Saturday, January 23, 2021

ಪ್ರೇಮದ ಹೂಗಾರ - ಚಿಕ್ಕೆಜಮಾನ್ರು

 ಸಾಹಿತ್ಯ : ಹಂಸಲೇಖ

ಗಾಯನ : ಎಸ್.ಪಿ. ಬಾಲಸುಬ್ರಹ್ಮಣ್ಯಂ

ಪ್ರೇಮದ ಹೂಗಾರ .... ಪ್ರೇಮದ ಹೂಗಾರ
ಪ್ರೇಮದ ಹೂಗಾರ ಈ ಹಾಡುಗಾರ

ಹೂ ನೀಡುತ್ತಾನೆ ಮುಳ್ಳು ಬೇಡುತ್ತಾನೆ..
ಬೆಲ್ಲದ ಬಣಕಾರ ಈ ಹಾಡುಗಾರ
ಸಿಹಿ ನೀಡುತ್ತಾನೆ ಕಹಿ ಬೇಡುತ್ತಾನೆ
ಮಣ್ಣಿನ ಮಮಕಾರ ತಂಪಿರುವ,
ಮಾನದ ಮಣಿಹಾರ ಹೊಂದಿರುವ ಈ ಭಾವ ಜೀವ...

ಪ್ರೇಮದ ಹೂಗಾರ ಈ ಹಾಡುಗಾರ
ಹೂ ನೀಡುತ್ತಾನೆ ಮುಳ್ಳು ಬೇಡುತ್ತಾನೆ..

ಗಂಧದ ಕೊರಳಾಗಿ ಸ್ವಂತಕ್ಕೆ ಬರಡಾಗಿ
ನೋವಿನಲೂ ತೇಯುವುದು ಈ ಒಡಲು
ಗಂಗೆಯು ತಾನಾಗಿ ನೀರಿಗೆ ಎರವಾಗಿ
ಸೇರುತಿದೆ ಕಂಬನಿಯ ಆ ಕಡಲು.... ಕರುಣೆಯ ಕುಂಬಾರ
ಕರುಣೆಯ ಕುಂಬಾರ ಈ ಹಾಡುಗಾರ
ಮಣ್ಣು ಬೇಡುತ್ತಾನೆ ಕೊಡ ನೀಡುತ್ತಾನೆ
ಮಮತೆಯ ಅಲೆಗಾರ ಈ ಹಾಡುಗಾರ
ಮನೆ ಮಾಡುತ್ತಾನೆ ಹೊರ ಹೋಗುತ್ತಾನೆ ..
ಗೋವಿನ ಹಾಲಂಥ ಮನಸಿರುವ
ಜೇನಂತ ಕೂಸಿನ ಮಾತಿರುವ  ಈ ಭಾವ ಜೀವಾ...

ಪ್ರೇಮದ ಹೂಗಾರ  ಈ ಹಾಡುಗಾರ
ಹೂ ನೀಡುತ್ತಾನೆ ಮುಳ್ಳು ಬೇಡುತ್ತಾನೆ

ನಿತ್ಯವೂ ತಾನುರಿದು ಲೋಕಕೆ ದಿನಗರೆದು
ಎಚ್ಚರಿಸೋ ಸೂರ್ಯನಿಗೆ ನಿದಿರೆಯಿಲ್ಲಾ
ರಾತ್ರಿಗೆ ತಾನುಳಿದು ತಾಪಕೆ ತಂಪೆರೆದು
ಸಂಚರಿಸೋ ಚಂದ್ರನಿಗೆ ಸ್ವಂತವಿಲ್ಲ
ಊರಿನ ಗೆಣೆಕಾರ...
ಊರಿನ ಗೆಣೆಕಾರ ಈ ಹಾಡುಗಾರ
ಕಾಪಾಡುತ್ತಾನೆ ಕಡೆಯಾಗುತ್ತಾನೆ
ಸತ್ಯದ ಹರಿಕಾರ ಈ ಹಾಡುಗಾರ
ಹೊರಡುತ್ತಾನೆ ಒಂಟಿಯಾಗುತ್ತಾನೆ
ಮಣ್ಣಿನ ಮಮಕಾರ ಕಂಪಿರುವ
ಮಾನದ ಮಣಿ ಹಾರ ಹೊಂದಿರುವಾ  ಈ ಭಾವ ಜೀವ

ಪ್ರೇಮದ ಹೂಗಾರ ಈ ಹಾಡುಗಾರ
ಹೂ ನೀಡುತ್ತಾನೆ ಮುಳ್ಳು ಬೇಡುತ್ತಾನೆ

Friday, August 31, 2018

ಭಾಗ್ಯದಾ ಲಕ್ಷ್ಮೀ ಬಾರಮ್ಮಾ.... ನಮ್ಮಮ್ಮಾ ನೀ, ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ....

ಚಿತ್ರ : ನೋಡಿ ಸ್ವಾಮಿ ನಾವಿರೋದು ಹೀಗೆ  (1986)
ಸಾಹಿತ್ಯ : ಪುರಂದರ ದಾಸರು
ಗಾಯಕರು : ಪಂಡಿತ ಭೀಮಸೇನ ಜೋಶಿ...
------------------------------------------
ಲಕ್ಷ್ಮೀ...ಲಕ್ಷ್ಮೀ...ಲಕ್ಷ್ಮೀ...ಬಾರಮ್ಮಾ....ಬಾರಮ್ಮಾ...ಬಾರಮ್ಮಾ
ಲಕ್ಷ್ಮೀ...ಬಾರಮ್ಮಾ.........
ಭಾಗ್ಯದಾ ಲಕ್ಷ್ಮೀ ಬಾರಮ್ಮಾ.... 
ನಮ್ಮಮ್ಮಾ ನೀ, ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ....
ನಮ್ಮಮ್ಮಾ ನೀ, ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ....

ಗೆಜ್ಜೆ ಕಾಲ್ಗಳ್ ಧ್ವನಿಯ ತೋರುತಾ, 
ಗೆಜ್ಜೆ ಕಾಲ್ಗಳ್ ಧ್ವನಿಯ ತೋರುತಾ, ಹೆಜ್ಜೆಯ ಮೇಲೆ ಹೆಜ್ಜೆಯ ನಿಕ್ಕುತ...
ಸಜ್ಜನ ಸಾಧು ಪೂಜೆಯ ವೇಳೆಗೆ, ಮಜ್ಜಿಗೆ ಓಳಗಿನ ಬೆಣ್ಣೆಯಂತೆ...
ಭಾಗ್ಯದಾ ಲಕ್ಷ್ಮೀ ಬಾರಮ್ಮಾ.... 
ನಮ್ಮಮ್ಮಾ ನೀ, ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ....
ನಮ್ಮಮ್ಮಾ ನೀ, ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ....

ಕನಕ ವೃಷ್ಟಿಯ ಕರೆಯುತ ಬಾರೆ,
ಕನಕ ವೃಷ್ಟಿಯ ಕರೆಯುತ ಬಾರೆ, ಮನಕಾಮನೇಯ ಸಿದ್ಧಿಯ ತೋರೆ...
ದಿನಕರ ಕೋಟಿ ತೇಜದಿ ಹೊಳೆಯುವ, ಜನಕ ರಾಯನ ಕುಮಾರಿ ಬೇಗಾ..
ಭಾಗ್ಯದಾ ಲಕ್ಷ್ಮೀ ಬಾರಮ್ಮಾ.... 
ನಮ್ಮಮ್ಮಾ ನೀ, ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ....
ನಮ್ಮಮ್ಮಾ ನೀ, ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ....

ಶಂಕೆ ಇಲ್ಲದಾ ಭಾಗ್ಯವ ಕೊಟ್ಟು, ಕಂಕಣ ಕೈಯ ತಿರುವುತ ಬಾರೆ...
ಶಂಕೆ ಇಲ್ಲದಾ ಭಾಗ್ಯವ ಕೊಟ್ಟು, ಕಂಕಣ ಕೈಯ ತಿರುವುತ ಬಾರೆ....
ಕುಂಕುಮಾರ್ಜಿತೆ ಪಂಕಜ ಲೋಚನೆ, ವೆಂಕಟ ರಮಣನ ಬಿಂಕದ ರಾಣಿ....
ಭಾಗ್ಯದಾ ಲಕ್ಷ್ಮೀ ಬಾರಮ್ಮಾ.... 
ನಮ್ಮಮ್ಮಾ ನೀ, ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ....
ನಮ್ಮಮ್ಮಾ ನೀ, ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ....

ಸಕ್ಕರೆ ತುಪ್ಪದ ಕಾಲುವೆ ಹರಿಸಿ,
ಸಕ್ಕರೆ ತುಪ್ಪದ ಕಾಲುವೆ ಹರಿಸಿ, ಶುಕ್ರವಾರದಾ ಪೂಜೆಯ ವೇಳೆಗೆ...
ಅಕ್ಕರೆಯುಳ್ಳ ಅರಗಿಣಿ ರಂಗನ, ಚೊಕ್ಕ ಪುರಂದರ ವಿಠಲನ ರಾಣಿ...
ವಿಠಲನ ರಾಣಿ...ವಿಠಲನ ರಾಣಿ...ವಿಠಲನ ರಾಣಿ...ವಿಠಲನ ರಾಣಿ...ಆ.......
ಭಾಗ್ಯದಾ ಲಕ್ಷ್ಮೀ ಬಾರಮ್ಮಾ.... 
ನಮ್ಮಮ್ಮಾ ನೀ, ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ....
ನಮ್ಮಮ್ಮಾ ನೀ, ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ....

ಲಕ್ಷ್ಮೀ ಬಾರಮ್ಮಾ.... 
ಲಕ್ಷ್ಮೀ...ಲಕ್ಷ್ಮೀ...ಲಕ್ಷ್ಮೀ...ಬಾರಮ್ಮಾ....ಬಾರಮ್ಮಾ...ಬಾರಮ್ಮಾ

ಚಿತ್ರ : ಗೋಪಿ ಕೃಷ್ಣ...(1992)....ಬಾಳಿನಲಿ ಒಂದೊಂದು ದಿನಕೊಂದು, ಬಣ್ಣದ ಬಣ್ಣದ ವೇಷ... ಬಣ್ಣದ ಬಣ್ಣದ ವೇಷ...

ಚಿತ್ರ : ಗೋಪಿ ಕೃಷ್ಣ...(1992)....
ಸಾಹಿತ್ಯ : ನಾದಬ್ರಹ್ಮ"ಹಂಸಲೇಖ"..
ಗಾಯಕರು : ಮನು ಮತ್ತು ಚಿತ್ರಾ...
---------------------------------------------------
ನಾಯಕರ ಓ ನಾಯಕ, ಚಾಲು ಇನ್ನು ಈ ನಾಟಕ...
ಸೂತ್ರ ನೀನೂ, ಪಾತ್ರ ನಾನೂ...

ಬಾಳಿನಲಿ ಒಂದೊಂದು ದಿನಕೊಂದು, 
ಬಣ್ಣದ ಬಣ್ಣದ ವೇಷ... ಬಣ್ಣದ ಬಣ್ಣದ ವೇಷ...
ಬದುಕಿನ ಅವಸರಾ, ಕೆಡಿಸಿದೆ ಹುಡುಗರಾ...ಆ..

ಬಾಳಿನಲಿ ಒಂದೊಂದು ದಿನಕೊಂದು,
ಬಣ್ಣದ ಬಣ್ಣದ ವೇಷ... ಬಣ್ಣದ ಬಣ್ಣದ ವೇಷ...
ಬದುಕಿನ ಅವಸರಾ, ಕೆಡಿಸಿದೆ ಹುಡುಗರಾ...ಆ..
ಬಾಳಿನಲಿ ಒಂದೊಂದು ದಿನಕೊಂದು,
ಬಣ್ಣದ ಬಣ್ಣದ ವೇಷ... ಬಣ್ಣದ ಬಣ್ಣದ ವೇಷ...

ನಾಯಕರ ಓ ನಾಯಕ, ಬೊಂಬೆಗಳ ಸಂಚಾಲಕ...
ಚಾಲು ಇನ್ನು ಈ ನಾಟಕ...
ಸೂತ್ರ ನೀನೂ, ಪಾತ್ರ ನಾನೂ...
ಸುಳ್ಳುಗಳ ಆದೇಶಿಸಿ, ವೀರರನು ಓಡಾಡಿಸಿ...
ಧರ್ಮಗಳ ಕಾಪಾಡಿಸೋ, 
ಸೂತ್ರ ನೀನೂ, ಪಾತ್ರ ನಾನೂ...
ಬಾಳಿನಲಿ ಒಂದೊಂದು ತಲೆಗೊಂದು, 
ತೀರದ ಭಾರದ ಚಿಂತೆ, ಭಾರದ ತೀರದ ಚಿಂತೆ...
ಬದುಕಿನ ಅವಸರ, ನುಡಿಸಿದೆ ಅಪಸ್ವರ...
ಬಾಳಿನಲಿ ಒಂದೊಂದು ವಿಷಯಕೂ, 
ದಿನವೂ ತಲೆಗೆ ಕೆರೆತ, ದುಡ್ಡಿಗೂ ಕಾಸಿಗೂ ಅಲೆತ, 
ಬದುಕಿನ ಅವಸರ, ಕುಣಿಸಿದೆ ಥರ ಥರ..‌.
ಬಣ್ಣದ ಬಣ್ಣದ ವೇಷ... ಬಣ್ಣದ ಬಣ್ಣದ ವೇಷಾ.‌..ಆ...

ಬಿಳಿಯ ದಾಡಿ ಚಂದಿರ, ಹುಡುಗಿಯರ ಈ ಮಂದಿರ...
ನೋಡಿ ಒಳಗೆ ಬಂದಿರಾ, ಯಾರು ಬೇಕೂ..? 
ಏನು ಬೇಕೂ..?

ಬಂಗಲೆಯ ಭಾಮಾಮಣಿ, ತಿಂಡಿಗಳ ನುಂಗೋ ಗಣಿ,
ಅರಗಿಣಿ ಓ ರೂಪಿಣಿ, ಕೆಲಸ ಬೇಕೂ... 
ಕಲಿಸ ಬೇಕೂ...

ಬಾಳಿನಲಿ ಒಂದೊಂದು ದಿನಕೊಂದು, 
ತರಲೆ ತಲೆಯ ನೋವು, ಯಾಕೆ ಬಂದ್ರೀ ನೀವೂ...
ಹಾಡಿನ ಮೇಷ್ಟರೇ, ಪುಣ್ಯ ನೀವ ಹೊರಟರೆ.‌‌‌‌..

ಬಾಳಿನಲಿ ಒಂದೊಂದು ದಿನಕೊಂದು,
ಬಣ್ಣದ ಬಣ್ಣದ ವೇಷ... ಬಣ್ಣದ ಬಣ್ಣದ ವೇಷಾ.‌..ಆ...
ಬದುಕಿನ ಅವಸರ, ಬಯಸಿದೆ ಕನಿಕರ...

ಬಾಳಿನಲಿ ಒಂದೊಂದು ದಿನಕೊಂದು,
ಬಣ್ಣದ ಬಣ್ಣದ ವೇಷ... ಬಣ್ಣದ ಬಣ್ಣದ ವೇಷಾ.‌..ಆ..

Saturday, August 4, 2018

ಜನುಮದಾ ಗೆಳತಿ, ಉಸಿರಿನಾ ಒಡತಿ... ಚಿತ್ರ: ಚೆಲುವಿನ ಚಿತ್ತಾರ (2007)

ಚಿತ್ರ: ಚೆಲುವಿನ ಚಿತ್ತಾರ (2007)
ಸಾಹಿತ್ಯ: ಎಸ್. ನಾರಾಯಣ್
ಗಾಯನ: ಚೇತನ್...
------------------------------------------
ಜನುಮದಾ ಗೆಳತಿ, ಉಸಿರಿನಾ ಒಡತಿ... 
ಮರೆತರೆ ನಿನ್ನ, ಮಡಿವೆನು ಚಿನ್ನ ...
ನನ್ನುಸಿರೇ... ನನ್ನುಸಿರೇ... 
ನನ್ನುಸಿರೇ... ನನ್ನುಸಿರೇ... 
ಜೊತೆಯಲಿರುವೆ ಎಂದು...

ಜನುಮದಾ ಗೆಳತಿ, ಉಸಿರಿನಾ ಒಡತಿ ...
ಮರೆತರೆ ನಿನ್ನ, ಮಡಿವೆನು ಚಿನ್ನ ...

ನೋವು ಇಲ್ಲದ ಜೀವನವೇ ಇಲ್ಲ, ಗೆಳತಿ...
ಕಂಬನಿ ಇಲ್ಲದ, ಕಂಗಳಿಲ್ಲಾ...
ದುಃಖ ಇಲ್ಲದ ಮನಸ್ಸು ಇಲ್ಲವೇ, ಬರಿ...
ಸುಖವ ಕಂಡ, ಮನುಜನಿಲ್ಲ ...
ನಮ್ ಪ್ರೀತಿ ಸಾಯೊದಿಲ್ಲ ...
ಅದಕ್ಕೆಂದು ಸೋಲೆ ಇಲ್ಲ...
ನನ್ನಾಣೆ ನಂಬು ನನ್ನ ಉಸಿರೆ...
ನನಗಾಗಿ ಜನಿಸಿದೆ ನೀನು, ನನ್ನೊಳಗೆ ನೆಲೆಸಿದೆ ನೀನು ...
ನಿನಗಾಗೆ ಬದುಕಿದೆ ನಾನು...
ನೀನನ್ನ ಅಗಲಿದಾಕ್ಷಣೆವೆ ನಾ, ನಿನಗಿಂತ ಮೊದಲೆ ಮಡಿವೆ ...

ತಂದೆಯ ತಾಯಿಯ ಬಿಟ್ಟು ಬಂದೆ, ನೀ ಗೆಳತಿ...
ಇಬ್ಬರ ಪ್ರೀತಿಯ, ನಾ ಕೊಡುವೆ...
ನನ್ನೆದೆ ಗೂಡಲಿ ಬಂದಿಸಿ ನಾ, ನಿನ್ನ ಗೆಳತಿ...
ಸಾವಿಗು ಅಂಜದೆ, ಎದೆಕೊಡುವೆ...
ಮಗುವಂತೆ ಲಾಲಿಸಲೇನು ...
ಮಡಿಲಲ್ಲಿ ತೂಗಿಸಲೇನು ...
ಬೆಳಂದಿಂಗಳ ಊಟ ಮಾಡಿಸಲೇನು...
ಕಣ್ಮುಚ್ಚಿ ಕುಳಿತರೆ ನೀನು, ಕಣ್ಣಾಗಿ ಇರುವೆ ನಾನು... 
ಕನಸಲ್ಲು ಕಾವಲಿರುವೆ...
ಕಣ್ಣೀರು ಬಂದರಿಲ್ಲಿ ಕಣ್ಮರೆಯಾಗುವೆ ನಾ, 
ನನಗೆ ನೀನೆ ಉಸಿರು...

ಜನುಮದಾ ಗೆಳತಿ, ಉಸಿರಿನಾ ಒಡತಿ... 
ಮರೆತರೆ ನಿನ್ನ, ಮಡಿವೆನು ಚಿನ್ನ ...
ನನ್ನುಸಿರೇ... ನನ್ನುಸಿರೇ... 
ನನ್ನುಸಿರೇ... ನನ್ನುಸಿರೇ... 
ಜೊತೆಯಲಿರುವೆ ಎಂದು...

Friday, August 3, 2018

ಜಯ ಜನಾರ್ಧನ ಕೃಷ್ಣ ರಾಧಿಕಾಪತೇ....

ರಚನೆ : ಶ್ರೀ ಬ್ರಹ್ಮಾನಂದ ಗುರೂಜಿ...
ಗಾಯನ : ಕುಮಾರಿ: ಗೌತಮಿ ಮೂರ್ತಿ...
----------------------------------------
ಜಯ ಜನಾರ್ಧನ ಕೃಷ್ಣ ರಾಧಿಕಾಪತೇ
ಜನ ವಿಮೋಚನ ಕೃಷ್ಣ ಜನ್ಮ ಮೋಚನ
ಗರುಡ ವಾಹನ ಕೃಷ್ಣ ಗೋಪಿಕಾ ಪತೇ
ನಯನ ಮೋಹನ ಕೃಷ್ಣ ನೀರಜೇಕ್ಷಣ

ಸುಜನ ಬಾಂಧವ ಕೃಷ್ಣ ಸುಂದರ ಕೃತೆ
ಮದನ ಕೋಮಲ ಕೃಷ್ಣ ಮಾಧವ ಹರೇ
ವಸುಮತಿ ಪತೇ ಕೃಷ್ಣ ವಾಸವಾನುಜ
ವರಗುಣಾಕರ ಕೃಷ್ಣ ವೈಷ್ಣವಾಕೃತೆ

ಸುರಚಿರಾನನ ಕೃಷ್ಣ ಶೌರ್ಯವಾರಿಧೆ
ಮುರಹರ ವಿಭೋ ಕೃಷ್ಣ ಮುಕ್ತಿದಾಯಕ
ವಿಮಲಪಾಲಕ ಕೃಷ್ಣ ವಲ್ಲಭಿಪತೆ
ಕಮಲಲೋಚನಾ ಕೃಷ್ಣ ಕಾಮ್ಯದಾಯಕ

ವಿಮಾಲಗಾತ್ರನೇ ಕೃಷ್ಣ ಭಕ್ತವತ್ಸಲ
ಚರಣ ಪಲ್ಲವಂ ಕೃಷ್ಣ ಕರುಣ ಕೋಮಲಮ್
ಕುವಲೈಕ್ಷಣ ಕೃಷ್ಣ ಕೋಮಲಾಕೃತೆ
ತವ ಪದಾಮ್ಬುಜಂ ಕೃಷ್ಣ ಶರಣಾಮಾಶ್ರಯೆ

ಭುವನ ನಾಯಕ ಕೃಷ್ಣ ಪಾವನಾಕೃತೆ
ಗುಣಗಣೋಜ್ವಲಾ ಕೃಷ್ಣ ನಳಿನಲೋಚನ 
ಪ್ರಣಯವಾರಿಧೆ ಕೃಷ್ಣ ಗುಣಗಣಾಕರ
ದಾಮಸೋದರ ಕೃಷ್ಣ ದೀನ ವತ್ಸಲ

ಕಾಮಸುಂದರ ಕೃಷ್ಣ ಪಾಹಿ ಸರ್ವಾದಾ
ನರಕನಾಶನ ಕೃಷ್ಣ ನರಸಹಾಯಕ
ದೇವಕಿಸುತ ಕೃಷ್ಣ ಕಾರುಣ್ಯಾಂಭುದೇ
ಕಂಸಾನಾಶನ ಕೃಷ್ಣ ದ್ವಾರಕಾಸ್ಥಿತ 

ಪಾವನಾತ್ಮಕ ಕೃಷ್ಣ ದೇಹಿ ಮಂಗಳಂ
ತ್ವತ್ ಪದಾಮ್ಬುಜಂ ಕೃಷ್ಣ ಶ್ಯಾಮ ಕೋಮಲಮ್
ಭಕ್ತವತ್ಸಲ ಕೃಷ್ಣ ಕಾಮ್ಯದಾಯಕ
ಪಾಲಿಸೆನ್ನನೂ ಕೃಷ್ಣ ಶ್ರೀಹರಿ ನಮೋ

ಭಕ್ತದಾಸ ನಾ ಕೃಷ್ಣ ಹರಸು ನೀ ಸದಾ
ಕಾದು ನಿಂತೇನಾ ಕೃಷ್ಣ ಸಲಹೆಯಾ ವಿಭೋ
ಗರುಡ ವಾಹನ ಕೃಷ್ಣ ಗೋಪಿಕಾ ಪತೇ
ನಯನ ಮೋಹನ ಕೃಷ್ಣ ನೀರಜೇಕ್ಷಣ

Wednesday, August 1, 2018

ಚಿತ್ರ : ಒಂದೇ ಬಳ್ಳಿಯ ಹೂಗಳು...(1967)
ಸಾಹಿತ್ಯ : ಗೀತಪ್ರಿಯ...
ಗಾಯಕರು : ಮೊಹಮ್ಮದ ರಫಿ...
----------------------------------------------
ನೀನೆಲ್ಲಿ ನಡೆವೆ ದೂರ, ಎಲ್ಲೆಲ್ಲೂ ಲೋಕವೇ.....
ಈ ಲೋಕವೆಲ್ಲ ಘೋರ, ಎಲ್ಲೆಲ್ಲೂ ಶೋಕವೇ.....
ನೀನೆಲ್ಲಿ ನಡೆವೆ ದೂರ, ಎಲ್ಲೆಲ್ಲೂ ಲೋಕವೇ.....
ಈ ಲೋಕವೆಲ್ಲ ಘೋರ, ಎಲ್ಲೆಲ್ಲೂ ಶೋಕವೇ.....
ನೀನೆಲ್ಲಿ ನಡೆವೆ ದೂರ..............

ನಗುವಾಗ ಎಲ್ಲ ನೆಂಟರು, ಅಳುವಾಗ ಯಾರು ಇಲ್ಲಾ....
ನಗುವಾಗ ಎಲ್ಲ ನೆಂಟರು, ಅಳುವಾಗ ಯಾರು ಇಲ್ಲಾ....
ಮುಳ್ಳಲ್ಲಿ ನಿನ್ನ ನಡೆಸಿ, ನಲಿವಾ ನಗುವೆ ವಿಕಾರ.....
ನೀನೆಲ್ಲಿ ನಡೆವೆ ದೂರ, ಎಲ್ಲೆಲ್ಲೂ ಲೋಕವೇ.....
ಈ ಲೋಕವೆಲ್ಲ ಘೋರ, ಎಲ್ಲೆಲ್ಲೂ ಶೋಕವೇ.....
ನೀನೆಲ್ಲಿ ನಡೆವೆ ದೂರ..............

ನೆರಳನ್ನು ನೀಡುವಂತಹ, ಮರವನ್ನೇ ಕಡಿವರೆಲ್ಲ.....
ನೆರಳನ್ನು ನೀಡುವಂತಹ, ಮರವನ್ನೇ ಕಡಿವರೆಲ್ಲ.....
ನಿಸ್ವಾರ್ಥ ಜೀವಿಗಳಿಗೆ, ಜಗದೆ ಕಹಿಯೇ ಅಪಾರ.....
ನೀನೆಲ್ಲಿ ನಡೆವೆ ದೂರ, ಎಲ್ಲೆಲ್ಲೂ ಲೋಕವೇ.....
ಈ ಲೋಕವೆಲ್ಲ ಘೋರ, ಎಲ್ಲೆಲ್ಲೂ ಶೋಕವೇ.....
ನೀನೆಲ್ಲಿ ನಡೆವೆ ದೂರ..............

ಅಪಕಾರವನ್ನೇ ಕಾಣುವೆ, ಉಪಕಾರವನ್ನು ಕಾಣೆ.....
ಅಪಕಾರವನ್ನೇ ಕಾಣುವೆ, ಉಪಕಾರವನ್ನು ಕಾಣೆ.....
ಅನುರಾಗವಿಲ್ಲಿ ಇಲ್ಲವೇ, ಮನದೆ ಇದುವೆ ವಿಚಾರ.....
ನೀನೆಲ್ಲಿ ನಡೆವೆ ದೂರ, ಎಲ್ಲೆಲ್ಲೂ ಲೋಕವೇ.....
ಈ ಲೋಕವೆಲ್ಲ ಘೋರ, ಎಲ್ಲೆಲ್ಲೂ ಶೋಕವೇ.....
ನೀನೆಲ್ಲಿ ನಡೆವೆ ದೂರ..............

Monday, July 30, 2018

ದುಡ್ಡು ಕೊಟ್ಟರ ಬೇಕಾದ್ದ ಸಿಗತೈತಿ ಈ ಜಗದಲಿ ಕಾಣೋ.... (ಜಾನಪದ ಗೀತೆ)

ದುಡ್ಡು ಕೊಟ್ಟರ ಬೇಕಾದ್ದ ಸಿಗತೈತಿ ಈ ಜಗದಲಿ ಕಾಣೋ.... 
(ಜಾನಪದ ಗೀತೆ)
ಗಾಯಕರು : ಗುರುರಾಜ್ ಹೊಸಕೋಟೆ...
----------------------------------
ದುಡ್ಡು ಕೊಟ್ಟರ ಬೇಕಾದ್ದ ಸಿಗತೈತಿ ಈ ಜಗದಲಿ ಕಾಣೋ....
ಹಡೆದ ತಾಯಿಯನ್ನು ಕಳಕೊಂಡ ಮ್ಯಾಲ ಮತ್ತೆ ಸಿಗುವಳೇನೋ,
ತಮ್ಮಾ ಮರಳಿ ಬರುವಳೇನೋ, ತಮ್ಮಾ ಮರಳಿ ಬರುವಳೇನೋ..... (2)

ಒಂಬ್ಬತ್ತು ತಿಂಗಳ ಸಂಕಟ ನೀಡಿ ಹೊಟ್ಯಾಗ ಬೆಳದೆಲ್ಲೋ.....
ಹುಟ್ಟಿ ಬರುವ ಮುನ್ನ ಜೀವಕ್ಕ ಎಷ್ಟೋ ಕಷ್ಟ ಕೊಟ್ಟಿಯಲ್ಲೋ... (2)
ಬರುವ ಕಷ್ಟಗಳ ಸಹಿಸಿದ ತಾಯಿ, ನಿನ್ನ ನಂಬಿತಲ್ಲೋ...
ಬರುವ ಕಷ್ಟಗಳ ಸಹಿಸಿದ ತಾಯಿ, ನಿನ್ನ ನಂಬಿತಲ್ಲೋ...
ತಾನು ಕರಗಿ ನಿನ್ನ ಕೋಣ ಬೆಳಸಿದಂಗ ಬೆಳಸಿ ಬಿಟ್ಟಳಲ್ಲೋ...
ಒಬ್ಬ ಮಗಾ ನೀ ಆಸರಾದಿಯಂತ, ತಾಯಿ ತಿಳಿದಿತ್ತಲ್ಲೋ,
ಜೀವ ಇಟ್ಟಿತ್ತ ನಿನ್ನ ಮ್ಯಾಲೋ...

ದುಡ್ಡು ಕೊಟ್ಟರ ಬೇಕಾದ್ದ ಸಿಗತೈತಿ ಈ ಜಗದಲಿ ಕಾಣೋ....
ಹಡೆದ ತಾಯಿಯನ್ನು ಕಳಕೊಂಡ ಮ್ಯಾಲ ಮತ್ತೆ ಸಿಗುವಳೇನೋ,
ತಮ್ಮಾ ಮರಳಿ ಬರುವಳೇನೋ, ತಮ್ಮಾ ಮರಳಿ ಬರುವಳೇನೋ..... 

ಕೂಲಿ ನಾಲಿ ಮಾಡಿ ಶಾಲೆ ಕಲಿಸಿದಳು, ಜಾಣ ನಾಗಲೆಂತ....
ಚಿನ್ನದಂತ ಒಂದು ಹೆಣ್ಣ ನೋಡ್ಯಾಳು, ನಿನ್ನ ಮದುವಿಗಂತ.... (2)
ಸಾಲ ಶೂಲ ಮಾಡಿ ಮದುವೆ ಮಾಡಿದಳು, ಬಳ್ಳಿ ಹಬ್ಬಲೆಂತ....
ಸಾಲ ಶೂಲ ಮಾಡಿ ಮದುವೆ ಮಾಡಿದಳು, ಬಳ್ಳಿ ಹಬ್ಬಲೆಂತ....
ಮೊಮ್ಮಕ್ಕಳನು ಎತ್ತಿ ಆಡಿಸುವ ಚಿಂತಿ ಒಳಗ ಇತ್ತ...
ಮುಪ್ಪಿನ ತಾಯಿ ಏನೇನೋ ಕನಸ ಕಟಗೊಂಡ ಕುಂತಿತ್ತ...
ಕನಸು ಕನಸಾಗೇ ಉಳಿತ.......

ದುಡ್ಡು ಕೊಟ್ಟರ ಬೇಕಾದ್ದ ಸಿಗತೈತಿ ಈ ಜಗದಲಿ ಕಾಣೋ....
ಹಡೆದ ತಾಯಿಯನ್ನು ಕಳಕೊಂಡ ಮ್ಯಾಲ ಮತ್ತೆ ಸಿಗುವಳೇನೋ,
ತಮ್ಮಾ ಮರಳಿ ಬರುವಳೇನೋ, ತಮ್ಮಾ ಮರಳಿ ಬರುವಳೇನೋ..... 

ಮಗಳಿಗಿಂತ ಹೆಚ್ಚಿನ ಪ್ರೀತಿಲಿ ಸೊಸಿನ ಕಂಡಳ್ಳಲ್ಲ...
ಸೊಕ್ಕಿನ ಸೊಸೆಯು ತಾಯಿಯ ಹಂಗ ನೋಡಿಕೊಳ್ಳಲಿಲ್ಲಾ... (2)
ಸೋತ ಶರೀರಕ ಸುಖ ಎಂಬುವುದು ಈ ಸೊಸಿಯು ನೀಡಲಿಲ್ಲಾ...
ಸೋತ ಶರೀರಕ ಸುಖ ಎಂಬುವುದು ಈ ಸೊಸಿಯು ನೀಡಲಿಲ್ಲಾ...
ಉಂಡು ಬಿಟ್ಟಿರಿವು ಎಂಜಲ ಕೂಳ ತಾಯಿಗ್ಯಾಕಳಲ್ಲಾ....
ಮಗನ ಮೋಹಕ ಹಳಸಿದ ಕೂಳ ತಾಯಿ ತಿಂತಾಳಲ್ಲಾ...
ಅದನು ಯಾರಿಗೂ ಹೇಳಲಿಲ್ಲ......

ದುಡ್ಡು ಕೊಟ್ಟರ ಬೇಕಾದ್ದ ಸಿಗತೈತಿ ಈ ಜಗದಲಿ ಕಾಣೋ....
ಹಡೆದ ತಾಯಿಯನ್ನು ಕಳಕೊಂಡ ಮ್ಯಾಲ ಮತ್ತೆ ಸಿಗುವಳೇನೋ,
ತಮ್ಮಾ ಮರಳಿ ಬರುವಳೇನೋ, ತಮ್ಮಾ ಮರಳಿ ಬರುವಳೇನೋ..... 

ಉಪವಾಸ, ವನವಾಸ ಹಣ್ಣಾದ ಮುದುಕಿ ಎಷ್ಟಂತ ಇರುತಾಳು....
ಹಸಿವು ತಾಳದೆ ಮತ್ತೊಬ್ಬರಲ್ಲಿ ಬೇಡಿ ತಿಂತಾಳು.... (2)
ಇಷ್ಟೇ ಇದ್ದದ್ದು ಸೊಕ್ಕಿನ ಸೊಸೆಯು ದೊಡ್ಡದು ಮಾಡ್ಯಾಳು....
ಇಷ್ಟೇ ಇದ್ದದ್ದು ಸೊಕ್ಕಿನ ಸೊಸೆಯು ದೊಡ್ಡದು ಮಾಡ್ಯಾಳು....
ಅವಮಾನ ನಮಗಂತ ತನ್ನ ಮನೆಯಿಂದ ಹೊರಗ ಹಾಕ್ಯಾಳು...
ಮಗನಿಗ ಹೇಳಿದರ ನೋವು ಆ ಜೀವಕ, ಎಂದು ತಿಳಿದಾಳು...
ತಾಯಿ ನಿನ್ನಿಂದ ದೂರಾದ್ಳು....

ದುಡ್ಡು ಕೊಟ್ಟರ ಬೇಕಾದ್ದ ಸಿಗತೈತಿ ಈ ಜಗದಲಿ ಕಾಣೋ....
ಹಡೆದ ತಾಯಿಯನ್ನು ಕಳಕೊಂಡ ಮ್ಯಾಲ ಮತ್ತೆ ಸಿಗುವಳೇನೋ,
ತಮ್ಮಾ ಮರಳಿ ಬರುವಳೇನೋ, ತಮ್ಮಾ ಮರಳಿ ಬರುವಳೇನೋ..... 

ಮಗ ಇದ್ದರೂ ಹಡೆದ ತಾಯಿ, ಪರದೇಶಿ ಆಗಿಹಳು....
ಅಲ್ಲಿ ಇಲ್ಲಿ ತಾ ಭಿಕ್ಷೇಯ ಬೇಡಿ, ದಿನಗಳ ಕಳೆದಾಳು... (2)
ಬಂದ ನೋವುಗಳ ಸಹಿಸುತ ಮಗನ ಚಿಂತೆ ಮಾಡುತಾಳು...
ಕಣ್ಣು ಕಾಣಲಿಲ್ಲ, ಕಿವಿಯು ಕೇಳಲಿಲ್ಲ ಎಷ್ಟುದಿನ ಇರುತಾಳು...?
ನನ್ನ ಮಗನಿಗೆ ಚೆನ್ನಾಗಿ ಇಡು ಅಂತ ಮಾತನು ಬೇಡ್ಯಾಳು...
ತಾಯಿ ಬೀದ್ಯಾಗ ಸತ್ತಾಳು....

ದುಡ್ಡು ಕೊಟ್ಟರ ಬೇಕಾದ್ದ ಸಿಗತೈತಿ ಈ ಜಗದಲಿ ಕಾಣೋ....
ಹಡೆದ ತಾಯಿಯನ್ನು ಕಳಕೊಂಡ ಮ್ಯಾಲ ಮತ್ತೆ ಸಿಗುವಳೇನೋ,
ತಮ್ಮಾ ಮರಳಿ ಬರುವಳೇನೋ, ತಮ್ಮಾ ಮರಳಿ ಬರುವಳೇನೋ..... 
ತಮ್ಮಾ ಮರಳಿ ಬರುವಳೇನೋ, ತಮ್ಮಾ ಮರಳಿ ಬರುವಳೇನೋ.....

Saturday, July 28, 2018

ಹುಟ್ಟೋದ್ಯಾಕೆ? ಸಾಯೋದ್ಯಾಕೆ? ಏನಾದರು ಸಾಧಿಸಿ ಹೋಗೊಕೆ... ಚಿತ್ರ : ಶಾಂತಿ ಕ್ರಾಂತಿ (1991)

ಚಿತ್ರ : ಶಾಂತಿ ಕ್ರಾಂತಿ (1991)
ಸಾಹಿತ್ಯ : ನಾದಬ್ರಹ್ಮ "ಹಂಸಲೇಖ"...
ಗಾಯಕರು : ಎಸ್.ಜಾನಕಿ...
------------------------------------------
ಆ....ಆ....ಆ...

ಹುಟ್ಟೋದ್ಯಾಕೆ? ಸಾಯೋದ್ಯಾಕೆ? 
ಏನಾದರು ಸಾಧಿಸಿ ಹೋಗೊಕೆ...
ಹೋ ಓ ಹೋ ಓ ಹೋ ಓ...
ಅಳ್ಯೋದ್ಯಾಕೆ? ನಗೋದ್ಯಾಕೆ? 
ಹೇಗಾದರು ನೋವನು ಮರೆಯೋಕೆ...
ಹೋ ಓ ಹೋ ಓ ಹೋ ಓ...
ಒಳ್ಳೆ ಜನರು ಭೂಮಿ ಮೇಲೆ ಪ್ರತಿ ದಿನವೂ ಹುಟ್ಟೋದಿಲ್ಲ...
ಹೋರಾಡೋರು ಸದಾ ಕಾಲ ಸತ್ತವರಂತೆ ಬಾಳೋದಿಲ್ಲ...
ಒಳ್ಳೆಯ ತನಕೆ ಹೋರಾಡೋಣ, ವೀರರ ಹೆಸರಿನಂತೆ ಬಾಳೋಣ...
ಕ್ರಾಂತಿಯ ಬೇಲಿಯನು ಹಾಕೋಣ, ಶಾಂತಿಯ ಹೂಗಳನು ಬೇಳಸೋಣ...

ಹುಟ್ಟೋದ್ಯಾಕೆ? ಸಾಯೋದ್ಯಾಕೆ? 
ಏನಾದರು ಸಾಧಿಸಿ ಹೋಗೊಕೆ...
ಹೋ ಓ ಹೋ ಓ ಹೋ ಓ...

ಲಾಲಲಾ...ಆಆಆ...ಓಓಓ...ಓಓಓ...ಲಲಲಲಾ...ಲಲಲಾಲಲಲ

ಬರೀ ಬೆತ್ತಲೆ ಜನರ ನಡುವೆ, ಬಟ್ಟೆ ತೊಟ್ಟರೆ ಮನ್ನಣೆ ಇಲ್ಲ...
ಮಾನವರೆಲ್ಲ ದಾನವರಾಗಿ, ಪ್ರೇಮವ ಕೊಂದರೆ ಶಿಕ್ಷೆಯೇ ಇಲ್ಲ...
ಧರ್ಮವು ಸಣ್ಣಗೆ ಆಕಳಿಸಿದರೆ, ಕಾವಲುಗಾರನೇ ಸೆರೆಮನೆಗೆ...
ಒಳ್ಳೆಯ ತನವು ತೂಕಡಿಸಿದರೆ, ದೋಚುವ ಚೋರನು ಅರಮನೆಗೆ...

ಹುಟ್ಟೋದ್ಯಾಕೆ? ಸಾಯೋದ್ಯಾಕೆ? 
ಏನಾದರು ಸಾಧಿಸಿ ಹೋಗೊಕೆ...
ಅಳ್ಯೋದ್ಯಾಕೆ? ನಗೋದ್ಯಾಕೆ? 
ಹೇಗಾದರು ನೋವನು ಮರೆಯೋಕೆ...