ಟ, ಮರಿ ಜಿಂಕೆ.... 
.................................................................... 
ಅಯ್ಯೋ ಅಯ್ಯೋ ಪಾಪಾ, ನೋಡೆ ನೀನು ಸ್ವಲ್ಪ, 
ಒಳ್ಳೆ ಹುಡುಗ ಅನ್ನಸ್ತಾನೆ, ಸೈಡಲೀ... 
ಏನೋ ಸ್ವಲ್ಪ ಹುಂಬ, ಚೂರು ಇಲ್ಲ ಜಂಬಾ, 
ನೀನು ಪ್ರೀತಿ ಮಾಡು, ಆಗೋದಾಗಲೀ.....