Sunday, January 31, 2016

ನಿನ್ನ ಪ್ರೀತಿಗೆ, ಅದರ ರೀತಿಗೆ ಕಣ್ಣ ಹನಿಗಳೆ ಕಾಣಿಕೆ? (ಭಾವಗೀತೆ)

ದುಡ್ಡು ಕೊಟ್ಟರ ಬೇಕಾದ್ದ ಸಿಗತೈತಿ ಈ ಜಗದಲಿ ಕಾಣೋ.... (ಜಾನಪದ ಗೀತೆ)

ದುಡ್ಡು ಕೊಟ್ಟರ ಬೇಕಾದ್ದ ಸಿಗತೈತಿ ಈ ಜಗದಲಿ ಕಾಣೋ.... (ಜಾನಪದ ಗೀತೆ)
ಗಾಯಕರು : ಗುರುರಾಜ್ ಹೊಸಕೋಟೆ...

ದುಡ್ಡು ಕೊಟ್ಟರ ಬೇಕಾದ್ದ ಸಿಗತೈತಿ ಈ ಜಗದಲಿ ಕಾಣೋ....
ಹಡೆದ ತಾಯಿಯನ್ನು ಕಳಕೊಂಡ ಮ್ಯಾಲ ಮತ್ತೆ ಸಿಗುವಳೇನೋ,
ತಮ್ಮಾ ಮರಳಿ ಬರುವಳೇನೋ, ತಮ್ಮಾ ಮರಳಿ ಬರುವಳೇನೋ..... (೨)

ಒಂಬ್ಬತ್ತು ತಿಂಗಳ ಸಂಕಟ ನೀಡಿ ಹೊಟ್ಯಾಗ ಬೆಳದೆಲ್ಲೋ.....
ಹುಟ್ಟಿ ಬರುವ ಮುನ್ನ ಜೀವಕ್ಕ ಎಷ್ಟೋ ಕಷ್ಟ ಕೊಟ್ಟಿಯಲ್ಲೋ... (೨)
ಬರುವ ಕಷ್ಟಗಳ ಸಹಿಸಿದ ತಾಯಿ, ನಿನ್ನ ನಂಬಿತಲ್ಲೋ...
ಬರುವ ಕಷ್ಟಗಳ ಸಹಿಸಿದ ತಾಯಿ, ನಿನ್ನ ನಂಬಿತಲ್ಲೋ...
ತಾನು ಕರಗಿ ನಿನ್ನ ಕೋಣ ಬೆಳಸಿದಂಗ ಬೆಳಸಿ ಬಿಟ್ಟಳಲ್ಲೋ...
ಒಬ್ಬ ಮಗಾ ನೀ ಆಸರಾದಿಯಂತ, ತಾಯಿ ತಿಳಿದಿತ್ತಲ್ಲೋ,
ಜೀವ ಇಟ್ಟಿತ್ತ ನಿನ್ನ ಮ್ಯಾಲೋ...

ದುಡ್ಡು ಕೊಟ್ಟರ ಬೇಕಾದ್ದ ಸಿಗತೈತಿ ಈ ಜಗದಲಿ ಕಾಣೋ....
ಹಡೆದ ತಾಯಿಯನ್ನು ಕಳಕೊಂಡ ಮ್ಯಾಲ ಮತ್ತೆ ಸಿಗುವಳೇನೋ,
ತಮ್ಮಾ ಮರಳಿ ಬರುವಳೇನೋ, ತಮ್ಮಾ ಮರಳಿ ಬರುವಳೇನೋ.....

ಕೂಲಿ ನಾಲಿ ಮಾಡಿ ಶಾಲೆ ಕಲಿಸಿದಳು, ಜಾಣ ನಾಗಲೆಂತ....
ಚಿನ್ನದಂತ ಒಂದು ಹೆಣ್ಣ ನೋಡ್ಯಾಳು, ನಿನ್ನ ಮದುವಿಗಂತ.... (೨)
ಸಾಲ ಶೂಲ ಮಾಡಿ ಮದುವೆ ಮಾಡಿದಳು, ಬಳ್ಳಿ ಹಬ್ಬಲೆಂತ....
ಸಾಲ ಶೂಲ ಮಾಡಿ ಮದುವೆ ಮಾಡಿದಳು, ಬಳ್ಳಿ ಹಬ್ಬಲೆಂತ....
ಮೊಮ್ಮಕ್ಕಳನು ಎತ್ತಿ ಆಡಿಸುವ ಚಿಂತಿ ಒಳಗ ಇತ್ತ...
ಮುಪ್ಪಿನ ತಾಯಿ ಏನೇನೋ ಕನಸ ಕಟಗೊಂಡ ಕುಂತಿತ್ತ...
ಕನಸು ಕನಸಾಗೇ ಉಳಿತ.......

ದುಡ್ಡು ಕೊಟ್ಟರ ಬೇಕಾದ್ದ ಸಿಗತೈತಿ ಈ ಜಗದಲಿ ಕಾಣೋ....
ಹಡೆದ ತಾಯಿಯನ್ನು ಕಳಕೊಂಡ ಮ್ಯಾಲ ಮತ್ತೆ ಸಿಗುವಳೇನೋ,
ತಮ್ಮಾ ಮರಳಿ ಬರುವಳೇನೋ, ತಮ್ಮಾ ಮರಳಿ ಬರುವಳೇನೋ.....

ಮಗಳಿಗಿಂತ ಹೆಚ್ಚಿನ ಪ್ರೀತಿಲಿ ಸೊಸಿನ ಕಂಡಳ್ಳಲ್ಲ...
ಸೊಕ್ಕಿನ ಸೊಸೆಯು ತಾಯಿಯ ಹಂಗ ನೋಡಿಕೊಳ್ಳಲಿಲ್ಲಾ... (೨)
ಸೋತ ಶರೀರಕ ಸುಖ ಎಂಬುವುದು ಈ ಸೊಸಿಯು ನೀಡಲಿಲ್ಲಾ...
ಸೋತ ಶರೀರಕ ಸುಖ ಎಂಬುವುದು ಈ ಸೊಸಿಯು ನೀಡಲಿಲ್ಲಾ...
ಉಂಡು ಬಿಟ್ಟಿರಿವು ಎಂಜಲ ಕೂಳ ತಾಯಿಗ್ಯಾಕಳಲ್ಲಾ....
ಮಗನ ಮೋಹಕ ಹಳಸಿದ ಕೂಳ ತಾಯಿ ತಿಂತಾಳಲ್ಲಾ...
ಅದನು ಯಾರಿಗೂ ಹೇಳಲಿಲ್ಲ......

ದುಡ್ಡು ಕೊಟ್ಟರ ಬೇಕಾದ್ದ ಸಿಗತೈತಿ ಈ ಜಗದಲಿ ಕಾಣೋ....
ಹಡೆದ ತಾಯಿಯನ್ನು ಕಳಕೊಂಡ ಮ್ಯಾಲ ಮತ್ತೆ ಸಿಗುವಳೇನೋ,
ತಮ್ಮಾ ಮರಳಿ ಬರುವಳೇನೋ, ತಮ್ಮಾ ಮರಳಿ ಬರುವಳೇನೋ.....

ಉಪವಾಸ, ವನವಾಸ ಹಣ್ಣಾದ ಮುದುಕಿ ಎಷ್ಟಂತ ಇರುತಾಳು....
ಹಸಿವು ತಾಳದೆ ಮತ್ತೊಬ್ಬರಲ್ಲಿ ಬೇಡಿ ತಿಂತಾಳು.... (೨)
ಇಷ್ಟೇ ಇದ್ದದ್ದು ಸೊಕ್ಕಿನ ಸೊಸೆಯು ದೊಡ್ಡದು ಮಾಡ್ಯಾಳು....
ಇಷ್ಟೇ ಇದ್ದದ್ದು ಸೊಕ್ಕಿನ ಸೊಸೆಯು ದೊಡ್ಡದು ಮಾಡ್ಯಾಳು....
ಅವಮಾನ ನಮಗಂತ ತನ್ನ ಮನೆಯಿಂದ ಹೊರಗ ಹಾಕ್ಯಾಳು...
ಮಗನಿಗ ಹೇಳಿದರ ನೋವು ಆ ಜೀವಕ, ಎಂದು ತಿಳಿದಾಳು...
ತಾಯಿ ನಿನ್ನಿಂದ ದೂರಾದ್ಳು....

ದುಡ್ಡು ಕೊಟ್ಟರ ಬೇಕಾದ್ದ ಸಿಗತೈತಿ ಈ ಜಗದಲಿ ಕಾಣೋ....
ಹಡೆದ ತಾಯಿಯನ್ನು ಕಳಕೊಂಡ ಮ್ಯಾಲ ಮತ್ತೆ ಸಿಗುವಳೇನೋ,
ತಮ್ಮಾ ಮರಳಿ ಬರುವಳೇನೋ, ತಮ್ಮಾ ಮರಳಿ ಬರುವಳೇನೋ.....

ಮಗ ಇದ್ದರೂ ಹಡೆದ ತಾಯಿ, ಪರದೇಶಿ ಆಗಿಹಳು....
ಅಲ್ಲಿ ಇಲ್ಲಿ ತಾ ಭಿಕ್ಷೇಯ ಬೇಡಿ, ದಿನಗಳ ಕಳೆದಾಳು... (೨)
ಬಂದ ನೋವುಗಳ ಸಹಿಸುತ ಮಗನ ಚಿಂತೆ ಮಾಡುತಾಳು...
ಕಣ್ಣು ಕಾಣಲಿಲ್ಲ, ಕಿವಿಯು ಕೇಳಲಿಲ್ಲ ಎಷ್ಟುದಿನ ಇರುತಾಳು...?
ನನ್ನ ಮಗನಿಗೆ ಚೆನ್ನಾಗಿ ಇಡು ಅಂತ ಮಾತನು ಬೇಡ್ಯಾಳು...
ತಾಯಿ ಬೀದ್ಯಾಗ ಸತ್ತಾಳು....

ದುಡ್ಡು ಕೊಟ್ಟರ ಬೇಕಾದ್ದ ಸಿಗತೈತಿ ಈ ಜಗದಲಿ ಕಾಣೋ....
ಹಡೆದ ತಾಯಿಯನ್ನು ಕಳಕೊಂಡ ಮ್ಯಾಲ ಮತ್ತೆ ಸಿಗುವಳೇನೋ,
ತಮ್ಮಾ ಮರಳಿ ಬರುವಳೇನೋ, ತಮ್ಮಾ ಮರಳಿ ಬರುವಳೇನೋ.....
ತಮ್ಮಾ ಮರಳಿ ಬರುವಳೇನೋ, ತಮ್ಮಾ ಮರಳಿ ಬರುವಳೇನೋ.....

Sunday, January 3, 2016

ಉಘೇ ಮಾತಮಲ್ಲಯ್ಯ.... ಉಘೇ ಮಾತಮಲ್ಲಯ್ಯ.... ಕೋಲುಮಂಡೆ ಜಂಗಮ ದೇವರು (ಜನುಮದ ಜೋಡಿ)

ಚಿತ್ರ : ಜನುಮದ ಜೋಡಿ (೧೯೯೬)
ಸಾಹಿತ್ಯ್ : ಪ್ರೋ || ದೊಡ್ಡ ರಂಗೇಗ್ವೌಡರು...
ಗಾಯಕರು : ಎಲ್.ಎನ್.ಶಾಸ್ತ್ರೀ... ಮತ್ತು ಸಂಗಡಿಗರು...

ಉಘೇ ಮಾತ್ಮಲ್ಲಯ್ಯ.....  ಉಘೇ ಮಾತ್ಮಲ್ಲಯ್ಯ.....
ಕೋಲು ಮಂಡೆ ಜಂಗುಮ ದೇವರು ಗುರುವೇ ಕ್ವಾರುಣ್ಯಕೆ ದಯಮಾಡೌವ್ರೇ....
ಕ್ವೋರಣ್ಯ ನೀಡವ್ವ ಕೋಡುಗಲ್ಲಮಾದೇವನಿಗೆ....
ಕ್ವೋರಣ್ಯ ನೀಡವ್ವ ಕೋಡುಗಲ್ಲಮಾದೇವನಿಗೆ....
ಕೊಡುವಾಗ್ಲೆಲ್ಲ ಕೊಡ್ತಾನೊ ನಮ್ಮಪ್ಪ ಶಿವ...ಆಹಾ!
ಅವನು ಒಲಿದರೆ ಕೊರಡು ಕೊನರಿ ಬಂಗಾರ ಬಾಳವ್ವ...ಹೌದು..
ಅಕ್ಕರೆ ಮಾತಾಡಿ ಭಿಕ್ಷೆ ಆಕವ್ವ ಅಂದೌವ್ನೆ ಮಾದೇವ.... ಮಾದೇವ
ಕ್ವೋರಣ್ಯ ನೀಡವ್ವ ಕೋಡುಗಲ್ಲಮಾದೇವನಿಗೆ...
ಕ್ವೋರಣ್ಯ ನೀಡವ್ವ ಕೋಡುಗಲ್ಲಮಾದೇವನಿಗೆ....
ತಾಯಿ ಅಂದ್ರೆ ತಾಯಿ ಆಗ್ಬೇಕಿಲ್ಲ ತಾಯಿ, ಆಹಾ!
ಲಗ್ನ ಆಗ್ದೇ ಇರೊ ಹೆಣ್ಮಗಳು ತಾಯಿ...ಹೌದು.. ಹೌದು..
ಭಿಕ್ಷೆ ನೀಡುದ್ರೆ ಬಾಳು ಬಂಗಾರ ತಾಯಿ...
ಬೈದ್ ದೂಡುದ್ರೆ ಬಾಳು ಬೂದ್ಗುಂಬಳಕಾಯಿ ಅಂದೌನೆ ಮಾದೇವಾ....
ಕ್ವೋರಣ್ಯ ನೀಡವ್ವ ಕೋಡುಗಲ್ಲಮಾದೇವನಿಗೆ....
ಕ್ವೋರಣ್ಯ ನೀಡವ್ವ ಕೋಡುಗಲ್ಲಮಾದೇವನಿಗೆ....
ಹುಡ್ಗಿ ಅಂದ್ರೆ ಚಿಕ್ಕ್ ಹುಡ್ಗಿ ಅಲ್ಲ ತಾಯಿ.... 
ಕಂಕಣ ಭಾಗ್ಯ ಬರೊ ಕನ್ಯಾಮಣಿ ತಾಯಿ.....
ಭಿಕ್ಷೆ ನೀಡುದ್ರೆ ಸಿರಿ ಸಿಂಗಾರ ತಾಯಿ...
ಬೈದ್ ದೂಡುದ್ರೆ ನಿಮ್ ಬಾಳು ಬೆಂಡೇಕಾಯಿ ಅಂದೌವ್ನೆ ಮಾದೇವಾ.....
ಕ್ವೋರಣ್ಯ ನೀಡವ್ವ ಕೋಡುಗಲ್ಲಮಾದೇವನಿಗೆ....
ಕ್ವೋರಣ್ಯ ನೀಡವ್ವ ಕೋಡುಗಲ್ಲಮಾದೇವನಿಗೆ.....

ಶುಭವಾಗುತೈತಮ್ಮೋ...  ಶುಭವಾಗುತೈತಮ್ಮೋ...
ಹೆತ್ತೌವ್ರ ಪುಣ್ಯವು ಗುಟ್ಟಾಗಿ ಬಂತಮ್ಮೋ....
ಮುತ್ತಂಥ ಭಾಗ್ಯವ ಬಾಗಿಲಿಗೆ ತಂತಮ್ಮೋ....
ದೇವರ ಗುಡ್ಡ ಬಂದು ಭಕ್ತಿಇಂದ ಶಿವನ ನೆನೆದು ಹಾಡಿ.... ಅಲ್ ಅಲ್ ಅಲ್ ಲೇ...
ಭೂದೇವಿ ಕೈಯ ಚಾಚಿ ಆಕಾಶಾನ ಮುಟ್ಟೋತಾವು ನೋಡಿ.....
ಮಾತಾಡ್ಯಾವೋ ಲಿಂಗ ಮಾತಾಡ್ಯಾವೋ.....
ಶರಣೆಂದಾವೋ ಬನವು ಶರಣೆಂದಾವೋ......

ಬನವೆಲ್ಲ ಹೂವಾದೋ, ಹೂವೆಲ್ಲ ಗಮ್ಮೆಂದೊ....
ಕೈ ಎತ್ತಿ ಕ್ವಾರುಣ್ಯ ಭಿಕ್ಷೆಯ ನೀಡೌವೋ....
ಮಾದೇವ್ನ ಮನಸಾರೆ ರಕ್ಷೆಯ ಕೇಳವ್ವೋ....
ನೆತ್ತಿಯ ಸೂರ್ಯ ಸ್ವಾಮಿ ಕತ್ಲೆ ಮನಗೆ ಓಗೊ ಒತ್ತು ಆಡು....ಅಲ್ ಅಲ್ ಅಲ್ ಲೇ...
ಚಿತ್ತಾವ ಗಟ್ಟಿ ಮಾಡಿ ಇತ್ತಾಗಿ ಕುಳಿತ್ರೆ ಮುತ್ತು ನೋಡೋ.....
ಮಾತಾಡ್ಯಾವೋ ಲಿಂಗ ಮಾತಾಡ್ಯಾವೋ....
ಶರಣೆಂದಾವೋ ಬನವು ಶರಣೆಂದಾವೋ.....

ಕಾದೋರ್ಗೆ ಕಾಣ್ತಾನೋ, ಕಂಡೋರ್ಗೆ ನೀಡ್ತಾನೋ.....
ಮುಂಗಾರ ಮಳೆಬರಲು ಸೋಗೆಯು ಕುಣಿದಾವೋ.....
ಬಾಯಾರಿ ನೆಲದೊಡಲ ಕಣಕಣವು ಮಣಿದಾವೋ....
ಕೋಡ್ಗಲ್ಲ ಗುಡ್ಡೆ ಮ್ಯಾಗೆ ಮಾದೇವ ಬಂದೆ ಬರುತಾನವ್ವೋ....ಅಲ್ ಅಲ್ ಅಲ್ ಲೇ...
ನಂಬಿದ ಭಕ್ತರಿಗೆಂದು ಪ್ರೀತಿಯ ಕೊಟ್ಟೆ ಕೊಡುತಾನವ್ವೋ.....
ಮಾತಾಡ್ಯಾವೋ ಲಿಂಗ ಮಾತಾಡ್ಯಾವೋ....
ಶರಣೆಂದಾವೋ ಬನವು ಶರಣೆಂದಾವೋ....
ಮಾತಾಡ್ಯಾವೋ ಲಿಂಗ ಮಾತಾಡ್ಯಾವೋ....
ಶರಣೆಂದಾವೋ ಬನವು ಶರಣೆಂದಾವೋ.....
ಮಾತಾಡ್ಯಾವೋ ಲಿಂಗ ಮಾತಾಡ್ಯಾವೋ....
ಶರಣೆಂದಾವೋ ಬನವು ಶರಣೆಂದಾವೋ.....
ಮಾತಾಡ್ಯಾವೋ ಲಿಂಗ ಮಾತಾಡ್ಯಾವೋ....
ಶರಣೆಂದಾವೋ ಬನವು ಶರಣೆಂದಾವೋ.....